ನಟ ಒಬೆರಾಯ್ ಸಂಸ್ಥೆಯಿಂದ ಹುತಾತ್ಮ ಯೋಧರ 25 ಕುಟುಂಬಕ್ಕೆ ಪ್ಲ್ಯಾಟ್
Team Udayavani, May 13, 2017, 3:08 PM IST
ಥಾಣೆ:ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟ ಯೋಧರ ಕುಟುಂಬಗಳಿಗೆ ಬಾಲಿವುಡ್ ಖ್ಯಾತ ನಟರಾದ ಅಕ್ಷಯ್ ಕುಮಾರ್, ನಾನಾ ಪಾಟೇಕರ್ ನೆರವು ನೀಡಿದ್ದನ್ನು ಓದಿದ್ದೀರಿ ಈಗ ಅವರ ಸಾಲಿಗೆ ಮತ್ತೊಬ್ಬ ನಟನ ಸೇರ್ಪಡೆ ಹುತಾತ್ಮ ಯೋಧರ 25 ಕುಟುಂಬಗಳಿಗೆ ಬಾಲಿವುಡ್ ನಟ ವಿವೇಕ್ ಒಬೆರಾಯ್ ಅವರ ಕಂಪನಿ ಕರ್ಮ್ ಇನ್ಪ್ರಾಸ್ಟ್ರಕ್ಚರ್ ಪ್ರೈ ಲಿಮಿಟೆಡ್ ಫ್ಲ್ಯಾಟ್ ಅನ್ನು ದಾನವಾಗಿ ನೀಡಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ವರದಿ ಪ್ರಕಾರ, ವಿವೇಕ್ ಒಬೆರಾಯ್ ಅವರ ಸಂಸ್ಥೆ ಸಿಆರ್ ಪಿಎಫ್ ಗೆ ಬರೆದಿರುವ ಪತ್ರದಲ್ಲಿ, ವಿವಿಧ ಕಾರ್ಯಾಚರಣೆಗಳಲ್ಲಿ ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟ ಹುತಾತ್ಮ ಯೋಧರ ಕುಟುಂಬಗಳಿಗೆ ಪ್ಲ್ಯಾಟ್ ಅನ್ನು ನೀಡುವುದಾಗಿ ಘೋಷಿಸಿದೆ. ಈಗಾಗಲೇ ಮಹಾರಾಷ್ಟ್ರದ ಥಾಣೆಯಲ್ಲಿ 4 ಪ್ಲ್ಯಾಟ್ ಅನ್ನು ಯೋಧರ ಕುಟುಂಬಗಳಿಗೆ ಹಸ್ತಾಂತರಿಸಿರುವುದಾಗಿ ಹೇಳಿದೆ.
ಪ್ಲ್ಯಾಟ್ ಅನ್ನು ನೀಡುವ ಹುತಾತ್ಮ ಯೋಧರ ಕುಟುಂಬದ ಹೆಸರನ್ನು ಈಗಾಗಲೇ ಒಬೆರಾಯ್ ಸಂಸ್ಥೆ ಬಿಡುಗಡೆ ಮಾಡಿದೆ. ಉಳಿದ ಕುಟುಂಬಗಳ ಹೆಸರನ್ನು ಕೂಡಲೇ ತಿಳಿಸುವುದಾಗಿ ಹೇಳಿದೆ. ಈಗಾಗಲೇ ಬಾಲಿವುಡ್ ನ ಖ್ಯಾತ ನಟ ಅಕ್ಷಯ್ ಕುಮಾರ್ ಅವರು ಸಿಆರ್ ಪಿಎಫ್ ನ 12 ಕುಟುಂಬಗಳಿಗೆ 1.08 ಕೋಟಿ ರೂಪಾಯಿ ನೆರವು ನೀಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ