ಹೊಸ ಠೇವಣಿ ಯೋಜನೆ
Team Udayavani, Jun 6, 2018, 3:25 AM IST
ಹೊಸದಿಲ್ಲಿ: ಪರಿಸರ ದಿನದಂದು ಖಾಸಗಿ ವಲಯದ ಯೆಸ್ ಬ್ಯಾಂಕ್ ಹೊಸ ಠೇವಣಿ ಯೋಜನೆಯನ್ನು ಘೋಷಿಸಿದ್ದು, 18 ತಿಂಗಳವರೆಗಿನ ಈ ಸ್ಕೀಂ ಅಡಿಯಲ್ಲಿ ಶೇ. 8ರವರೆಗೆ ಬಡ್ಡಿ ಪಡೆಯಬಹುದಾಗಿದೆ. ಈ ಹಸಿರು ಯೋಜನೆಯ ಅಡಿ ಮುಂದಿನ ಮೂರು ತಿಂಗಳಲ್ಲಿ 1,000 ಕೋಟಿ ರೂ. ಸಂಗ್ರಹ ಗುರಿ ಹೊಂದಲಾ ಗಿದೆ. ಸಾಮಾನ್ಯ ಜನರಿಗೆ ಬಡ್ಡಿ ದರ ಶೇ.7.50 ಆಗಿರಲಿದ್ದು, ಹಿರಿಯ ನಾಗರಿಕರಿಗೆ ಶೇ.8ರ ಬಡ್ಡಿ ದರ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪರಿಸರ ಸ್ನೇಹಿ ಯೋಜನೆಗಳನ್ನು ಘೋಷಿಸಲಾಗುತ್ತದೆ ಎಂದು ಯೆಸ್ ಬ್ಯಾಂಕ್ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಣಾ ಕಪೂರ್ ಹೇಳಿದ್ದಾರೆ.