ಯುವಕರಿಗಿಂತ ಯುವತಿಯರೇ ಹೆಚ್ಚು ನಿದ್ದೆ ಹೊಡೀತಾರೆ!

Team Udayavani, Dec 10, 2019, 6:15 PM IST

ಬೆಳಗ್ಗೆ ಗಂಟೆ ಹತ್ತಾದ್ರೂ.. ಇನ್ನೂ ಹಾಸಿಗೆಯಿಂದ ಏಳ್ಳೋದೇ ಕಷ್ಟ ಎನ್ನುವ ಸ್ಥಿತಿಯಲ್ಲಿ ಹಲವರಿರುತ್ತಾರೆ. ಈಗಿನ ಯುವಕರು ಹೆಚ್ಚು ಹೊತ್ತು ಗಡದ್ದು ನಿದ್ದೆ ಹೊಡೆಯುವುದೇ ಸಾಧನೆ ಎಂಬಂತೆ ಇರುತ್ತಾರೆ ಎನ್ನುವುದು ಸಾಮಾನ್ಯ ಆರೋಪ. ಆದರೆ ನಿಜಕ್ಕೂ ವಿಚಾರ ಹಾಗಿಲ್ಲ. ಯುವತಿಯರೇ ಹೆಚ್ಚು ನಿದ್ದೆ ಹೊಡೀತಾರೆ ಎನ್ನುವುದನ್ನು ಸಮೀಕ್ಷೆಯೊಂದು ಹೇಳಿದೆ.

ಸುಮಾರು 20 ವರ್ಷ ವಯಸ್ಸಿನ 17 ಸಾವಿರ ಮಂದಿ ಮೇಲೆ 2 ವಾರಗಳ ಕಾಲ ಈ ಸಂಶೋಧನೆ ನಡೆಸಲಾಗಿದ್ದು ಅಚ್ಚರಿಯ ವಿಚಾರ ಹೊರಬಿದ್ದಿದೆ.
ಸಂಶೋಧನೆ ಪ್ರಕಾರ, ಯುರೋಪ್‌ ಮತ್ತು ಉತ್ತರ ಅಮೆರಿಕದ ಯವಕರು ದೀರ್ಘಾವಧಿ ನಿದ್ದೆ ಮಾಡ್ತಾರಂತೆ. ಹಾಗೆಯೇ ಏಷ್ಯನ್ನರು ಅತಿ ಕಡಿಮೆ ನಿದ್ದೆ ಮಾಡ್ತಾರಂತೆ. ಮಧ್ಯಪ್ರಾಚ್ಯದವರು ನಿಗದಿತ ಅವಧಿಯಷ್ಟೇ ನಿದ್ದೆ ಮಾಡ್ತಾರಂತೆ.

ಯುವಕರಿಗಿಂತ ಹೆಚ್ಚು ಯುವತಿಯರೇ ನಿದ್ದೆ ಮಾಡ್ತಾರೆ ಹಾಗೆಯೇ ವಯಸ್ಸಾದವರು ಅತಿ ಬೇಗನೆ ನಿದ್ದೆ ಹೋಗುತ್ತಾರೆ ಎಂದು ಹೇಳಲಾಗಿದೆ.
ಹೆಲ್ಸೆಂಕಿ ವಿವಿಯ ಸಂಶೋಧಕರು ಈ ಸಮೀಕ್ಷೆ ನಡೆಸಿದ್ದು, ಹೀಗೆ ಹೆಚ್ಚು ನಿದ್ದೆ ಮಾಡುವ ಗುಣಕ್ಕೆ ಪ್ರದೇಶವಾರು ಕಾರಣ ಎನ್ನುವುದು ಸ್ವಲ್ಪವಷ್ಟೇ ಇದೆ. ಆದರೆ ನಿದ್ದೆ ಮಾಡುವ ಹೊತ್ತಿನಲ್ಲಿರುವ ವ್ಯತ್ಯಾಸ ಹೆಚ್ಚು ನಿದ್ದೆಗೆ ಕಾರಣವಿರಬಹುದುಎಂದು ಅಭಿಪ್ರಾಯ ಪಟ್ಟಿದ್ದಾರೆ. ಸಂಶೋಧನೆಯ ಅಂಶಗಳನ್ನು ಸ್ಲೀಪ್ ಮೆಡಿಸಿನ್‌ ಹೆಸರಿನ ನಿಯತಕಾಲಿಕೆಯಲ್ಲಿ ನೀಡಲಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ