ಯುವಕನ ಮರ್ಮಾಂಗ ಕಟ್!; ಮಹಿಳೆ ಸೇರಿ ಮೂವರ ಬಂಧನ
Team Udayavani, Dec 28, 2018, 10:04 AM IST
ಥಾಣೆ: ಮಹಿಳೆಗೆ ಕಿರುಕುಳ ನೀಡುತ್ತಿದ್ದ ಯುವಕನ ಮರ್ಮಾಂಗ ಕತ್ತರಿಸಿದ ಘಟನೆ ಡೊಂಬಿವಲಿಯ ನಾಂದಿವಲಿ ಪರಿಸರದಲ್ಲಿ ಸಂಭ ವಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಡೊಂಬಿವಲಿ ಪಶ್ಚಿಮ ನಿವಾಸಿಯಾಗಿದ್ದ ಮಹಿಳೆಗೆ ಪಕ್ಕದ ಮನೆಯ ನಿವಾಸಿ 27ರ ಯುವಕ ಶಾರೀರಿಕ ಸಂಬಂಧ ಬೆಳೆಸುವಂತೆ ಹೇಳುತ್ತಿದ್ದ. ಅದಲ್ಲದೆ ಯುವಕ ಕೆಲವು ವಾರಗಳ ಹಿಂದೆ ಮಹಿಳೆಯ ಪತಿಯನ್ನು ಭೇಟಿಯಾಗಿ ಆಕೆಯನ್ನು ಇಷ್ಟಪಡುತ್ತಿದ್ದೇನೆ ಎಂದು ಹೇಳಿದ್ದ. ಇದರಿಂದ ದಂಪತಿಯ ನಡುವೆ ಜಗಳ ಉಂಟಾಯಿತು. ಇದರಿಂದ ಆಕ್ರೋಶಗೊಂಡ ಮಹಿಳೆ ಯುವಕನಿಗೆ ಪಾಠ ಕಲಿಸಲು ನಿರ್ಧರಿಸಿದಳು.
ಆಕೆಯು ತೇಜಸ್ ಮಾತ್ರೆ (22) ಮತ್ತು ಪ್ರವೀಣ್ ಕೆನಿಯಾ (25) ಎಂಬ ಯುವಕರ ಸಹಾಯ ಪಡೆದಳು. ಡೊಂಬಿವಲಿ ಪೂರ್ವದ ನಾಂದಿವಲಿ ಬೆಟ್ಟಕ್ಕೆ ಯುವಕನಿಗೆ ಬರುವಂತೆ ತಿಳಿಸಿದಳು. ಯುವಕ ಅಲ್ಲಿಗೆ ತಲುಪಿದಾಗ ಮಾತ್ರೆ ಮತ್ತು ಕೆನಿಯಾ ಅವರು ಯುವಕನಿಗೆ ಹೊಡೆದು ಕೈ ಕಟ್ಟಿ ಹಾಕಿದರು. ಮಹಿಳೆ ಆತನ ಮರ್ಮಾಂಗವನ್ನು ಕತ್ತರಿಸಿ ಹಾಕಿದ್ದಾರೆಂದು ಪೊಲೀಸರು ತಿಳಿಸಿ¨ªಾರೆ.
ಗಾಯಗೊಂಡಿದ್ದ ಯುವಕನನ್ನು ಸ್ಥಳೀಯರು ಡೊಂಬಿವಲಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಗೆ ಒಳ ಪಡಿಸಲಾಯಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸಹಿತ ಮೂವರನ್ನು ಪೊಲೀಸರು ಬಂಧಿಸಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್
Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು