ವಿಜಯ ಮಲ್ಯ ಗಡೀಪಾರು


Team Udayavani, Dec 11, 2018, 6:00 AM IST

d-123.jpg

ಲಂಡನ್‌/ಹೊಸದಿಲ್ಲಿ: ಯುಪಿಎ ಅವಧಿಯಲ್ಲಿ ಬ್ಯಾಂಕ್‌ಗಳಿಗೆ 9 ಸಾವಿರ ಕೋಟಿ ರೂ. ವಂಚಿಸಿ ಪರಾರಿಯಾದ ಉದ್ಯಮಿ ವಿಜಯ ಮಲ್ಯರನ್ನು ಗಡೀಪಾರು ಮಾಡುವಂತೆ ಲಂಡನ್‌ನ ವೆಸ್ಟ್‌ಮಿನಿಸ್ಟರ್‌ ಕೋರ್ಟ್‌ ಸೋಮವಾರ ಆದೇಶ ಹೊರಡಿಸಿದೆ. 2019ರ ಲೋಕಸಭೆ ಚುನಾವಣೆ ಹೊಸ್ತಿಲಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಸರಕಾರಕ್ಕೆ ಇದೊಂದು ಮಹತ್ವದ ರಾಜತಾಂತ್ರಿಕ ವಿಜಯವೇ ಆಗಿದೆ.  “ಮಲ್ಯ ವಿರುದ್ಧ ಸುಳ್ಳು ಕೇಸು ದಾಖಲಿಸಿದ ಯಾವುದೇ ಅಂಶಗಳು ಕಂಡುಬರುತ್ತಿಲ್ಲ. ಅವರ ವ್ಯವಹಾರದಲ್ಲಿ ಪ್ರಶ್ನಾರ್ಹ ಅಂಶವಿದೆ’ ಎಂದು ವೆಸ್ಟ್‌ಮಿನಿಸ್ಟರ್‌ ಕೋರ್ಟ್‌ ನ್ಯಾಯಾಧೀಶೆ ಎಮ್ಮಾ ಆರ್ಬತೊಟ್‌ ತಮ್ಮ ತೀರ್ಪಿನಲ್ಲಿ ಪ್ರಸ್ತಾವ ಮಾಡಿದ್ದಾರೆ. ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಮಲ್ಯಗೆ 14 ದಿನಗಳ ಅವಕಾಶವಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ, “ಭಾರತಕ್ಕೆ ಅತ್ಯಂತ ದೊಡ್ಡ ದಿನ. ಯುಪಿಎ ಅವಧಿಯಲ್ಲಿ ಲಾಭ ಪಡೆದು ಪರಾರಿ ಯಾಗಿದ್ದ ವ್ಯಕ್ತಿಯನ್ನು ಎನ್‌ಡಿಎ ವಾಪಸ್‌ ತರುತ್ತಿದೆ’ ಎಂದು ಟ್ವೀಟ್‌ ಮಾಡಿ ಬಣ್ಣಿಸಿದ್ದಾರೆ. ಕೇಂದ್ರ ತನಿಖಾ ಸಂಸ್ಥೆ ಸಿಬಿಐ ಕೂಡ ತೀರ್ಪನ್ನು ಸ್ವಾಗತಿಸಿದೆ.

ಕೋರ್ಟ್‌ ತೀರ್ಪು
2016ರಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ವಂಚಿಸಿ ಲಂಡನ್‌ಗೆ ಮಲ್ಯ ಪರಾರಿಯಾದ ಬಳಿಕ ಮೋದಿ ನೇತೃತ್ವದ ಸರಕಾರದ ವಿರುದ್ಧ ಪ್ರತಿಪಕ್ಷಗಳು ನಡೆಸುತ್ತಿದ್ದ ನಿರಂತರ ಟೀಕಾ ಪ್ರಹಾರಕ್ಕೆ ಸೋಮವಾರ ಪೂರ್ಣ ವಿರಾಮ ಸಿಕ್ಕಿದಂತಾಗಿದೆ. ಸಿಬಿಐ, ಇತರ ತನಿಖಾ ಸಂಸ್ಥೆಗಳು, ಖುದ್ದು ಪ್ರಧಾನಿ ನರೇಂದ್ರ ಮೋದಿ ಹಲವು ಹಂತದಲ್ಲಿ ಬ್ರಿಟನ್‌ ಸರಕಾರದ ಜತೆ ಮಾತುಕತೆ ನಡೆಸಿದ್ದು ಪರಿಣಾಮ ಬೀರಿದೆ.

ವೆಸ್ಟ್‌ಮಿನಿಸ್ಟರ್‌ನಲ್ಲಿರುವ ಮ್ಯಾಜಿಸ್ಟ್ರೇಟ್‌ ಕೋರ್ಟ್‌ನ ನ್ಯಾಯಾಧೀಶೆ ತೀರ್ಪು ನೀಡಿ, ಮಲ್ಯ ಪ್ರತಿಪಾದಿಸಿದ್ದಂತೆ ಭಾರತದ ಅಧಿಕಾರಿಗಳು ಪೂರ್ವಗ್ರಹ ಪೀಡಿತರಾಗಿ ಅವರ ಮೇಲೆ ಕೇಸು ದಾಖಲಿಸಿಲ್ಲ. ಎಲ್ಲ ಸಾಕ್ಷ್ಯಗಳನ್ನು ಪರಿಶೀಲಿಸಲಾಗಿದೆ ಎಂದು 62 ಪುಟಗಳ ತೀರ್ಪಿನಲ್ಲಿ ಉಲ್ಲೇಖೀಸಿದ್ದಾರೆ. ಮಲ್ಯರ ಸಂಸ್ಥೆಗೆ ಯಾವ ರೀತಿಯಲ್ಲಿ ಸಾಲ ನೀಡ ಲಾಯಿತು ಮತ್ತು ಅದರ ಉಪಯೋಗ ಯಾವ ರೀತಿ ನಡೆಯಿತು ಎಂಬುದೇ ಪ್ರಶ್ನಾರ್ಹ ಎಂದು ಎಮ್ಮಾ ಅಭಿಪ್ರಾಯಪಟ್ಟಿದ್ದಾರೆ. ಭಾರತಕ್ಕೆ ಗಡೀ ಪಾರಾದರೆ ಮಲ್ಯರ ಮಾನವ ಹಕ್ಕುಗಳಿಗೆ ತೊಂದರೆಯಾಗುವುದಿಲ್ಲ ಎಂದಿದ್ದಾರೆ. ಇದರ ಜತೆಗೆ ಅವರ ಹಣಕಾಸಿನ ವ್ಯವಹಾರಗಳಲ್ಲಿಯೂ ಕೂಡ ಪ್ರಶ್ನಾರ್ಹವಾದ ಅಂಶಗಳು ಇದ್ದವು ಎಂದು ತೀರ್ಪಿನಲ್ಲಿ ಹೇಳಿದ್ದಾರೆ. “ಮಧುಮೇಹ ಮತ್ತು ಹೃದಯ ಸಂಬಂಧಿ ಸಮಸ್ಯೆ ಹಿನ್ನೆಲೆಯಲ್ಲಿ ಅವರಿಗೆ ವೈಯಕ್ತಿಕ ವೈದ್ಯಕೀಯ ವ್ಯವಸ್ಥೆಗಳನ್ನು ಪೂರೈಸಲು ಅವಕಾಶ ನೀಡಲಾಗಿದೆ. ಜೈಲಿನಲ್ಲಿ ಯಾವುದೇ ರೀತಿಯ ಅಭದ್ರತೆ ಉಂಟಾದೀತು’ ಎಂಬ ವಾದಕ್ಕೆ ಅವಕಾಶವೇ ಇಲ್ಲ ಎಂದು ನ್ಯಾಯಾಧೀಶೆ ಹೇಳಿದ್ದಾರೆ.

ಜೇಟ್ಲಿ ಸ್ವಾಗತ
ತೀರ್ಪು ಪ್ರಕಟವಾಗುತ್ತಿದ್ದಂತೆಯೇ ಪ್ರತಿಕ್ರಿಯೆ ನೀಡಿದ ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ, ಈ ದಿನ ದೇಶಕ್ಕೆ ಅತ್ಯಂತ ದೊಡ್ಡದು. ಯುಪಿಎ ಅವಧಿಯಲ್ಲಿ ಲಾಭ ಪಡೆದು ಪರಾರಿಯಾಗಿದ್ದ ವ್ಯಕ್ತಿಯನ್ನು ಹಿಡಿದು ದೇಶಕ್ಕೆ ಕರೆ ತರುವ ಪ್ರಕ್ರಿಯೆಯಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ. ಭಾರತಕ್ಕೆ ಮೋಸ ಮಾಡಿದವರು ಯಾರೂ ಕೈತಪ್ಪಿ ಹೋಗಿಲ್ಲ ಎಂದು ನುಡಿದಿದ್ದಾರೆ. ಬಿಜೆಪಿ ಯಾಕೆ ಮಲ್ಯರ ಗಡೀಪಾರಿಗೆ ಶ್ರಮಿಸಲಿಲ್ಲ ಎಂಬ ಕಾಂಗ್ರೆಸ್‌ ಮತ್ತು ಅದರ ಅಧ್ಯಕ್ಷರ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ ಎಂದು ಹೇಳಿದ ಜೇಟ್ಲಿ, ಕಾಂಗ್ರೆಸ್‌ ನಾಯಕರೇ ಮಲ್ಯರಂಥವರಿಗೆ ಸಾಲ ನೀಡಿ ಬೆಳೆಯಲು ಕಾರಣರಾದರು. ಆದರೆ ದೇಶ ಬಿಟ್ಟು ಪರಾರಿಯಾದ ಅವರನ್ನು ಹಿಡಿದು ತರುವಲ್ಲಿ ಯಶಸ್ವಿಯಾಗಿದ್ದೇವೆ. ಈ ತೀರ್ಪು ಕೇಂದ್ರ ಸರಕಾರದ ವಿರುದ್ಧ ನಿರಂತರವಾಗಿ ಅಪಪ್ರ ಚಾರ ನಡೆಸುತ್ತಿದ್ದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯವರಿಗೆ ಆತ್ಮಾವಲೋಕನ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದೆ ಎಂದು ಹೇಳಿದ್ದಾರೆ.

ವಿವಾದ ಉಂಟಾಗಿತ್ತು
2016ರಲ್ಲಿ ಮಲ್ಯ ಭಾರತ ಬಿಟ್ಟು ಪರಾರಿಯಾಗುವುದಕ್ಕೆ ಮೊದಲು ವಿತ್ತ ಸಚಿವ ಜೇಟ್ಲಿಯವರನ್ನು ಭೇಟಿಯಾಗಿದ್ದರು ಎಂದು ಕಾಂಗ್ರೆಸ್‌ ನಾಯಕರೊಬ್ಬರು ಹೇಳಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಈ ಸಂದರ್ಭದಲ್ಲಿ ಸಾಲ ಮರು ಪಾವತಿ ಯೋಜನೆ ಚರ್ಚಿಸಿದ್ದರು ಎಂಬ ಹೇಳಿಕೆಯೂ ಚರ್ಚೆಗೆ ಗ್ರಾಸವಾಗಿತ್ತು. 

ಸಿದ್ಧಗೊಂಡಿದೆ ಆರ್ಥರ್‌ ರಸ್ತೆ ಜೈಲು
ತೀರ್ಪು ಪ್ರಕಟವಾಗುತ್ತಲೇ ಮುಂಬಯಿಯ ಆರ್ಥರ್‌ ರಸ್ತೆಯಲ್ಲಿರುವ ಕಾರಾಗೃಹ ಅತೀ ಗಣ್ಯ ಕೈದಿಯ ಸ್ವಾಗತಕ್ಕೆ ಸಿದ್ಧಗೊಂಡಿದೆ. ಗರಿಷ್ಠ ಪ್ರಮಾಣದ ಭದ್ರತೆ ಇರುವ ಈ ಜೈಲಲ್ಲಿ ಎಲ್ಲ ರೀತಿಯ ವ್ಯವಸ್ಥೆ ಪೂರೈಸಲಾಗಿದೆ. ಅಜ್ಮಲ್‌ ಕಸಬ್‌ ಇದ್ದ ಬ್ಯಾರಕ್‌  ಸಮೀಪವೇ ಮಲ್ಯರನ್ನು ಇರಿಸಲಾಗುತ್ತದೆ. ಈ ಜೈಲಿನ ಫೋಟೋ, ವೀಡಿಯೋಗಳನ್ನು ವೆಸ್ಟ್‌ಮಿನಿಸ್ಟರ್‌ ಕೋರ್ಟ್‌ಗೂ ಸಲ್ಲಿಸಲಾಗಿತ್ತು. ಇಲ್ಲಿನ ಎಲ್ಲ ಬ್ಯಾರಕ್‌ಗಳಿಗೆ ಸಿಸಿಟಿವಿ ವ್ಯವಸ್ಥೆ ಇದ್ದು ಎಲ್ಲ ಹಂತದಲ್ಲಿಯೂ ಕೈದಿಗಳ ಮೇಲೆ ನಿಗಾ ಇರಿಸಲಾಗುತ್ತದೆ. ಮಲ್ಯಗೆ ತುರ್ತು ಚಿಕಿತ್ಸೆ ನೀಡಲು ಬೇಕಾಗಿರುವ ಪ್ರಾಥಮಿಕ ಚಿಕಿತ್ಸಾ ವ್ಯವಸ್ಥೆಯೂ ಇದೆ. 

ದುರದೃಷ್ಟಕರ
ಕೋರ್ಟ್‌ನ ಹೊರಭಾಗದಲ್ಲಿ ಮಾಧ್ಯಮಗಳ ಜತೆಗೆ ಮಾತನಾಡಿದ ಉದ್ಯಮಿ ಮಲ್ಯ ತೀರ್ಪು ದುರದೃಷ್ಟಕರ ಎಂದು ಹೇಳಿದ್ದಾರೆ. ಆದರೆ ತಮ್ಮ ವಕೀಲರ ತಂಡ ತೀರ್ಪು ಪರಿಶೀಲಿಸಿ ಹೈಕೋರ್ಟಲ್ಲಿ ಮೇಲ್ಮನವಿ ಸಲ್ಲಿಸಲಿದೆ. ಈ ಮೂಲಕ ಇನ್ನೂ ದೀರ್ಘ‌ ಕಾನೂನು ಪ್ರಕ್ರಿಯೆ ಇದೆ ಎಂದು ಹೇಳಿದ್ದಾರೆ. ಸಾಲ ಪಾವತಿ ಬಗ್ಗೆ ಹೇಳಲಿಕ್ಕಿರುವುದನ್ನು ಕೋರ್ಟ್‌ನಲ್ಲಿಯೇ ಹೇಳಿದ್ದೇನೆ ಎಂದು ಮಲ್ಯ ಅಲವತ್ತುಕೊಂಡರು. “ಭಾರತಕ್ಕೆ ಮೋಸ ಮಾಡಿದವರು ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ’ ಎಂಬ ಜೇಟ್ಲಿ ಟ್ವೀಟ್‌ ಬಗ್ಗೆ ಪ್ರತಿಕ್ರಿಯೆ ನೀಡಿದ ಮಲ್ಯ ನನ್ನನ್ನು ಉದ್ದೇಶಿಸಿ ಹೇಳಿದ ಮಾತು ಅದಾಗಿರಲಿಕ್ಕಿಲ್ಲ. ಹೀಗಾಗಿ ಅದಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಹೇಳಿದ್ದಾರೆ.

7000 ಕೋ.ರೂ.ಸಾಲದ ಮೊತ್ತ
17ಬ್ಯಾಂಕ್‌ಗಳಿಂದ ಸಾಲ
9000 ಕೋ.ರೂ.ಬಡ್ಡಿ  ಸೇರಿದ ಬಳಿಕದ ಮೊತ್ತ
62 ಪುಟಗಳ ತೀರ್ಪು

ಮುಂದಿನ ಪ್ರಕ್ರಿಯೆ ಏನು?
ಇನ್ನು 14 ದಿನಗಳ ಅವಧಿಯಲ್ಲಿ ತೀರ್ಪಿನ ವಿರುದ್ಧ  ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಅವಕಾಶ
ಯು.ಕೆ.ಯ ಗೃಹ ಕಾರ್ಯದರ್ಶಿ 2 ತಿಂಗಳ ಒಳಗಾಗಿ ಗಡೀಪಾರು ಆದೇಶಕ್ಕೆ ಸಹಿ ಮಾಡಬೇಕು. 

ಮಲ್ಯರನ್ನು ಶೀಘ್ರವೇ ಭಾರತಕ್ಕೆ ಕರೆತರುವ ವಿಶ್ವಾಸ ನಮ್ಮದು. ಈ ಪ್ರಕರಣದಲ್ಲಿ ಕಠಿನವಾಗಿ ದುಡಿದಿದ್ದೇವೆ. ಪ್ರಬಲ ಕಾನೂನಿನ ಅಂಶಗಳನ್ನು ನಾವು ಪ್ರಬಲವಾಗಿಯೇ ಮಂಡಿಸಿದ್ದೆವು. ಈ ಪ್ರಕ್ರಿಯೆಯಲ್ಲಿ ಜಯ ಸಿಗುವ ನಿರೀಕ್ಷೆಯಲ್ಲಿದ್ದೆವು.
  – ಸಿಬಿಐ ವಕ್ತಾರ

ಈ ವಿಷಯ ಬ್ಯಾಂಕಿಂಗ್‌ ವಲಯಕ್ಕೆ ಸೇರಿದ್ದರಿಂದಾಗಿ ಇದು ಮೋದಿ ಸರಕಾರಕ್ಕೆ ಸಿಕ್ಕ ಗೆಲುವಲ್ಲ. ಇದಕ್ಕೆ ಬದಲಾಗಿ ಸರಕಾರ ರಫೇಲ್‌ ಡೀಲ್‌ ಬಗ್ಗೆ ಗಮನಹರಿಸಲಿ. 
– ರಾಹುಲ್‌ ಗಾಂಧಿ, ಎಐಸಿಸಿ ಅಧ್ಯಕ್ಷ

ಮಲ್ಯ ಇಲ್ಲಿಗೆ ಬಂದರೆ ಅವರನ್ನು ಭದ್ರತೆಯಿಂದ ನೋಡಿಕೊಳ್ಳಲಾಗುತ್ತದೆ. ಅದಕ್ಕೆ ಯಾವುದೇ ಆತಂಕ ಬೇಡ.
 - ಅರ್ಥರ್‌ ರಸ್ತೆ ಜೈಲು ಅಧಿಕಾರಿ

ಈ ನಿಟ್ಟಿನಲ್ಲಿ ಪ್ರಧಾನಿಯವರನ್ನು ಅಭಿನಂದಿಸಬೇಕು. ಹಿಂದಿನ ಸಂದರ್ಭಗಳಲ್ಲಿ ತನಿಖಾ ಸಂಸ್ಥೆಗಳು ಅವರ ಕರ್ತವ್ಯ ನಿರ್ವಹಿಸದಂತೆ ಈ ಬಾರಿ ತಡೆಯಲಾಗಿಲ್ಲ. ಜನವರಿ ಅಂತ್ಯಕ್ಕೆ ಮಲ್ಯ ದೇಶಕ್ಕೆ ಆಗಮಿಸಬಹುದು.
-ಡಾ| ಸುಬ್ರಹ್ಮಣ್ಯನ್‌ ಸ್ವಾಮಿ ಬಿಜೆಪಿ ರಾಜ್ಯಸಭಾ ಸದಸ್ಯ

ಟಾಪ್ ನ್ಯೂಸ್

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

congress

BJP ಅಭ್ಯರ್ಥಿ ಅವಿರೋಧ ಆಯ್ಕೆ: ಸೂರತ್‌ನ ಕಾಂಗ್ರೆಸ್‌ ಅಭ್ಯರ್ಥಿ ಉಚ್ಚಾಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.