ಭಾರತ್‌ ಕೋ-ಆಪರೇಟಿವ್‌ ಬ್ಯಾಂಕಿನ  42ನೇ ವಾರ್ಷಿಕ ಮಹಾಸಭೆ


Team Udayavani, Jul 1, 2018, 3:16 PM IST

3006mum16.jpg

ಮುಂಬಯಿ: ಹಣ ಕಾಸು ರಂಗದ ಸವಾಲುಗಳನ್ನು ಎದುರಿಸಿ ಆರ್‌ಬಿಐ ನಿಯಮಗಳನ್ನು ನಿಭಾಯಿಸಿದ ಭಾರತ್‌ ಬ್ಯಾಂಕ್‌ ಭಾರತದ ಸಹಕಾರಿ ಬ್ಯಾಂಕಿಂಗ್‌ ಉದ್ಯಮದಲ್ಲಿ ಹೊಸ ಅಧ್ಯಾಯಕ್ಕೆ ಸಾಕ್ಷಿಯಾಗಿದೆ. ಆರ್ಥಿಕ ಕ್ಷೇತ್ರದ ಜಾಗತಿಕ ಜ್ಞಾನ ಮತ್ತು ಕರ್ಮಚಾರಿಗಳ ಉತ್ಕೃಷ್ಟ ತರಬೇತಿಯಿಂದ ಬ್ಯಾಂಕನ್ನು ಕ್ಷಿಪ್ರಗತಿಯಲ್ಲಿ ಮುನ್ನಡೆಸಿದ್ದು,  ಸುಧಾರಿತ ತಂತ್ರಜ್ಞಾನಗಳ ಅಳವಡಿಕೆ ಗಳಿಂದ ಗ್ರಾಹಕರಿಗೆ ತ್ವರಿತ ಸೇವೆ ಗಳನ್ನು ನೀಡಲು ಸಾಧ್ಯವಾಗಿದೆ. ಇವೆಲ್ಲವುಗಳ ಪರಿಣಾಮ ಬ್ಯಾಂಕ್‌ ಸರ್ವೋತ್ಕೃಷ್ಟ  ಗ್ರಾಹಕಸೇವೆ ನೀಡಲು ಬದ್ಧವೆನಿಸಿದೆ. ಸಹಕಾರಿ ಕ್ಷೇತ್ರದ ವ್ಯವಹಾರ ಸ್ಪರ್ಧೆಯಲ್ಲೂ ದಿಟ್ಟ ಹೆಜ್ಜೆಗಳನ್ನಿರಿಸಿದ ಕಾರಣ ಸದೃಢ ಬ್ಯಾಂಕಾಗಿ ಸೇವೆ ನೀಡಿದ ಆತ್ಮತೃಪ್ತಿ, ಆಧುನಿಕ ಆವಿಷ್ಕರಿತ ವ್ಯವಹಾರ ಸಾಧ್ಯತೆಯನ್ನು ಪರಿಶೋಧಿಸಿ ಸೇವೆಯನ್ನು ತ್ವರಿತ ಗೊಳಿಸಿ ಮುನ್ನಡೆದ ಫಲವಾಗಿ ಈ ಸಂಸ್ಥೆ ಜನಸಾಮಾನ್ಯರ ಬ್ಯಾಂಕ್‌ ಎಂದೆಣಿಸಲು ಕಾರಣವಾಗಿದೆ. ಗ್ರಾಹಕರ ಸಂತೃಪ್ತಿಯೇ ಬ್ಯಾಂಕಿನ ಸಾಧನೆಯಾಗಿ ಆಧುನಿಕ ಸಹಕಾರಿ ಬ್ಯಾಂಕಿಂಗ್‌ನ ದಿಗ್ಗಜ ಭಾರತ್‌ ಬ್ಯಾಂಕ್‌ ಎಂದು ಕರೆಸಲ್ಪಡುವುದು ನಮ್ಮ-ನಿಮ್ಮೆಲ್ಲರ ಹೆಮ್ಮೆಯಾಗಿದೆ ಎಂದು ಭಾರತ್‌ ಕೋ ಆಪರೇಟಿವ್‌ ಬ್ಯಾಂಕಿನ ಕಾರ್ಯಾಧ್ಯಕ್ಷ  ಜಯ ಸಿ. ಸುವರ್ಣ ಅವರು ನುಡಿದರು.

ಜೂ. 30ರಂದು  ಸಂಜೆ ಗೋರೆ ಗಾಂವ್‌ ಪೂರ್ವದ ಬ್ರಿಜ್ವಾಸಿ  ಪ್ಯಾಲೇಸ್‌ ಸಭಾಗೃಹದಲ್ಲಿ ನಡೆದ ಭಾರತ್‌ ಬ್ಯಾಂಕಿನ 42ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಹಕರು ವರ್ಷಪೂರ್ತಿ ನೀಡಿದ ಬೆಂಬಲ ಹಾಗೂ ಸಹಕಾರಕ್ಕೆ ಬ್ಯಾಂಕಿನ ನಿರ್ದೇಶಕ ಮಂಡಳಿ, ಆಡಳಿತ ಸಮಿತಿ ಹಾಗೂ ನೌಕರ ವರ್ಗಕ್ಕೆ ಕೃತಜ್ಞತೆ ಸಲ್ಲಿಸುವೆ. ಪ್ರಸಕ್ತ ವರ್ಷದಲ್ಲಿ ನಮ್ಮ ಬ್ಯಾಂಕ್‌ ಎರಡು ನೂತನ ಶಾಖೆಗಳನ್ನು ತೆರೆದಿದೆ. ಬ್ಯಾಂಕಿನ ಬಂಡವಾಳದ ಅಡಿಪಾಯವನ್ನು ಗಟ್ಟಿಗೊಳಿಸುವುದಕ್ಕಾಗಿ ಕೆೇವಲ 17 ದಿನಗಳಲ್ಲಿ ದೀರ್ಘಾವಧಿಯ ಠೇವಣಿಯಾಗಿ 100 ಕೋ. ರೂ. ಗಳ  ಸಂಗ್ರಹಿಸಲಾಗಿದೆ.  ವರದಿ ವರ್ಷದಲ್ಲಿ ಬ್ಯಾಂಕಿಗೆ ಪ್ರತಿಷ್ಠಿತ ಸಂಸ್ಥೆಗಳಿಂದ ಎರಡು ಪ್ರತಿಷ್ಠಿತ ಪ್ರಶಸ್ತಿಗಳು ಪ್ರಾಪ್ತಿಯಾಗಿವೆ. 41 ನೇ ಮಹಾಸಭೆಯಲ್ಲಿ ಅಧಿನಿಯಮಕ್ಕೆ ಮಾಡಿದ ತಿದ್ದುಪಡಿಯನ್ನು ಹೊಸದಿಲ್ಲಿಯ  ಭಾರತ ಸರಕಾರದ ಜತೆ ಕಾರ್ಯದರ್ಶಿಗಳ ಕಚೇರಿ ಹಾಗೂ ಕೇಂದ್ರ ರಿಜಿಸ್ಟಾರ್‌ ಆಫ್‌ ಕೋಪರೇಟಿವ್‌ ಸೊಸೈಟಿಯು ಅನುಮೋದಿಸಿದೆ. ಪ್ರಚಲಿತ ಬ್ಯಾಂಕಿನ ಅಧಿನಿಯಮ ಪ್ರಕಾರ ಶೇ. 15ರಷ್ಟು ಡಿವಿಡೆಂಡ್‌ ಅತ್ಯಧಿಕ ಮಿತಿಯಾಗಿದ್ದು, ಆ ಪ್ರಕಾರವೇ ಶೆೇರುದಾರರಿಗೆ ಈ ಬಾರಿಯೂ ಬ್ಯಾಂಕ್‌ ಶೇ. 15ರಷ್ಟು ಡಿವಿಡೆಂಟ್‌ ನೀಡಲಿಚ್ಛಿಸಿದೆ ಎಂದು ನುಡಿದು,  ಆನ್‌ಲೈನ್‌  ಮೂಲಕ   ಏಕಕಾಲಕ್ಕೆ ಎಲ್ಲ ಶೇರುದಾರರ ಖಾತೆಗೆ ಡಿವಿಡೆಂಡ್‌ ಜಮಾಗೊಳಿಸಿದರು.
ಬ್ಯಾಂಕಿನ  ಮಾತೃಸಂಸ್ಥೆ ಬಿಲ್ಲವರ ಅಸೋಸಿಯೇಶನ್‌ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್‌ ದೀಪ ಪ್ರಜ್ವಲಿಸಿ ಮಹಾಸಭೆಗೆ ಚಾಲನೆ ನೀಡಿದರು. 

ಭಾರತ್‌ ಬ್ಯಾಂಕಿನ ಉಪ ಕಾರ್ಯಾ ಧ್ಯಕ್ಷೆ ನ್ಯಾಯವಾದಿ  ರೋಹಿಣಿ ಜೆ. ಸಾಲ್ಯಾನ್‌, ನಿರ್ದೇಶಕರುಗಳಾದ ವಾಸುದೇವ ಆರ್‌. ಕೋಟ್ಯಾನ್‌, ಪುಷ್ಪಲತಾ ನರ್ಸಪ್ಪ ಸಾಲ್ಯಾನ್‌, ಸಾಲ ಸಮಿತಿಯ ಕಾರ್ಯಾಧ್ಯಕ್ಷ ಕೆ. ಎನ್‌. ಸುವರ್ಣ, ಜೆ. ಎ. ಕೋಟ್ಯಾನ್‌, ಲೆಕ್ಕಪರಿಶೋಧನಾ ಸಮಿತಿಯ ಕಾರ್ಯಾಧ್ಯಕ್ಷ ಯು. ಎಸ್‌ ಪೂಜಾರಿ,  ಕಾನೂನು ಮತ್ತು ಸಾಲ ವಸೂಲಿ ಸಮಿತಿಯ ಕಾರ್ಯಾಧ್ಯಕ್ಷ ನ್ಯಾಯವಾದಿ  ಎಸ್‌. ಬಿ. ಅಮೀನ್‌, ಚಂದ್ರಶೇಖರ ಎಸ್‌. ಪೂಜಾರಿ, ಜ್ಯೋತಿ ಕೆ. ಸುವರ್ಣ, ರೋಹಿತ್‌ ಎಂ. ಸುವರ್ಣ, ದಾಮೋದರ ಸಿ. ಕುಂದರ್‌, ಆರ್‌. ಡಿ. ಪೂಜಾರಿ, ಕೆ. ಬಿ. ಪೂಜಾರಿ, ಹರಿಶ್ಚಂದ್ರ ಜಿ. ಮೂಲ್ಕಿ, ಅಶೋಕ್‌ ಎಂ. ಕೋಟ್ಯಾನ್‌, ಗಂಗಾಧರ್‌ ಜೆ. ಪೂಜಾರಿ, ಭಾಸ್ಕರ್‌ ಎಂ. ಸಾಲ್ಯಾನ್‌, ಸೂರ್ಯಕಾಂತ್‌ ಜೆ. ಸುವರ್ಣ, ಅನºಲಗನ್‌ ಸಿ. ಹರಿಜನ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬಿಲ್ಲವರ ಅ. ಮುಂಬಯಿ ಇದರ  ಪದಾಧಿಕಾರಿಗಳು, ಸದಸ್ಯರು, ಬ್ಯಾಂಕಿನ ಮಾಜಿ ನಿರ್ದೇಶಕರು, ಬಿಲ್ಲವ ಚೇಂಬರ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರಿ ಅಧ್ಯಕ್ಷ ಎನ್‌. ಟಿ. ಪೂಜಾರಿ ಮತ್ತಿತರ ನಿರ್ದೇಶಕರು ಸೇರಿದಂತೆ  ಶೇರುದಾರರು, ಗ್ರಾಹಕರು, ಹಿತೈಷಿಗಳು ಉಪಸ್ಥಿತರಿದ್ದರು. ಬ್ಯಾಂಕಿನ ಸದಸ್ಯರಾದ ಪ್ರಕಾಶ್‌ ಅಗರ್ವಾಲ್‌, ಎನ್‌. ಎಂ. ಸನೀಲ್‌, ಕೃಷ್ಣರಾಜ್‌ ಆರ್‌. ಕೋಟ್ಯಾನ್‌, ನೋಬರ್ಟ್‌ ಡಿ’ಸೋಜಾ, ರವೀಂದ್ರ  ವಿ. ಬೆನಗಿರ್‌, ಶೌಕತ್‌ ಕಲಶೇಕರ್‌, ಕೀರ್ತಿ ಜೆ. ಶಾØ, ಕೃಷ್ಣಮೂರ್ತಿ ಸೇಷಣ್‌, ಹರಿರಾಮ್‌ ಚೌಧುರಿ,  ಎಂ. ರಾಮಚಂದ್ರನ್‌, ಶಕುಂತಳಾ ಕೆ. ಕೋಟ್ಯಾನ್‌, ಕಾಂಚನ್‌ ಹರ್‌ಗೊàವಿಂದ್‌ ಸಹನಿ ಮತ್ತು ಪದ್ಮನಾಭ ಪೂಜಾರಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಬ್ಯಾಂಕಿನ ಪ್ರಧಾನ ಪ್ರಬಂಧಕರಾದ ದಿನೇಶ್‌ ಬಿ. ಸಾಲ್ಯಾನ್‌,  ಸುರೇಶ್‌ ಎಸ್‌. ಸಾಲ್ಯಾನ್‌, ಡಿಜಿಎಂಗಳಾದ ಕಿಶೋರ್‌ ಡಿ. ಕೋಟ್ಯಾನ್‌, ಪ್ರಭಾಕರ್‌ ಐ .ಸುವರ್ಣ, ವಿಶ್ವನಾಥ್‌ ಜಿ. ಸುವರ್ಣ, ವಾಸುದೇವ ಎಂ. ಸಾಲ್ಯಾನ್‌, ಮಹೇಶ್‌ ಬಿ. ಕೋಟ್ಯಾನ್‌, ಸತೀಶ್‌ ಎಂ. ಬಂಗೇರ, ಪ್ರಭಾಕರ್‌ ಜಿ. ಪೂಜಾರಿ, ಜನಾರ್ದನ್‌ ಎಂ. ಪೂಜಾರಿ, ಸಹಾಯಕ ಮಹಾ ಪ್ರಬಂಧಕರುಗಳಾದ ಜಗದೀಶ್‌ ನಾರಾಯಣ, ರಮೇಶ್‌ ಎಚ್‌. ಪೂಜಾರಿ, ಪ್ರವೀಣ್‌ಕುಮಾರ್‌ ಎಸ್‌. ಸುವರ್ಣ, ಮಂಜುಳಾ ಎನ್‌. ಸುವರ್ಣ, ಹರೀಶ್‌ ಹೆಜ್ಮಾಡಿ, ಮೋಹನ್‌ ಎನ್‌. ಸಾಲ್ಯಾನ್‌, ಮುಖ್ಯ ಮಾಹಿತಿ ಅಧಿಕಾರಿ ನಿತ್ಯಾನಂದ ಎಸ್‌. ಕಿರೋಡಿಯನ್‌, ನಿವೃತ್ತ ಜಿಎಂ ಶೋಭಾ ದಯಾನಂದ್‌,  ಮತ್ತಿತರ ಉನ್ನತಾಧಿಕಾರಿಗಳು, ವಿವಿಧ ಶಾಖೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಬ್ಯಾಂಕ್‌ ಅಧಿಕಾರಿ ಯಶೋಧರ್‌ ಡಿ. ಪೂಜಾರಿ ಪ್ರಾರ್ಥನೆಗೈದರು. ಪ್ರಧಾನ ಪ್ರಬಂಧಕ ವಿದ್ಯಾನಂದ ಎಸ್‌. ಕರ್ಕೇರ, ವಂದಿಸಿದರು.

ಬ್ಯಾಂಕಿನ  ಸಿಇಒ ಮತ್ತು ಆಡಳಿತ ನಿರ್ದೇಶಕ ಸಿ. ಆರ್‌. ಮೂಲ್ಕಿ  ಸ್ವಾಗತಿಸಿ ಬ್ಯಾಂಕಿನ 2017-2018ರ ಕ್ಯಾಲೆಂಡರ್‌ ವರ್ಷದ ವಾರ್ಷಿಕ ಕಾರ್ಯಸಾಧನೆಗಳ ಮಾಹಿತಿ ನೀಡಿದರು.  ಪಾಲುದಾರಿಕ ಬಂಡವಾಳ 259.52 ಕೋ. ರೂ. ಗಳು,  ಕಾಯ್ದಿರಿಸಿದ ಸ್ಥಿರನಿಧಿ  776.84 ಕೋ. ರೂ. ಗಳು,  ಠೇವಣಾತಿ  8,300.65 ಕೋ. ರೂ. ಗಳು, ಉಳಿತಾಯ  ಠೇವಣಾತಿ 1530.28 ಕೋ. ರೂ. ಗಳು,  ಚಾಲ್ತಿ ಠೇವಣಾತಿ 723.01 ಕೋ. ರೂ.ಗಳು, ಆವರ್ತ ಠೇವಣಾತಿ177.91 ಕೋ. ರೂ.ಗಳು,  ಭಾರತ್‌ ದೈನಂದಿನ ಠೇವಣಾತಿ 62.37 ಕೋ. ರೂ.ಗಳಾಗಿದ್ದು ಗತ ಸಾಲಿನಲ್ಲಿ ಒಟ್ಟು 10,794.22 ಕೋಟಿ ರೂ. ವ್ಯವಹಾರ ನಡೆಸಿದೆ. 

ಸಾಲ ಮತ್ತು ಮುಂಗಡ (ಲೋನ್‌ ಆ್ಯಂಡ್‌ ಅಡ್ವಾನ್ಸ್‌) 7,770.80 ಕೋ. ರೂ., ನಿಬಿಡ ಆದಾಯ1,180.59 ಕೋ. ರೂ.,  ನಿವ್ವಳ ಲಾಭ 93.38 ಕೋ. ರೂ.ಗಳು. ವರ್ಕಿಂಗ್‌ ಕ್ಯಾಪಿಟಲ್‌ 12,462.27 ಕೋ. ರೂ.ಗಳಷ್ಟು ವ್ಯವಹರಿಸಲಾಗಿದೆ ಎಂದರಲ್ಲದೆ  ಈ ಬಾರಿಯೂ 
ಲೆಕ್ಕ ಶೋಧನಾ ಶ್ರೇಣೀಕರಣ ಪ್ರಕಾರ (ಆಡಿಟ್‌ ಕ್ಲಾಸಿಫಿಕೇಶನ್‌) “ಎ’ ದರ್ಜೆಯ ಸ್ಥಾನದೊಂದಿಗೆ ಧೃಢೀಕೃತಗೊಂಡಿದೆ ಎಂದು  ತಿಳಿಸಿ ಸಭಾ ಕಲಾಪವನ್ನು ನಡೆಸಿಕೊಟ್ಟರು.
 
ಚಿತ್ರ- ವರದಿ: ರೋನ್ಸ್‌  ಬಂಟ್ವಾಳ್‌

ಟಾಪ್ ನ್ಯೂಸ್

varun gandhi

BJP; ರಾಯ್‌ಬರೇಲಿಯಲ್ಲಿ ಸ್ಪರ್ಧಿಸಲು ವರುಣ್‌ ಗಾಂಧಿ ನಕಾರ?

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

varun gandhi

BJP; ರಾಯ್‌ಬರೇಲಿಯಲ್ಲಿ ಸ್ಪರ್ಧಿಸಲು ವರುಣ್‌ ಗಾಂಧಿ ನಕಾರ?

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.