ಭಾರತವಿಡೀ ಯೋಗಮಯ: ದೇಶದ ವಿವಿಧ ಸ್ಥಳಗಳಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಸೂರತ್‌ನಲ್ಲಿ 1.53 ಲಕ್ಷ ಮಂದಿಯಿಂದ ಗಿನ್ನೆಸ್‌ ವಿಶ್ವ ದಾಖಲೆ

Team Udayavani, Jun 22, 2023, 7:50 AM IST

ಭಾರತವಿಡೀ ಯೋಗಮಯ: ದೇಶದ ವಿವಿಧ ಸ್ಥಳಗಳಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ನವದೆಹಲಿ: ವಿಶ್ವಾದ್ಯಂತ ಬುಧವಾರ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ವಿಶ್ವದ ವಿವಿಧ ಭಾಗಗಳ ಲಕ್ಷಾಂತರ ಜನರು ಯೋಗಾಭ್ಯಾಸ ಮಾಡುವ ಮೂಲಕ ದಿನಾಚರಣೆಗೆ ವಿಶೇಷ ಕಳೆ ನೀಡಿದರು.

ವಿಶೇಷವಾಗಿ ಆರ್ಟಿಕ್‌ ಮತ್ತು ಅಂಟಾರ್ಟಿಕಾದಲ್ಲಿರುವ ಭಾರತದ ಸಂಶೋಧನಾ ಕೇಂದ್ರದ ಸಂಶೋಧಕರು, ಲಡಾಖ್‌ನ ಅತ್ಯಂತ ಎತ್ತರದ ಪ್ರದೇಶದಲ್ಲಿ, ಕೇರಳದ ಸಮುದ್ರದ ಆಳದಲ್ಲಿ, ಭಾರತದ ಹೆಮ್ಮೆಯ ಐಎನ್‌ಎಸ್‌ ವಿಕ್ರಾಂತ್‌ ಯುದ್ಧ ನೌಕೆಯಲ್ಲಿ, ಭೋಪಾಲ್‌ನಿಂದ ದೆಹಲಿಗೆ ತೆರಳುವ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ, ಯೋಗ ಸ್ಟುಡಿಯೋ, ಶಾಲಾ-ಕಾಲೇಜುಗಳು, ಮನೆಗಳು ಮತ್ತು ಕಚೇರಿಗಳಲ್ಲಿ ನಾಗರಿಕರು ಯೋಗಾಭ್ಯಾಸದಲ್ಲಿ ತೊಡಗುವ ಮೂಲಕ ಅಂತಾರಾಷ್ಟ್ರೀಯ ಯೋಗ ದಿನದ ಸಂಭ್ರಮಾಚರಣೆಗೆ ಕೈಜೋಡಿಸಿದರು.

ಭಾರತೀಯ ಸೇನೆಯ ಯೋಧರು ಲಡಾಖ್‌ನ ಪ್ಯಾಂಗ್ಯಾಂಗ್‌ ತ್ಸೋ ಸರೋವರದ ಬಳಿ ಯೋಗಾಭ್ಯಾಸ ಮಾಡಿದರು. ಕೇರಳದ ಕೊಚ್ಚಿಯಲ್ಲಿ ಐಎನ್‌ಎಸ್‌ ವಿಕ್ರಾಂತ್‌ನಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಯೋಧರೊಂದಿಗೆ ಯೋಗಾಭ್ಯಾಸದಲ್ಲಿ ಪಾಲ್ಗೊಂಡರು. ಈ ವೇಳೆ ಭಾರತೀಯ ನೌಕಾಸೇನೆಯ ಮುಖ್ಯಸ್ಥ ಆರ್‌.ಹರಿಕುಮಾರ್‌ ಕೂಡ ಭಾಗವಹಿಸಿದ್ದರು. ಜತೆಗೆ ದೇಶದ ವಿವಿಧ ಸೇನಾ ನೌಕೆಗಳಲ್ಲಿ ನೌಕಾದಳದ ಸಿಬ್ಬಂದಿ ಯೋಗ ಮಾಡಿದರು.

ರಾಷ್ಟ್ರಪತಿಗಳಿಂದ ಯೋಗ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಯೋಗದಲ್ಲಿ ಪಾಲ್ಗೊಂಡಿದ್ದರು. ಮಧ್ಯಪ್ರದೇಶದ ಜಬಲ್ಪುರ ನಗರದಲ್ಲಿ ಉಪರಾಷ್ಟ್ರಪತಿ ಜಗದೀಪ್‌ ಧನ್ಕರ್‌, ದೆಹಲಿಯಲ್ಲಿ ಕೇಂದ್ರ ಸಚಿವರಾದ ಹದೀìಪ್‌ ಸಿಂಗ್‌ ಪುರಿ, ಮನ್ಸುಖ್‌ ಮಾಂಡವಿಯ, ಪೀಯೂಷ್‌ ಗೋಯಲ್‌, ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ.ಸಕ್ಸೇನಾ ಭಾಗವಹಿಸಿದ್ದರು. ದೇಶದ ವಿವಿಧ ರಾಜ್ಯಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ರಾಜ್ಯಪಾಲರು, ಮುಖ್ಯಮಂತ್ರಿಗಳು ಮತ್ತು ಹಲವು ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಜಿ20 ಪ್ರತಿನಿಧಿಗಳಿಂದ ಯೋಗಾಭ್ಯಾಸ: ಸುಪ್ರೀಂ ಕೋರ್ಟ್‌ ಆವರಣದಲ್ಲಿ ಸಿಜೆಐ ಡಿ.ವೈ.ಚಂದ್ರಚೂಡ್‌ ಸೇರಿದಂತೆ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳು ವಿವಿಧ ಯೋಗಾಸನಗಳನ್ನು ಮಾಡಿದರು. ಗೋವಾದ ಪಣಜಿಯಲ್ಲಿ ಜಿ20 ಸಭೆ ಅಂಗವಾಗಿ ಆಗಮಿಸಿರುವ ವಿವಿಧ ದೇಶಗಳ ಜನಪ್ರತಿನಿಧಿಗಳು ಯೋಗಾಭ್ಯಾಸ ಮಾಡಿದರು. ಮುಂಬೈನ ಲೋಕಲ್‌ ರೈಲುಗಳಲ್ಲಿ ಪ್ರಯಾಣಿಕರು ಯೋಗಾಭ್ಯಾಸ ಮಾಡಿದರು.

ವಿಶ್ವಾದ್ಯಂತ ಆಚರಣೆ: ಅಮೆರಿಕ, ಕೆನಡಾ, ಆಸ್ಟ್ರೇಲಿಯಾ, ಬ್ರಿಟನ್‌, ನಾರ್ವೆ, ನ್ಯೂಜಿಲೆಂಡ್‌, ಐರ್ಲೆಂಡ್‌, ಚಿಲಿ, ಕೊಸ್ಟಾರಿಕ, ಜರ್ಮನಿ, ಇರಾನ್‌, ಯುಎಇ, ಮಲೇಷ್ಯಾ, ಸಿಂಗಾಪುರ, ದಕ್ಷಿಣ ಆಫ್ರಿಕಾ, ವಿಯಾಟ್ನಂ, ಸ್ವೀಡನ್‌, ಅರ್ಜೆಂಟೀನ, ನೆದರ್ಲೆಂಡ್‌ ಸೇರಿದಂತೆ ವಿವಿಧ ದೇಶಗಳಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.

ಸೂರತ್‌ನಲ್ಲಿ ಗಿನ್ನೆಸ್‌ ವಿಶ್ವದಾಖಲೆ
ಅಂತಾರಾಷ್ಟ್ರೀಯ ಯೋಗದಿನದ ಹಿನ್ನೆಲೆಯಲ್ಲಿ ಗುಜರಾತ್‌ನ ಸೂರತ್‌ನಲ್ಲಿ ಬುಧವಾರ ಬೆಳಗ್ಗೆ 1.53 ಲಕ್ಷ ಮಂದಿ ಯೋಗಾಭ್ಯಾಸ ಮಾಡಿದರು. ಅತ್ಯಂತ ಹೆಚ್ಚಿನ ಸಂಖ್ಯೆಯ ಜನರು ಒಂದೆಡೆ ಸೇರಿ ಯೋಗಾಭ್ಯಾಸ ಮಾಡುವ ಮೂಲಕ ನೂತನ ಗಿನ್ನೆಸ್‌ ವಿಶ್ವದಾಖಲೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಗುಜರಾತ್‌ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಭಾಗವಹಿಸಿದ್ದರು. ಈ ಹಿಂದೆ 2018ರಲ್ಲಿ ರಾಜಸ್ಥಾನದ ಕೋಟಾದಲ್ಲಿ ಅಂತಾರಾಷ್ಟ್ರೀಯ ಯೋಗದಿನದಂದು 1,00,984 ಮಂದಿ ಯೋಗಾಭ್ಯಾಸ ಮಾಡುವ ಮೂಲಕ ದಾಖಲೆ ಮಾಡಿದ್ದರು.

100 ಕಡೆಗಳಲ್ಲಿ ಯೋಧರಿಂದ “ಭಾರತ್‌ಮಾಲಾ’
ಭಾರತದ ಗಡಿಭಾಗದಲ್ಲಿ, ಸೇನಾನೆಲೆ, ವಾಯುನೆಲೆ, ನೌಕಾನೆಲೆ ಸೇರಿದಂತೆ 100ಕ್ಕೂ ಹೆಚ್ಚು ಸ್ಥಳಗಳಲ್ಲಿ ಭಾರತೀಯ ಸೇನೆಯ ಯೋಧರು “ಭಾರತ್‌ಮಾಲಾ’ ಸೃಜಿಸಿದರು. ಕಾರ್ಯಕ್ರಮದಲ್ಲಿ ಯೋಧರ ಕುಟುಂಬದವರು, ನಿವೃತ್ತ ಯೋಧರು ಕೂಡ ಭಾಗವಹಿಸಿದ್ದರು.

ಯೋಗದ ಜನಪ್ರಿಯತೆಗೆ ಈಗಿನ ಸರ್ಕಾರವೂ ಕಾರಣ: ಕಾಂಗ್ರೆಸ್‌ಗೆ ತರೂರ್‌ ತಿರುಗೇಟು
ಯೋಗ ಜನಪ್ರಿಯವಾಗಲು ಮೊದಲ ಪ್ರಧಾನಿ ಜವಾಹರ್‌ಲಾಲ್‌ ನೆಹರೂ ಕಾರಣ ಎಂದು ಕಾಂಗ್ರೆಸ್‌ ಹೇಳಿದೆ. ಈ ಬಗ್ಗೆ ಟ್ವೀಟ್‌ ಮಾಡಿದ ಅದು, “ಯೋಗವನ್ನು ಜನಪ್ರಿಯಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಹಾಗೂ ರಾಷ್ಟ್ರೀಯ ನೀತಿಯ ಭಾಗವಾಗಿಸಿದ ನೆಹರೂ ಅವರಿಗೆ ಅಂತಾರಾಷ್ಟ್ರೀಯ ಯೋಗದಿನದಂದು ಧನ್ಯವಾದಗಳನ್ನು ಅರ್ಪಿಸುತ್ತೇವೆ’ ಎಂದಿದೆ. ಈ ವೇಳೆ ನೆಹರೂ ಅವರು ಶೀರ್ಷಾಸನ ಮಾಡುತ್ತಿರುವ ಚಿತ್ರವನ್ನೂ ಹಂಚಿಕೊಂಡಿದೆ. ಇದನ್ನು ಬೆಂಬಲಿಸುವ ಜೊತೆಜೊತೆಗೇ ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಅದನ್ನು ಟೀಕಿಸಿದ್ದಾರೆ. “ವಿಶ್ವಸಂಸ್ಥೆಯ ಮೂಲಕ ಯೋಗದಿನವನ್ನು ಅಂತಾರಾಷ್ಟ್ರೀಯಗೊಳಿಸಿದ ಈಗಿನ ಸರ್ಕಾರ, ಪ್ರಧಾನಮಂತ್ರಿ ಕಚೇರಿ, ವಿದೇಶಾಂಗ ಸಚಿವಾಲಯವನ್ನೂ ನಾವು ಕೃತಜ್ಞತೆಯಿಂದ ಸ್ಮರಿಸಬೇಕು’ ಎಂದು ತರೂರ್‌ ಟ್ವೀಟ್‌ ಮಾಡಿದ್ದಾರೆ. ಪರೋಕ್ಷವಾಗಿ ಯೋಗದ ಜನಪ್ರಿಯತೆಗೆ ನೆಹರೂ ಕಾರಣ ಎಂದ ಕಾಂಗ್ರೆಸ್‌ ನಿಲುವನ್ನು ತಿರಸ್ಕರಿಸಿದ್ದಾರೆ.

ಯೋಗವು ನಮ್ಮ ನಾಗರಿಕತೆಯ ಶ್ರೇಷ್ಠ ಸಾಧನೆಗಳಲ್ಲಿ ಒಂದಾಗಿದೆ ಮತ್ತು ಭಾರತವು ಜಗತ್ತಿಗೆ ನೀಡಿದ ದೊಡ್ಡ ಕೊಡುಗೆಗಳಲ್ಲಿ ಒಂದಾಗಿದೆ. ಯೋಗವು ದೇಹ ಮತ್ತು ಮನಸ್ಸಿನ ನಡುವೆ ಸಮತೋಲನವನ್ನು ಸ್ಥಾಪಿಸುತ್ತದೆ.
– ದ್ರೌಪದಿ ಮುರ್ಮು, ರಾಷ್ಟ್ರಪತಿ

ಯೋಗವು ಜಗತ್ತಿಗೆ ಭಾರತವು ನೀಡಿದ ನಾಗರಿಕತೆಯ ಕೊಡುಗೆಯಾಗಿದೆ. ಯೋಗವು ದೈಹಿಕ ವ್ಯಾಯಾಮಕ್ಕೆ ಸೀಮಿತವಲ್ಲ. ಬದಲಾಗಿ ಸಮಗ್ರ ಜೀವನ ವಿಧಾನವಾಗಿದೆ.
– ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್‌)

ಟಾಪ್ ನ್ಯೂಸ್

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

1-weqqeqw

Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.