ಭಾರತ್‌ ಬ್ಯಾಂಕಿನ 102ನೇ ಶಾಖೆಯು ಖಾರ್‌ ಪೂರ್ವದಲ್ಲಿ ಶುಭಾರಂಭ


Team Udayavani, Feb 9, 2018, 3:58 PM IST

0702mum10a.jpg

ಮುಂಬಯಿ:  ಭಾರತ್‌ ಕೋ. ಆಪರೇಟಿವ್‌ ಬ್ಯಾಂಕ್‌ನ 102 ನೇ ನೂತನ  ಶಾಖೆಯು ಫೆ. 7 ರಂದು ಖಾರ್‌ ಪೂರ್ವದ ಜವಾಹರ್‌ ನಗರದ ಗೋಲಿಬಾರ್‌ ರಸ್ತೆಯಲ್ಲಿರುವ ಮಹಾತ್ಮಾ ಕೋ.ಆಪರೇಟಿವ್‌ ಹೌಸಿಂಗ್‌ ಸೊಸೈಟಿಯ ಕಟ್ಟಡದಲ್ಲಿ ಸೇವಾರಂಭಿಸಿದ್ದು ಬ್ಯಾಂಕಿನ ಉಪ ಕಾರ್ಯಾಧ್ಯಕ್ಷೆ ನ್ಯಾಯವಾದಿ ರೋಹಿಣಿ ಜೆ. ಸಾಲ್ಯಾನ್‌ ಅವರು ರಿಬ್ಬನ್‌ ಬಿಡಿಸಿ ನೂತನ ಶಾಖೆಯನ್ನು ಉದ್ಘಾಟಿಸಿದರು.

ಬಿಲ್ಲವರ ಅಸೋಸಿಯೇಶನ್‌ ಮುಂಬಯಿ  ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್‌ ಅವರು  ದೀಪ ಪ್ರಜ್ವಲಿಸಿ ವಿಧ್ಯುಕ್ತವಾಗಿ ಶಾಖೆಯನ್ನು ಉದ್ಘಾಟಿಸಿದರು. ಬ್ಯಾಂಕಿನ ಹಿರಿಯ ನಿರ್ದೇಶಕಿ ಪುಷ್ಪಲತಾ ಎನ್‌. ಸಾಲ್ಯಾನ್‌ ಅವರು  ಭದ್ರತಾ ಖಜಾನೆಗೆ ಹಾಗೂ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ. ಆರ್‌. ಮೂಲ್ಕಿ ಕಂಪ್ಯೂಟರೀಕೃತ ಸೇವೆಗಳಿಗೆ ಚಾಲನೆ ನೀಡಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ     ಶ್ರೀ  ಶನಿ ಮಹಾತ್ಮಾ ಸೇವಾ ಸಮಿತಿ ಖಾರ್‌ ಅಧ್ಯಕ್ಷ ಶಂಕರ್‌ ಕೆ. ಸುವರ್ಣ ಅವರು ಮಾತನಾಡಿ, ಗ್ರಾಹಕರ ಅನನ್ಯ ಸೇವೆಯಲ್ಲಿ ತೊಡಗಿಸಿಕೊಂಡ ಪರಿಣಾಮವಾಗಿ ಬ್ಯಾಂಕ್‌ ಶಿಖರೋನ್ನತಿ ಸಾಧಿಸಿದೆ.  ಆಡಳಿತ ಮಂಡಳಿ, ಉನ್ನತಾಧಿಕಾರಿಗಳು ಮತ್ತು ಕರ್ಮಚಾರಿಗಳು ಒಂದು ಪರಿವಾರದಂತೆ ಸೇವಾ ನಿರತವಾಗಿರುವ ಕಾರಣ ರಾಷ್ಟ್ರದ ಸಹಕಾರಿ ರಂಗದಲ್ಲಿ ಪಂಚಸ್ಥಾನವನ್ನು ಅಲಂಕರಿಸಿದೆ. ನಮ್ಮೆಲ್ಲರ ಅಭಿಮಾನದ ಈ ಬ್ಯಾಂಕ್‌ ಬಿಲ್ಲವರ ಕೀರ್ತಿ ಪತಾಕೆಯನ್ನು ವಿಶ್ವಕ್ಕೆ ಪರಿಚಯಿಸಿದೆ. ಈ ಮಹಾನ್‌ ಸಾಧನ ಶೀಲತೆಯಲ್ಲಿ ಜಯ ಸುವರ್ಣರ ಪರಿಶ್ರಮ ಅಸಾಧರಣೀಯ. ಈ ನಮ್ಮ ಶೀಘ್ರ ಬೆಳವಣಿಗೆಯ ಸಹಕಾರಿ ಬ್ಯಾಂಕ್‌ ಇಂತಹ ಮಹಾನ್‌ ವ್ಯಕ್ತಿಯ ಕಾಲಾವಧಿಯಲ್ಲೇ ಮುಂದಿನ ದಿನಗಳಲ್ಲಿ ಭಾರತದಾದ್ಯಂತ ಪಸರಿಸುವಂತಾಗಲಿ ಎಂದು ಹಾರೈಸಿದರು.

ಕಾರ್ಯಧ್ಯಕ್ಷ ಆರ್‌. ಡಿ. ಕೋಟ್ಯಾನ್‌, ಗೌರವಾಧ್ಯಕ್ಷ ಶ್ರೀಧರ್‌ ಜೆ. ಬಂಗೇರ, ಗೌರವ  ಪ್ರಧಾನ  ಕಾರ್ಯದರ್ಶಿ ಯೋಗೇಶ್‌ ಕೆ. ಹೆಜ್ಮಾಡಿ, ಮಾಜಿ ನಿರ್ದೇಶಕರುಗಳಾದ ಎನ್‌. ಎಂ. ಸನಿಲ್‌, ಮೋಹನ್‌ ಜಿ. ಪೂಜಾರಿ, ಸಮಾಜ ಸೇವಕರುಗಳಾದ ಸುರೇಶ್‌ ಸುವರ್ಣ, ಸಿಎ ಅಶ್ವಜಿತ್‌ ಹೆಜ್ಮಾಡಿ, ರತ್ನಾಕರ್‌ ಪೂಜಾರಿ, ಸುರೇಖಾ ಸುವರ್ಣ, ಭೋಜ ಸಿ. ಪೂಜಾರಿ, ಉದ್ಯಮಿ ರವಿ ಪೂಜಾರಿ ಮತ್ತಿತರ ಗಣ್ಯರು ಉಪಸ್ಥಿತರಿದ್ದು ನೂತನ ಶಾಖೆಯ ಸರ್ವೋನ್ನತಿಗೆ ಶುಭಹಾರೈಸಿದರು.

ಎನ್‌. ಎಂ. ಸನಿಲ್‌ ಮತ್ತು ಯೋಗೇಶ್‌ ಕೆ. ಹೆಜ್ಮಾಡಿ ಸಂದಭೋìಚಿತವಾಗಿ ಮಾತನಾಡಿ ಶಾಖೆ ಹಾಗೂ ಬ್ಯಾಂಕಿನ ಸಾಧನೆಗೆ ಅಭಿನಂದಿಸಿ ಶುಭ ಕೋರಿದರು. ಬ್ಯಾಂಕ್‌ನ ನಿರ್ದೇಶಕರುಗಳಾದ ಯು. ಎಸ್‌. ಪೂಜಾರಿ, ಭಾಸ್ಕರ್‌ ಎಂ. ಸಾಲ್ಯಾನ್‌, ಚಂದ್ರಶೇಖರ ಎಸ್‌. ಪೂಜಾರಿ, ಹರೀಶ್ಚಂದ್ರ ಜಿ. ಮೂಲ್ಕಿ, ದಾಮೋದರ ಸಿ. ಕುಂದರ್‌, ಆರ್‌. ಡಿ. ಪೂಜಾರಿ, ಕೆ. ಬಿ. ಪೂಜಾರಿ, ಗಂಗಾಧರ್‌ ಜೆ. ಪೂಜಾರಿ, ಅಶೋಕ್‌ ಎಂ. ಕೋಟ್ಯಾನ್‌, ಜ್ಯೋತಿ ಕೆ. ಸುವರ್ಣ ಉಪಸ್ಥಿತರಿದ್ದರು. ಶಾಖೆಯ ಮುಖ್ಯಸ್ಥೆ ಜಯ ಎ. ಕೋಟ್ಯಾನ್‌, ಸಹಾಯಕ ಪ್ರಬಂಧಕಿ ಜಯಶ್ರೀ ವಿ. ಅಮೀನ್‌, ಸಿಬ್ಬಂದಿಗಳಾದ ಸಚಿನ್‌ ಡಿ. ಪೂಜಾರಿ, ಯಶೋದಾ ಟಿ. ಅಮೀನ್‌, ಉನ್ನತ್‌ ಸಿ. ಬಂಗೇರ, ಗೋಪಾಲ್‌ ಎನ್‌. ಪೂಜಾರಿ ಅವರನ್ನು ಪುಷ್ಪಗುತ್ಛವನ್ನಿತ್ತು  ಗೌರವಿಸಿದರು.

ಮಹಾ ಪ್ರಂಬಧಕರುಗಳಾದ ದಿನೇಶ್‌ ಬಿ. ಸಲ್ಯಾನ್‌, ನವೀನ್‌ಚಂದ್ರ ಎಸ್‌. ಬಂಗೇರ, ಉಪ ಮಹಾ ಪ್ರಂಬಧಕರುಗಳಾದ ಸುರೇಶ್‌ ಎಸ್‌. ಸಾಲ್ಯಾನ್‌, ವಿಶ್ವನಾಥ್‌ ಜಿ. ಸುವರ್ಣ, ಪ್ರಭಾಕರ್‌ ಜಿ. ಪೂಜಾರಿ, ಮಹೇಶ್‌ ಬಿ. ಕೋಟ್ಯಾನ್‌, ಪ್ರಭಾಕರ್‌ ಜಿ. ಸುವರ್ಣ, ಸಹಾಯಕ ಮಹಾ ಪ್ರಂಬಧಕರುಗಳಾದ ಜಗದೀಶ್‌ ಎನ್‌. ಪೂಜಾರಿ, ಮಂಜುಳಾ ಎನ್‌. ಸುವರ್ಣ, ಹರೀಶ್‌ ಕೆ. ಹೆಜ್ಮಾಡಿ, ವಿವಿಧ ಶಾಖೆಗಳ ಮುಖ್ಯಸ್ಥರುಗಳಾದ ಕರುಣಾಕರ್‌ ಸುವರ್ಣ, ಶೀತಲ್‌ ವಿ. ಅಮೀನ್‌ ಚಾರ್ಕೋಪ್‌, ನಿವೃತ್ತ  ಮಹಾ ಪ್ರಂಬಧಕಿ ಶೋಭಾ ದಯಾನಂದ್‌ ಮತ್ತಿತರರು ಉಪಸ್ಥಿತರಿದ್ದರು.

ಉಳ್ಳೂರು ಧನಂಜಯ ಶಾಂತಿ ಗಣಹೋಮವನ್ನು, ಉಳ್ಳೂರು ಶೇಖರ್‌ ಶಾಂತಿ ವಾಸ್ತುಪೂಜೆ, ದ್ವಾರಪ್ರವೇಶ ಪೂಜೆ ನೆರವೇರಿಸಿ ಹರಸಿದರು. ಗಂಗಾಧರ್‌ ಕಲ್ಲಾಡಿ ತೀರ್ಥಪ್ರಸಾದ ವಿತರಿಸಿದರು. ಯಶೋದಾ ತರುಣ್‌ ಅಮೀನ್‌ ದಂಪತಿ ಪೂಜಾಧಿಗಳ ಯಜಮಾನತ್ವ ವಹಿಸಿದ್ದ‌ರು.  ಜಯ ಎ. ಕೋಟ್ಯಾನ್‌ ಸ್ವಾಗತಿಸಿದರು. ಬ್ಯಾಂಕಿನ ಅಭಿವೃದ್ಧಿ ಇಲಾಖಾ ಮುಖ್ಯಸ್ಥ ಮೋಹನ್‌ದಾಸ್‌ ಹೆಜ್ಮಾಡಿ, ಬ್ಯಾಂಕಿನ ಸೇವಾ ವೈಖರಿ ಪ್ರಸ್ತಾಪಿಸಿ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಶಾಖಾ ಮುಖ್ಯಸ್ಥ ಜಯಶ್ರೀ ವಿ. ಅಮೀನ್‌ ವಂದಿಸಿದರು. 

ನಾನೂ ಈ ಬ್ಯಾಂಕ್‌ನಲ್ಲಿ ಉನ್ನತಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದು,  ನನ್ನ ಸೇವಾವಧಿಯಲ್ಲಿ ನೂರು ಶಾಖೆಗಳ ಸೇವಾರ್ಪಣೆ ಆಗಿರುವುದು ನನ್ನ ಪುಣ್ಯ. ನಿವೃತ್ತಿಯ ಬಳಿಕ ಮಾತೃ ಸಂಸ್ಥೆಯ ಅಧ್ಯಕ್ಷನಾಗಿ ಇಂದು ಉದ್ಘಾಟನಾ ದೀಪ ಬೆಳಗಿಸುವ ಅವಕಾಶ ಒಲಿದಿರುವುದು ಮತ್ತೂಂದು ಸೌಭಾಗ್ಯವಾಗಿದೆ. ಬ್ಯಾಂಕಿನ ಸೇವಾವಧಿ ಜೀವನವನ್ನು ನೆಮ್ಮದಿಯಾಗಿ ಅನುಭವಿಸುವಂತಾಗಿಸಿದೆ. ಕೆಳ ವರ್ಗದ, ಮಧ್ಯಮ ವರ್ಗದ ಜನತೆಯ ಆರ್ಥಿಕ ಸುಧಾರಣೆ ಜೊತೆಗೆ ಸಾವಿರಾರು ಉದ್ಯಮ ಶೀಲರನ್ನು ಸೃಷ್ಟಿಸಿದ ಬ್ಯಾಂಕಿನ ಸೇವೆಯೇ ಅನುಪಮವಾಗಿದೆ. ಮಹಾರಾಷ್ಟ್ರ ಸ್ಟೇಟ್‌ ಕೋ. ಆಪರೇಟಿವ್‌ ಬ್ಯಾಂಕ್ಸ್‌  ಅಸೋಸಿಯೇಶನ್‌ನ  “ಪದ್ಮಭೂಷಣ ವಸಂತ್‌ದಾದಾ ಪಾಟೀಲ್‌ ಉತ್ಕೃಷ್ಟ ಸಹಕಾರಿ ಬ್ಯಾಂಕ್‌’ ಗೌರವಕ್ಕೆ ಭಾಜನವಾಗಿರುವ ಈ ಪಥ ಸಂಸ್ಥೆ ಸಮಗ್ರ ಭಾರತೀಯರ ಮೇರಾ ದೇಶ್‌ ಭಾರತ್‌ ಎನ್ನುವಂತೆ ಮೇರಾ ಬ್ಯಾಂಕ್‌ ಭಾರತ್‌ ಆಗಿ ಕಂಗೊಳಿಸುವಂತಾಗಲಿ 
 ನಿತ್ಯಾನಂದ ಡಿ. ಕೋಟ್ಯಾನ್‌ 
(ಅಧ್ಯಕ್ಷರು : ಬಿಲ್ಲವರ ಅಸೋಸಿಯೇಶನ್‌ ಮುಂಬಯಿ).

ಚಿತ್ರ-ವರದಿ:ರೋನ್ಸ್‌ ಬಂಟ್ವಾಳ್‌

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.