ಸಂಘಟನೆಯಿಂದ ಕಾನೂನಾತ್ಮಕ ಹೋರಾಟ ನಡೆಸಿ ಸಮಸ್ಯೆಗೆ ಪರಿಹಾರ: ಶಿವಾನಂದ ಶೆಟ್ಟಿ


Team Udayavani, Mar 16, 2022, 11:39 AM IST

ಸಂಘಟನೆಯಿಂದ ಕಾನೂನಾತ್ಮಕ ಹೋರಾಟ ನಡೆಸಿ ಸಮಸ್ಯೆಗೆ ಪರಿಹಾರ: ಶಿವಾನಂದ ಶೆಟ್ಟಿ

ಮುಂಬಯಿ: ಕಳೆದ ಎರಡು ವರ್ಷಗಳ ಸಂಘರ್ಷದ ಜೀವನದ ನಡುವೆಯೂ ಆಹಾರ್‌ ಸದಾ ಸದಸ್ಯರ ನಡುವೆ ಇದ್ದು, ಸಕಾರಾತ್ಮಕವಾಗಿ ಕೆಲಸ ಮಾಡಿದೆ. ಸರಕಾರದ ಮೂಲಕ ದೊರೆಯುವ ಸಬ್ಸಿಡಿ ಇನ್ನಿತರ ಸಹಾಯವನ್ನು ಸದಸ್ಯರಿಗೆ ತಲುಪುವ ಕೆಲಸ ಸಂಘಟನೆಯಿಂದ ಮುಂದುವರಿಯತ್ತಿದೆ. ಸರಕಾರದ ಮಲತಾಯಿ ಧೋರಣೆಯಂತಹ ಕೆಲವೊಂದು ನಿರ್ಧಾರ ಹೊಟೇಲ್‌ ಉದ್ಯಮಕ್ಕೆ ಮಾರಕವಾಗಿ ಪರಿಣಮಿಸಿದೆ. ಅತೀ ಹೆಚ್ಚು ತೆರಿಗೆ ಮೂಲಕ ಕಂದಾಯ ವಸೂಲು ಮಾಡುತ್ತಿರುವ ಸರಕಾರದ ಕೆಟ್ಟ ನೀತಿ ಬಗ್ಗೆ ಸಂಘಟನೆ ತನ್ನ ಸುಧೀರ್ಘ‌ ಕಾನೂನಾತ್ಮಾಕ ಹೋರಾಟ ಮುಂದುವರಿಸಿ ಸದಸ್ಯರಿಗೆ ಅದರ ಫಲಿತಾಂಶ ನೀಡುವ ಜವಾಬ್ದಾರಿ ಹೊಂದಿದೆ ಎಂದು ಇಂಡಿಯಲ್‌ ಹೊಟೇಲ್‌ ಆ್ಯಂಡ್‌ ರೆಸ್ಟೋರೆಂಟ್‌ ಅಸೋಸಿಯೇಶನ್‌ (ಆಹಾರ್‌) ಅಧ್ಯಕ್ಷ ಶಿವಾನಂದ ಶೆಟ್ಟಿ ಹೇಳಿದ್ದಾರೆ.

ದಿ ವೆಸ್ಟ್‌ನ ಪೂವಾಯಿ ಲೆಕ್‌ ಹೊಟೇಲ್‌ನ ಗ್ರಾಂಡ್‌ಬಾಲ್‌ ರೂಮ್‌ನಲ್ಲಿ ಮಾ. 14ರಂದು ಜರಗಿದ ಇಂಡಿಯನ್‌ ಹೊಟೇಲ್‌ ಆ್ಯಂಡ್‌ ರೆಸ್ಟೋರೆಂಟ್‌ ಅಸೋಸಿಯೇಶನ್‌ನ 42ನೇ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿ, ಕೋವಿಡ್‌ ಸಮಯದಲ್ಲಿ ಸರಕಾರ ಜಾರಿಗೊಳಿಸಿದ ಹೊಟೇಲ್‌ ವ್ಯವಹಾರದ ನೀತಿಯನ್ನು ಮಹಾರಾಷ್ಟ್ರದಾದ್ಯಂತ ಮೌನ ವಿರೋಧ ವ್ಯಕ್ತಪಡಿಸಿದ್ದು, ಅನಂತರದ ಬೆಳವಣಿಗೆಯಲ್ಲಿ ಹೊಟೇಲ್‌ ಮಾಲಕರು ಹಾಗೂ ಕೆಲಸಗಾರರ ಸಮಸ್ಯೆಗಳ ಪರಿಹಾರಕ್ಕಾಗಿ ಆಹಾರ್‌ ಸಂಘಟನೆಯು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ, ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿತ್ತು. ಜತೆಗೆ ಕಂದಾಯ ಸಚಿವ ಬಾಳಾ ಸಾಹೇಬ್‌ ಥೋರಟ್‌, ಮುಂಬಯಿ ಜಿಲ್ಲಾ (ನಗರ)ಉಸ್ತುವಾರಿ ಸಚಿವ ಅಸ್ಲಾಂ ಶೇಖ್‌ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಲಾಯಿತು. ಇದರಿಂದಾಗಿ ಸಕಾರಾತ್ಮಾಕ ಗೆಲುವು ಸಾಧಿಸಿದ್ದೆವು. ಅಲ್ಲದೆ ಹೊಟೇಲ್‌ಗೆ ಬಹುದೊಡ್ಡ ಸಮಸ್ಯೆಯಾಗಿರುವ ಲೈಸನ್ಸ್‌ ಫೀಸ್‌ ಅನ್ನು ಕಡಿತಗೊಳಿಸುವ ಬಗ್ಗೆ ಚರ್ಚೆ ಮುಂದುವರಿದಿದೆ ಎಂದು ತಿಳಿಸಿದರು.

ಆಹಾರ್‌ ವತಿ ಯಿಂದ 20,000 ವ್ಯಾಕ್ಸಿನೇಶನ್‌ ಮತ್ತು ಸಮಸ್ಯೆಯಲ್ಲಿರುವ ಹೊಟೇಲ್‌ ಕೆಲಸಗಾರರಿಗೆ ಸಹಾಯ ಮಾಡುವಲ್ಲಿ ಸದಾ ಕಾರ್ಯ ನಿರತವಾಗಿದ್ದು, ಕಳೆದ 2 ವರ್ಷಗಳಿಂದ ಆಹಾರ್‌ ತನ್ನ ಸದಸ್ಯರಿಗೆ ಮಾಡಿರುವ ಸಹಕಾರ ಮರೆಯುವಂತಿಲ್ಲ. ಹಿರಿಯ ಸಲಹೆಗಾರರ ಪ್ರೋತ್ಸಾಹ ನನ್ನ ಯಶಸ್ಸಿಗೆ ಸಂಪೂರ್ಣ ಸಹಕಾರ ದೊರೆತಿದೆ. ಸುಧಾಕರ ಹೆಗ್ಡೆ, ಸುಭಾಷ್‌ ಸುವರ್ಣ ಅವರು ಪೊಲೀಸ್‌ ಇಲಾಖೆ ಮತ್ತು ಇತರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಆಹಾರ್‌ ಕಳೆದ 2 ದಿನಗಳಿಂದ ವಿವಿಧ ಮನೋರಂಜನೆ ಹಾಗೂ ಹೊಟೇಲ್‌ ಉದ್ಯಮಕ್ಕೆ ಸಂಬಂಧಿಸಿದ ಕಾರ್ಯ ವನ್ನು ಯಶಸ್ವಿಯಾಗಿ ನಡೆಸಿದೆ ಎಂದು ತಿಳಿಸಿದರು.

ಆಹಾರ್‌ ಅಧ್ಯಕ್ಷ ಶಿವಾನಂದ ಶೆಟ್ಟಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಸುಕೇಶ್‌ ಶೆಟ್ಟಿ ವಾರ್ಷಿಕ ವರದಿ ವಾಚಿಸಿದರು. ಗೌರವ ಕೋಶಾಧಿಕಾರಿ ಸುಧಾಕರ ಟಿ. ಶೆಟ್ಟಿ ವಾರ್ಷಿಕ ಖರ್ಚು- ವೆಚ್ಚಗಳ ವಿವರ ನೀಡಿದರು. ವಿಶ್ವನಾಥ್‌ ಶೆಟ್ಟಿ ಆ್ಯಂಡ್‌ ಕಂಪೆನಿಯನ್ನು ಲೆಕ್ಕ ಪರಿಶೋಧಕರಾಗಿ ನೇಮಿಸಲಾಯಿತು.

ಕಳೆದ ಎರಡು ವರ್ಷಗಳ ಕೋವಿಡ್‌ ಸಮಸ್ಯೆಯ ನಡುವೆಯೂ ಸುಮಾರು 60 ಲಕ್ಷ ರೂ. ಗಳ ಸದಸ್ಯತ್ವ ನೋಂದಣಿ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದ ಎಂ. ಪ್ರಸಾದ್‌ ಶೆಟ್ಟಿಯವರನ್ನು ಗೌರವಿಸಲಾಯಿತು.

ಚುನಾವಣೆ ಅಧಿಕಾರಿ ನ್ಯಾಯವಾದಿ ಡಿ.ಕೆ. ಶೆಟ್ಟಿ ಅವರು 2021-22ರ ಸಾಲಿನ ಚುನಾಯಿತ ಸದಸ್ಯರ ವಿವರ ನೀಡಿದರು. ಆಹಾರ್‌ ವತಿಯಿಂದ ಅತೀ ಹೆಚ್ಚು ಅಂಕಗಳಿಸಿದ ಕಾರ್ಮಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಗೌರವಧನ ನೀಡಿದ ವಿವರ, ನ್ಯಾಶನಲ್‌ ಅಸೋಸಿಯೇಶನ್‌ ಆಫ್‌ ಬ್ಲೈಂಡ್‌ಗೆ 2 ಲಕ್ಷ ರೂ. ಧನ ಸಹಾಯ ನೀಡಿದ ಬಗ್ಗೆ ಸಭೆಯಲ್ಲಿ ತಿಳಿಸಲಾಯಿತು.

ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ವಿಜಯ ಪಿ. ಶೆಟ್ಟಿ ಹಾಗೂ ಪಾಯೋಜಕತ್ವ ನೀಡಿ ಸಹಕರಿಸಿದ ಎಲ್ಲ ಕಂಪೆನಿಯ ಪ್ರತಿನಿಧಿಗಳನ್ನು ಗೌರವ ಪ್ರಧಾನ ಕಾರ್ಯದರ್ಶಿ ಸುಕೇಶ್‌ ಶೆಟ್ಟಿ, ವಲಯ ಅಧ್ಯಕ್ಷರು ಅಭಿನಂದಿಸಿದರು.

ಆಹಾರ್‌ ಕಾರ್ಯವನ್ನು ಸಮರ್ಪಕವಾಗಿ ನಿರ್ವ ಹಿಸುತ್ತಿರುವ ವಸಂತ್‌ ಕಾರ್ಕಳ ಮತ್ತು ಅವರ ಬಳಗ ದವರನ್ನು ಹಾಗೂ ಕಚೇರಿಯ ಮಾಧ್ಯಮ ಸಂಪರ್ಕ ಸಹಾಯಕರನ್ನು ಅಭಿನಂದಿಸಲಾಯಿತು. ಮಾಜಿ ಅಧ್ಯಕ್ಷರು ಹಾಗೂ ಹಿರಿಯ ಹೊಟೇಲ್‌ ಉದ್ಯಮಿಗಳನ್ನು ಗೌರವಪೂರ್ವಕವಾಗಿ ಅಭಿನಂದಿಸಲಾಯಿತು.

ಜತೆ ಕಾರ್ಯದರ್ಶಿ ಪ್ರಮೋದ್‌ ಕಾಮತ್‌, ಜತೆ ಕೋಶಾಧಿಕಾರಿ ಅನೂಪ್‌ ಶೆಟ್ಟಿ, ವಿಭಾಗ – 1ರ ಉಪಾಧ್ಯಕ್ಷ ಶಂಕರಶಾನ್‌ ಜಿ. ನಾಯಕ್‌, ವಿಭಾಗ -2ರ ಉಪಾಧ್ಯಕ್ಷ ನಿರಂಜನ್‌ ಎಲ್‌. ಶೆಟ್ಟಿ, ವಿಭಾಗ – 3ರ ಉಪಾಧ್ಯಕ್ಷ ವಿಜಯ್‌ ಕೆ. ಶೆಟ್ಟಿ, ವಿಭಾಗ – 4ರ ಉಪಾಧ್ಯಕ್ಷ ವಿವೇಕ್‌ ಎಂ. ನಾಯಕ್‌, ವಿಭಾಗ -5ರ ಉಪಾಧ್ಯಕ್ಷ ಸಂದೀಪ್‌ ಶೆಟ್ಟಿ, ವಿಭಾಗ – 6ರ ಉಪಾಧ್ಯಕ್ಷ ಸುನೀಲ್‌ ಪಾಟೀಲ್‌, ವಿಭಾಗ – 7ರ ಉಪಾಧ್ಯಕ್ಷ ಡಾ| ಸಂತೋಷ್‌ ಎಂ. ರೈ, ವಿಭಾಗ – 8ರ ಉಪಾಧ್ಯಕ್ಷ ಭುಜಂಗ ಶೆಟ್ಟಿ, ವಿಭಾಗ – 9ರ ಉಪಾಧ್ಯಕ್ಷ ಧೀರಜ್‌ ಶೆಟ್ಟಿ, ವಿಭಾಗ – 10ರ ಉಪಾಧ್ಯಕ್ಷ ಸತೀಶ್‌ ಶೆಟ್ಟಿ  ಉಪಸ್ಥಿತರಿದ್ದರು.

ಸತ್ವಿಕಾ ಮತ್ತು ಭೂಮಿಕಾ ಕಾರ್ಯಕ್ರಮ ನಿರೂಪಿಸಿದರು.

ಆಹಾರ್‌ ಮಹಾನಗರದಲ್ಲಿ ಹೊಟೇಲ್‌ ಉದ್ಯಮಕ್ಕೆ ಒಂದು ಬಲಿಷ್ಠ ಸಂಘಟನೆಯಾಗಿ ಹೊರಹೊಮ್ಮಿದೆ.  ಒಗ್ಗಟ್ಟು ಬಲಿಷ್ಠವಾದಲ್ಲಿ ಯಾವುದೇ ಸಮಸ್ಯೆಯನ್ನು  ಎದುರಿಸಲು ಸಾಧ್ಯ ಎನ್ನುವುದನ್ನು ಸಂಘಟನೆ ತೋರಿಸಿದೆ. -ಲ| ಸಂತೋಷ್‌ ಶೆಟ್ಟಿ

ವರ್ಷದಿಂದ ವರ್ಷಕ್ಕೆ ವೈಶಿಷ್ಟ್ಯಪೂರ್ಣ ಚಟುವಟಿಕೆಗಳೊಂದಿಗೆ ಸದಸ್ಯರಿಗೆ ಪ್ರಯೋಜನವಾಗುತ್ತಿರುವ ಸಂಸ್ಥೆ ಆಹಾರ್‌ ಎಲ್ಲರಿಗೂ ಮಾದರಿ.-ನಾರಾಯಣ ಆಳ್ವ, ಹೊಟೇಲ್‌ ಉದ್ಯಮಿ

ಆಹಾರ್‌ ಕಾಲ ಕಾಲಕ್ಕೆ ಬದಲಾವಣೆ ಮಾಡುತ್ತಾ ಬಂದಿದೆ. 2 ವರ್ಷಗಳಲ್ಲಿ ಎಲ್ಲ ಸಮಸ್ಯೆಗಳ ನಡುವೆ ಎದುರು ನಿಂತು ಹೋರಾಡಿದೆ. ಸಂಘಟನೆಯ ಎಲ್ಲ ಸದಸ್ಯರು ಟೀಮ್‌ ಆಗಿ ಕೆಲಸ ಮಾಡಿದ್ದಾರೆ. -ಚಂದ್ರಹಾಸ ಶೆಟ್ಟಿ, ಮಾಜಿ ಅಧ್ಯಕ್ಷರು, ಬಂಟರ ಸಂಘ ಮುಂಬಯಿ

ಸಮಸ್ಯೆಯನ್ನು ಪರಿಹರಿಸುವ ಕಾರ್ಯದಲ್ಲಿ ತೊಡಗಿರುವಾಗ ಅನೇಕ ರೀತಿಯ ತೊಂದರೆಗಳು ಎದುರಾಗುವುದು ಸಾಮಾನ್ಯ. ಆದರೆ ಕೋವಿಡ್‌ ಕಾಲಘಟ್ಟದಲ್ಲಿ ಅಸೋಸಿಯೇಶನ್‌ ತೆಗೆದುಕೊಂಡ ನಿರ್ಧಾರಗಳು ಸಮಯೋಚಿತ. -ಅರವಿಂದ ಶೆಟ್ಟಿ, ಮಾಜಿ ಅಧ್ಯಕ್ಷರು

ಸೈನಿಕ ಯಾವಾಗಲೂ ಸೈನಿಕ ಎಂಬ ಸಿದ್ಧಾಂತದಲ್ಲಿ ಸಂಘಟನೆ ಕೆಲಸ ಮಾಡುತ್ತಿದೆ. ಕೋವಿಡ್‌ ಸಮದರ್ಭ ಎಲ್ಲ ಸದಸ್ಯರಿಗೆ ತೊಂದರೆಯಾಗಿದೆ. ಆಹಾರ್‌ ಎದೆಗುಂದದೆ  ತನ್ನ ಪರಿವಾರದೊಂದಿಗೆ ಇತರರಿಗೂ ಸಹಾಯ ಮಾಡಿದೆ.-ಆದರ್ಶ್‌ ಶೆಟ್ಟಿ, ಮಾಜಿ ಅಧ್ಯಕ್ಷರು

ಕಠಿನ ಸಮಯದಲ್ಲಿ ಆಹಾರ್‌ ನಿರ್ಧಾರಾತ್ಮಕ ಕೆಲಸಗಳನ್ನು ಮಾಡಿದೆ. ವಿಜಯ ಶೆಟ್ಟಿ ಹಾಗೂ ಮಹೇಶ್‌ ಶೆಟ್ಟಿಯವರ ವೈಶಿಷ್ಟಪೂರ್ಣ ಕೆಲಸ ಹಾಗೂ ಎಂ. ಪ್ರಸಾದ್‌ ಶೆಟ್ಟಿಯವರ 60 ಲಕ್ಷ ರೂ. ಮೆಂಬರ್‌ಶಿಪ್‌ ಕೊಡುಗೆ ಆಶ್ಚರ್ಯಕರವಾದದ್ದು. ಮಹಾರಾಷ್ಟ್ರ ಅನಾವಶ್ಯಕ ಡ್ರೈಡೆಗಳನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಸಂಘಟನೆ ಕೆಲಸ ಮಾಡಬೇಕು.-ಸುಧಾಕರ ಶೆಟ್ಟಿ, ಮಾಜಿ ಅಧ್ಯಕ್ಷರು

 

ಚಿತ್ರ – ವರದಿ: ರಮೇಶ್‌ ಉದ್ಯಾವರ್‌

ಟಾಪ್ ನ್ಯೂಸ್

1BP

NADA; ಕುಸ್ತಿಪಟು ಬಜರಂಗ್ ಅನಿರ್ದಿಷ್ಟಾವಧಿಗೆ ಅಮಾನತು: ಒಲಿಂಪಿಕ್ಸ್‌ ಭಾಗಿ ಅನುಮಾನ

8-

ಸಂವಿಧಾನ ಬದಲಿಸುವ BJPಗೆ ಬುದ್ಧಿ ಕಲಿಸಲು Congress ಪಕ್ಷ ಗೆಲ್ಲಬೇಕು: ದರ್ಶನ್ ಧ್ರುವನಾರಾಯಣ

Gadag; ಚುನಾವಣೆ ಬಳಿಕ ಸಿಎಂ ರಾಜೀನಾಮೆ ಕೊಡುವ ಸಂದರ್ಭ ಬರಬಹುದು: ಸಿ.ಸಿ.ಪಾಟೀಲ್

Gadag; ಚುನಾವಣೆ ಬಳಿಕ ಸಿಎಂ ರಾಜೀನಾಮೆ ಕೊಡುವ ಸಂದರ್ಭ ಬರಬಹುದು: ಸಿ.ಸಿ.ಪಾಟೀಲ್

15

ʼIndian 2ʼ ರಿಲೀಸ್ ಮುಂದೂಡಿಕೆ ಬೆನ್ನಲ್ಲೇ ಧನುಷ್‌ ʼರಾಯನ್‌ʼ ಬಿಡುಗಡೆಗೆ ಪ್ಲ್ಯಾನ್

England Women’s Cricket Team Selection Using AI Technology

AI ತಂತ್ರಜ್ಞಾನ ಬಳಸಿ ಇಂಗ್ಲೆಂಡ್‌ ಮಹಿಳಾ ಕ್ರಿಕೆಟ್‌ ತಂಡದ ಆಯ್ಕೆ

Kollywood: ಅಣ್ಣಾಮಲೈ ಬಯೋಪಿಕ್‌ಗೆ ತಯಾರಿ? ಖಡಕ್‌ ಐಪಿಎಸ್‌ ಅಧಿಕಾರಿಯಾಗಿ ವಿಶಾಲ್‌ ನಟನೆ?

Kollywood: ಅಣ್ಣಾಮಲೈ ಬಯೋಪಿಕ್‌ಗೆ ತಯಾರಿ? ಖಡಕ್‌ ಐಪಿಎಸ್‌ ಅಧಿಕಾರಿಯಾಗಿ ವಿಶಾಲ್‌ ನಟನೆ?

7-haveri

Haveri: ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ; ವಿಡಿಯೋ ವೈರಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara:ಸಿಟಿ ಆಫ್ ವಿಂಡ್ಸ್‌ ಕ್ಯಾಸ್ಪಿಯನ್‌: ಸಮುದ್ರ ಕಿನಾರೆಯ ಪ್ರವಾಸಿ ತಾಣ ಬಾಕು ನಗರ

Desi Swara:ಸಿಟಿ ಆಫ್ ವಿಂಡ್ಸ್‌ ಕ್ಯಾಸ್ಪಿಯನ್‌: ಸಮುದ್ರ ಕಿನಾರೆಯ ಪ್ರವಾಸಿ ತಾಣ ಬಾಕು ನಗರ

Desi Swara: ಅಮೆರಿಕ-ಸೌರಮಾನ ಯುಗಾದಿ ಆಚರಣೆ

Desi Swara: ಅಮೆರಿಕ-ಸೌರಮಾನ ಯುಗಾದಿ ಆಚರಣೆ

Desi Swara: ಅಮ್ಮ ನಿನ್ನ ತೋಳಿನಲ್ಲಿ…..ಕಂದಾ ನಾನು

Desi Swara: ಅಮ್ಮ ನಿನ್ನ ತೋಳಿನಲ್ಲಿ…..ಕಂದಾ ನಾನು

Desi Swara: ಹೆಮ್ಮೆಯ ದುಬೈ ಕನ್ನಡ ಸಂಘ- ಶಾರ್ಜಾ ಮಳೆ ಸಂತ್ರಸ್ಥರಿಗೆ ಸಹಾಯ ಹಸ್ತ

Desi Swara: ಹೆಮ್ಮೆಯ ದುಬೈ ಕನ್ನಡ ಸಂಘ- ಶಾರ್ಜಾ ಮಳೆ ಸಂತ್ರಸ್ಥರಿಗೆ ಸಹಾಯ ಹಸ್ತ

Desi Swara: ವಸಂತನಾಗಮನ- ಇಂಗ್ಲೆಂಡಿನಲ್ಲಿ ಹರುಷದಿ ಸಂಭ್ರಮಿಸಿದ ಕನ್ನಡ ಜನ

Desi Swara: ವಸಂತನಾಗಮನ- ಇಂಗ್ಲೆಂಡಿನಲ್ಲಿ ಹರುಷದಿ ಸಂಭ್ರಮಿಸಿದ ಕನ್ನಡ ಜನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1BP

NADA; ಕುಸ್ತಿಪಟು ಬಜರಂಗ್ ಅನಿರ್ದಿಷ್ಟಾವಧಿಗೆ ಅಮಾನತು: ಒಲಿಂಪಿಕ್ಸ್‌ ಭಾಗಿ ಅನುಮಾನ

8-

ಸಂವಿಧಾನ ಬದಲಿಸುವ BJPಗೆ ಬುದ್ಧಿ ಕಲಿಸಲು Congress ಪಕ್ಷ ಗೆಲ್ಲಬೇಕು: ದರ್ಶನ್ ಧ್ರುವನಾರಾಯಣ

Gadag; ಚುನಾವಣೆ ಬಳಿಕ ಸಿಎಂ ರಾಜೀನಾಮೆ ಕೊಡುವ ಸಂದರ್ಭ ಬರಬಹುದು: ಸಿ.ಸಿ.ಪಾಟೀಲ್

Gadag; ಚುನಾವಣೆ ಬಳಿಕ ಸಿಎಂ ರಾಜೀನಾಮೆ ಕೊಡುವ ಸಂದರ್ಭ ಬರಬಹುದು: ಸಿ.ಸಿ.ಪಾಟೀಲ್

15

ʼIndian 2ʼ ರಿಲೀಸ್ ಮುಂದೂಡಿಕೆ ಬೆನ್ನಲ್ಲೇ ಧನುಷ್‌ ʼರಾಯನ್‌ʼ ಬಿಡುಗಡೆಗೆ ಪ್ಲ್ಯಾನ್

England Women’s Cricket Team Selection Using AI Technology

AI ತಂತ್ರಜ್ಞಾನ ಬಳಸಿ ಇಂಗ್ಲೆಂಡ್‌ ಮಹಿಳಾ ಕ್ರಿಕೆಟ್‌ ತಂಡದ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.