ಯುಪಿಎಸ್ಸಿ ಟಾಪರ್ ನಂದಿನಿ ಅಂಕ ಶೇ.55.3
Team Udayavani, Jun 6, 2017, 3:45 AM IST
ನವದೆಹಲಿ: ಕೇಂದ್ರ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಟಾಪರ್ ಆಗಿ ಹೊರಹೊಮ್ಮಿರುವ ಕರ್ನಾಟಕದ ನಂದಿನಿ ಕೆ.ಆರ್ ಅವರು ಪಡೆದ ಅಂಕಗಳು ಎಷ್ಟೆಂಬುದು ಬಹಿರಂಗವಾಗಿದೆ. ನಂದಿನಿ ಅವರು ಶೇ.55.3 ಅಂಕಗಳನ್ನು ಪಡೆಯುವ ಮೂಲಕ ಅಗ್ರ ಶ್ರೇಯಾಂಕ ಗಳಿಸಿದ್ದಾರೆ ಎಂದು ಯುಪಿಎಸ್ಸಿ ತಿಳಿಸಿದೆ.
ಒಟ್ಟು 2,025 ಅಂಕಗಳ ಪೈಕಿ ನಂದಿನಿ 1,120 ಅಂಕಗಳನ್ನು (ಮೈನ್ನಲ್ಲಿ 927 ಮತ್ತು ಸಂದರ್ಶನದಲ್ಲಿ 193) ಪಡೆದು ಪ್ರಥಮ ಸ್ಥಾನ ಗಳಿಸಿದ್ದಾರೆ. ಎರಡನೇ ಸ್ಥಾನ ಪಡೆದ ಅನ್ಮೋಲ್ ಶೇರ್ ಸಿಂಗ್ ಬೇಡಿ 1,105 (ಶೇ.54.56) ಹಾಗೂ ಮೂರನೇ ಸ್ಥಾನ ಪಡೆದ ಗೋಪಾಲಕೃಷ್ಣ ರೋನಂಕಿ 1,101(ಶೇ.54.37) ಅಂಕಗಳನ್ನು ಪಡೆದಿದ್ದಾರೆ ಎಂದು ಯುಪಿಎಸ್ಸಿ ತಿಳಿಸಿದೆ. ಕಳೆದ ವರ್ಷದ ಯುಪಿಎಸ್ಸಿ ಪರೀಕ್ಷೆಯಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದ ಟೀನಾ ಡಾಬಿ ಒಟ್ಟು 1,063 ಅಂಕಗಳನ್ನು (ಶೇ.52.49) ಗಳಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಾಂದ್ರಾ- ವರ್ಲಿ ಸೀ ಲಿಂಕ್ಗೆ 25,000 ಟನ್ ಗರ್ಡರ್ ಅಳವಡಿಕೆ
Telangana: ಪಿಯು ಫಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ