ದೃಷ್ಟಿ ವಿಶೇಷಚೇತನನಿಗೆ ವಾರ್ಷಿಕ 47 ಲಕ್ಷ ರೂ. ವೇತನದ ಆಫರ್ ನೀಡಿದ ಮೈಕ್ರೋಸಾಫ್ಟ್ ಕಂಪನಿ
Team Udayavani, Aug 31, 2022, 9:15 AM IST
ಇಂದೋರ್: ಮಧ್ಯಪ್ರದೇಶದ ದೃಷ್ಟಿ ವಿಶೇಷಚೇತನ ಎಂಜಿನಿಯರ್ ಪದವೀಧರನಿಗೆ ಐಟಿ ದಿಗ್ಗಜ ಮೈಕ್ರೋಸಾಫ್ಟ್ ಕಂಪನಿ ಬರೋಬ್ಬರಿ ವಾರ್ಷಿಕ 47 ಲಕ್ಷ ರೂ. ವೇತನದ ಆಫರ್ ನೀಡಿದೆ.
ತನ್ನ 8ನೇ ವಯಸ್ಸಿನಲ್ಲಿ ಗ್ಲುಕೋಮಾ ಕಾಯಿಲೆಯಿಂದ ದೃಷ್ಟಿ ಕಳೆದುಕೊಂಡ ಯಶ್ ಸೊನಾಕಿಯಾ ಅವರು, ಇಂದೋರ್ನ ಶ್ರೀ ಗೋವಿಂದ್ರಾಮ್ ಸಕ್ಸಾರಿಯಾ ಅನುದಾನಿತ ಎಂಜಿನಿಯರಿಂಗ್ ಕಾಲೇಜಿನಿಂದ 2021ರಲ್ಲಿ ಬಿ.ಟೆಕ್ ಪದವಿ ಪಡೆದಿದ್ದಾರೆ.
“ಸ್ಕ್ರೀನ್ ರೀಡರ್ ಸಾಫ್ಟ್ ವೇರ್ ಸಹಾಯದಿಂದ ನಾನು ನನ್ನ ಅಧ್ಯಯನ ಪೂರ್ಣಗೊಳಿಸಿದೆ. ನಂತರ ಉದ್ಯೋಗಕ್ಕಾಗಿ ಮೈಕ್ರೋಸಾಫ್ಟ್ ಕಂಪನಿಗೆ ಅರ್ಜಿ ಹಾಕಿದೆ. ಇದರಲ್ಲಿ ಆಯ್ಕೆಯಾದ ನನಗೆ ಬೆಂಗಳೂರಿನಲ್ಲಿರುವ ಕಂಪನಿಯ ಕಚೇರಿಗೆ ನಿಯೋಜನೆ ಮಾಡಲಾಗಿದೆ.
ಶೀಘ್ರದಲ್ಲೇ ಕೆಲಸಕ್ಕೆ ಸೇರಲಿದ್ದು, ಸದ್ಯ ಮನೆಯಿಂದಲೇ ಕೆಲಸ ಮಾಡುವ ಆಯ್ಕೆ ನೀಡಲಾಗಿದೆ,” ಎಂದು ಯಶ್ ತಿಳಿಸಿದ್ದಾರೆ.