ಎನ್ಐಎ ಮುಖ್ಯಸ್ಥರಾಗಿ ವೈ.ಸಿ.ಮೋದಿ ನೇಮಕ
Team Udayavani, Sep 19, 2017, 7:10 AM IST
ನವದೆಹಲಿ: ಗುಜರಾತ್ನಲ್ಲಿ 2002ರಲ್ಲಿ ನಡೆದ ಗಲಭೆ ಪ್ರಕರಣದ ತನಿಖೆಗೆ ಸುಪ್ರೀಂಕೋರ್ಟ್ ನೇಮಕ ಮಾಡಿದ್ದ ವಿಶೇಷ ತನಿಖಾ ತಂಡದಲ್ಲಿದ್ದ ಹಿರಿಯ ಐಪಿಎಸ್ ಅಧಿಕಾರಿ ವೈ.ಸಿ.ಮೋದಿ ಅವರು ಈಗ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ)ಯ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.
ಸಂಪುಟದ ನೇಮಕ ಸಮಿತಿಯು ವೈ.ಸಿ.ಮೋದಿ ಅವರನ್ನು ಎನ್ಐಎ ಪ್ರಧಾನ ನಿರ್ದೇಶಕರಾಗಿ ನೇಮಕ ಮಾಡಲು ಒಪ್ಪಿಗೆ ಸೂಚಿಸಿದೆ ಎಂದು ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯ ಸೋಮವಾರ ಮಾಹಿತಿ ನೀಡಿದೆ. ಮೋದಿ ಅವರು 2022ರ ಮೇ 31ರವರೆಗೆ ಈ ಹುದ್ದೆಯಲ್ಲಿ ಇರಲಿದ್ದಾರೆ. ಇದೇ ವೇಳೆ, ಅಧಿಕಾರ ವಹಿಸಿಕೊಳ್ಳಲು ಸುಲಭವಾಗಲಿ ಎಂಬ ಕಾರಣಕ್ಕೆ ಮೋದಿ ಅವರನ್ನು ತತ್ಕ್ಷಣವೇ ಅನ್ವಯವಾಗುವಂತೆ ಎನ್ಐಎ ವಿಶೇಷ ಕರ್ತವ್ಯಾಧಿಕಾರಿಯಾಗಿಯೂ ನೇಮಿಸಲಾಗಿದೆ.