ಸರ್ವರ ಸಹಕಾರದಿಂದ ಬ್ಯಾಂಕ್‌ನಿಂದ ಉತಮ ಸೇವೆ: ಸಂತೋಷ್‌ ಕೆ. ಪೂಜಾರಿ

ಈ ಪರಿಸರದಲ್ಲಿ ಅಭಿವೃದ್ಧಿ ಪಡೆಯುವಲ್ಲಿ ಇಲ್ಲಿನ ಗ್ರಾಹಕರು ಠೇವಣಿದಾರರು.

Team Udayavani, Aug 23, 2021, 5:23 PM IST

ಸರ್ವರ ಸಹಕಾರದಿಂದ ಬ್ಯಾಂಕ್‌ನಿಂದ ಉತಮ ಸೇವೆ: ಸಂತೋಷ್‌ ಕೆ. ಪೂಜಾರಿ

ಮುಂಬಯಿ, ಆ. 22: ಭಾರತ್‌ ಬ್ಯಾಂಕ್‌ನ ಯಾವುದೇ ಶಾಖೆಗೆ ಗ್ರಾಹಕರು ಆಗಮಿಸುವುದೆಂದರೆ ಅವರು ಸ್ವಂತ ಮನೆಗೆ ಆಗಮಿಸಿದ ಅನುಭವ ಆಗುತ್ತದೆ. ಬ್ಯಾಂಕ್‌ನ ಸಿಬಂದಿ ಗ್ರಾಹಕರಿಗೆ ನೀಡುವ ಸೇವೆ ಹಾಗೂ ಗ್ರಾಹಕರ ಪ್ರಶಂಸ ನೀಯ ಮಾತುಗಳು ಬ್ಯಾಂಕ್‌ನ ಸಿಬಂದಿಗೆ ಸೇವೆ ಮಾಡುವುದಕ್ಕೆ ಪ್ರೋತ್ಸಾಹವಾಗುತ್ತದೆ. ಭಾರತ್‌ ಬ್ಯಾಂಕ್‌ ದೇಶದ ವಿವಿ ಧೆಡೆ ಶಾಖೆಗಳನ್ನು ಹೊಂದಿದ್ದು, ಎಲ್ಲರ ಸಹಕಾರದಿಂದ ಉತ್ತಮ ಸೇವೆ ನೀಡುತ್ತಿದೆ.

ಕೊರೊನಾ ಸಂದರ್ಭದಲ್ಲಿ ಬ್ಯಾಂಕ್‌ನ ಸಿಬಂದಿ ಜೀವದ ಹಂಗು ತೊರೆದು ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡಿದ್ದಾರೆ ಎಂದು ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಮಲಾಡ್‌ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಸಂತೋಷ್‌ ಕೆ. ಪೂಜಾರಿ ತಿಳಿಸಿದರು.

ಆ. 21ರಂದು ಭಾರತ್‌ ಬ್ಯಾಂಕ್‌ ಮಲಾಡ್‌ ಪೂರ್ವ ಕೊಂಕಣಿಪಾಡ ಶಾಖೆಯಲ್ಲಿ ಭಾರತ್‌ ಬ್ಯಾಂಕ್‌ನ 43ನೇ ಸಂಸ್ಥಾಪನ ದಿನಾಚರಣೆ ಸಮಾರಂಭ ದಲ್ಲಿ ಮುಖ್ಯ ಅತಿಥಿಯಾಗಿದ್ದ ಅವರು ಕೇಕ್‌ ಕತ್ತರಿಸಿ ಮಾತನಾಡಿ, ದಿ| ಜಯ ಸುವರ್ಣರ ಕನಸನ್ನು ನನಸಾಗಿಸುವಲ್ಲಿ ಬ್ಯಾಂಕ್‌ನ ಆಡಳಿತ ಮಂಡಳಿ, ಸಿಬಂದಿ ಕ್ರೀಯಾಶೀಲರಾಗಿದ್ದು, ಈ ಶಾಖೆಯು ಇನ್ನಷ್ಟು ಅಭಿವೃದ್ಧಿಗೊಳ್ಳಲು ದುಡಿಯುತ್ತಿರುವ ಶಾಖಾ ಪ್ರಮುಖರು, ಸಿಬಂದಿ ಹಾಗೂ ಗ್ರಾಹಕರ ಕೊಡುಗೆ ಅಪಾರ ಎಂದು ತಿಳಿಸಿ ಬ್ಯಾಂಕ್‌ ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ವಿವರಿಸಿದರು.

ಅತಿಥಿಗಳಾಗಿ ಉದ್ಯಮಿಗಳಾದ ರಘುನಾಥ ಜಾದವ್‌, ಆಸಿಫ್ ಮನ್ಸೂರಿ, ಸ್ನೇಹಲ್‌ ಲಾಡೆ, ಶಾಮಾ ಕಾರ್ನಾಡ್‌, ಮಲಾಡ್‌ ಲಕ್ಷ್ಮಣ್‌ ನಗರದ ಶ್ರೀ ಶನಿಮಹಾತ್ಮ ಪೂಜಾ ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಸಂತೋಷ್‌ ಶೆಟ್ಟಿ ಉಪಸ್ಥಿತರಿದ್ದರು.

ಶಾಖೆಯ ಪ್ರಬಂಧಕರಾದ ಸರೋಜಾ ಸುವರ್ಣ ಮಾತನಾಡಿ, ಈ ಪರಿಸರದಲ್ಲಿ ಅಭಿವೃದ್ಧಿ ಪಡೆಯುವಲ್ಲಿ ಇಲ್ಲಿನ ಗ್ರಾಹಕರು ಠೇವಣಿದಾರರು. ಕನ್ನಡಿಗರ ಸಂಘ – ಸಂಸ್ಥೆಗಳು ಸಹಕರಿಸುತ್ತಾ ಬಂದಿವೆ ಎಂದು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಬ್ಯಾಂಕ್‌ನ ಶಾಖಾ ಉಪ ಪ್ರಮುಖ ರಾದ ದೀಪಕ್‌ ಪ್ರಭು, ಭಾವಿಕ ಪರ್ಮಾರ್‌, ನಿರಂಜನ್‌ ಪ್ರಸಾದ್‌, ರಚನಾ ಕುಂದರ್‌, ರಚಿತಾ ಕೋಟ್ಯಾನ್‌, ನಾಗರಾಜ್‌ ಪೂಜಾರಿ ಮೊದಲಾದವರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.

ಕರಾವಳಿಯ ತುಳು ಕನ್ನಡಿಗರಿಗೆ ಗೌರವ
ಮಲಾಡ್‌ ಪೂರ್ವದ ಕೊಂಕಣಿಪಾಡ ಶಾಖೆಯು ಭಾರತ್‌ ಬ್ಯಾಂಕ್‌ನ 70ನೇ ಶಾಖೆಯಾಗಿದೆ. ಸಹಕಾರಿ ಬ್ಯಾಂಕ್‌ ಕ್ಷೇತ್ರದಲ್ಲಿ ಅಲ್ಪಾವಧಿಯಲ್ಲೇ ಉನ್ನತ ಮಟ್ಟಕ್ಕೇರಿದ ಭಾರತ್‌ ಬ್ಯಾಂಕ್‌ ಮಹಾರಾಷ್ಟ, ಗುಜರಾತ್‌, ಕರ್ನಾಟಕದಲ್ಲಿ 103 ಶಾಖೆಗಳನ್ನು ಹೊಂದಿದೆ. ಬ್ಯಾಂಕ್‌ನ ಅಭಿವೃದ್ಧಿಗೆ ಮಾಜಿ ಕಾರ್ಯಾಧ್ಯಕ್ಷ, ಬಿಲ್ಲವ ಸಮಾಜದ ಮುಖಂಡ ಜಯ ಸುವರ್ಣರ ಕೊಡುಗೆ ಅವಿಸ್ಮರಣೀಯ. ಪ್ರಸ್ತುತ ಕಾರ್ಯಾಧ್ಯಕ್ಷರಾಗಿರುವ ಯು. ಶಿವಾಜಿ ಪೂಜಾರಿ ಮತ್ತು ದಕ್ಷ ನಿರ್ದೇಶಕ ಮಂಡಳಿಯ ಕಠಿನ ಪರಿಶ್ರಮದಿಂದ ಭಾರತ್‌ ಬ್ಯಾಂಕ್‌ ಅಭಿವೃದ್ಧಿಯ ಪಥದತ್ತ ಸಾಗುತ್ತಿದೆ. ಸಿಬಂದಿಯ ಸೇವಾ ಕಾರ್ಯಗಳು ಸಾಮಾನ್ಯ ಖಾತೆದಾರರಿಗೆ ಸಂತೃಪ್ತಿ ನೀಡಿದೆ. ಬ್ಯಾಂಕ್‌ನ ಅಭಿವೃದ್ಧಿಯಿಂದ ಬಿಲ್ಲವ ಸಮುದಾಯಕ್ಕೆ ಮತ್ತು ಕರಾವಳಿಯ ತುಳು ಕನ್ನಡಿಗರಿಗೆ ಗೌರವ ತಂದಿದೆ.

ಟಾಪ್ ನ್ಯೂಸ್

ಕಲಾಪಗಳ ನೇರ ಪ್ರಸಾರಕ್ಕೆ ಶೀಘ್ರ ಸ್ವಂತ ವ್ಯವಸ್ಥೆ: ಸುಪ್ರೀಂಕೋರ್ಟ್‌

ಕಲಾಪಗಳ ನೇರ ಪ್ರಸಾರಕ್ಕೆ ಶೀಘ್ರ ಸ್ವಂತ ವ್ಯವಸ್ಥೆ: ಸುಪ್ರೀಂಕೋರ್ಟ್‌

ಬಿಜೆಪಿಗೆ 2024ರವರೆಗೂ ಜೆ.ಪಿ.ನಡ್ಡಾ ಅಧ್ಯಕ್ಷ?

ಬಿಜೆಪಿಗೆ 2024ರವರೆಗೂ ಜೆ.ಪಿ.ನಡ್ಡಾ ಅಧ್ಯಕ್ಷ?

ಒಂದು ಆವರಣದಲ್ಲಿ ಒಂದೇ ಶಾಲೆ ನಡೆಸಲು ಸಚಿವರ ಸೂಚನೆ

ಒಂದು ಆವರಣದಲ್ಲಿ ಒಂದೇ ಶಾಲೆ ನಡೆಸಲು ಸಚಿವರ ಸೂಚನೆ

ಮಕ್ಕಳ ಕಳ್ಳರ ವದಂತಿಗಳಿಗೆ ಕಿವಿಗೊಡಬೇಡಿ

ಮಕ್ಕಳ ಕಳ್ಳರ ವದಂತಿಗಳಿಗೆ ಕಿವಿಗೊಡಬೇಡಿ

ದ್ವಾರಕಾ – ಬದರಿ ಶ್ರೀಗಳಿಗೆ ಅನುಗ್ರಹ: ಶ್ರೀಗಳಿಗೆ ದಂಡ – ಕಮಂಡಲ ನೀಡಿದ ಶೃಂಗೇರಿ ಶ್ರೀಗಳು

ದ್ವಾರಕಾ – ಬದರಿ ಶ್ರೀಗಳಿಗೆ ಅನುಗ್ರಹ: ಶ್ರೀಗಳಿಗೆ ದಂಡ – ಕಮಂಡಲ ನೀಡಿದ ಶೃಂಗೇರಿ ಶ್ರೀಗಳು

ಖಾಸಗಿ ದರ್ಬಾರ್‌ ಆರಂಭ; 8ನೇ ಬಾರಿಗೆ ಖಾಸಗಿ ಯದುವೀರ್‌ ದರ್ಬಾರ್‌

ಖಾಸಗಿ ದರ್ಬಾರ್‌ ಆರಂಭ; 8ನೇ ಬಾರಿಗೆ ಖಾಸಗಿ ಯದುವೀರ್‌ ದರ್ಬಾರ್‌

ಗಾಂಜಾ ಗ್ಯಾಂಗ್‌ನಿಂದ ಮೊಬೈಲ್‌, ಹಣ ದರೋಡೆ: ಕೇಸು ದಾಖಲು

ಗಾಂಜಾ ಗ್ಯಾಂಗ್‌ನಿಂದ ಮೊಬೈಲ್‌, ಹಣ ದರೋಡೆ: ಕೇಸು ದಾಖಲುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಂಟರ ಕಾರ್ಯಕ್ರಮಗಳಿಗೆ ನನ್ನನ್ನು ಕರೆಯಲು ಮರೆಯಬೇಡಿ: ಡಿಸಿಎಂ ಫಡ್ನವೀಸ್‌

ಬಂಟರ ಕಾರ್ಯಕ್ರಮಗಳಿಗೆ ನನ್ನನ್ನು ಕರೆಯಲು ಮರೆಯಬೇಡಿ: ಡಿಸಿಎಂ ಫಡ್ನವೀಸ್‌

ಗುರುಗಳಿಂದ ಸಮಾಜ ಸುಧಾರಣೆಗೆ ಕಾಯಕಲ್ಪ: ಜಿ. ಕೆ. ಕೆಂಚನಕೆರೆ 

ಗುರುಗಳಿಂದ ಸಮಾಜ ಸುಧಾರಣೆಗೆ ಕಾಯಕಲ್ಪ: ಜಿ. ಕೆ. ಕೆಂಚನಕೆರೆ 

ಬಿಲ್ಲವರ ಘನತೆ, ಗೌರವ, ಅಭಿಮಾನಕ್ಕೆ ಶಕ್ತಿಯಾಗೋಣ: ಎನ್‌. ಟಿ. ಪೂಜಾರಿ

ಬಿಲ್ಲವರ ಘನತೆ, ಗೌರವ, ಅಭಿಮಾನಕ್ಕೆ ಶಕ್ತಿಯಾಗೋಣ: ಎನ್‌. ಟಿ. ಪೂಜಾರಿ

TDY-1

ದೈವೀಶಕ್ತಿಯ ನಂಬಿಕೆ ಬದುಕನ್ನು ಬದಲಾಯಿಸಬಲ್ಲದು: ನಿತ್ಯಾನಂದ ಕೋಟ್ಯಾನ್‌

ಪುಣೆ ಬಂಟರ ಸಂಘ: ಸಂಭ್ರಮದ ಗಣೇಶೋತ್ಸವ, ಗಣಪತಿ ವಿಸರ್ಜನೆ

ಪುಣೆ ಬಂಟರ ಸಂಘ: ಸಂಭ್ರಮದ ಗಣೇಶೋತ್ಸವ, ಗಣಪತಿ ವಿಸರ್ಜನೆ

MUST WATCH

udayavani youtube

ಓದಿನ ಜೊತೆ ಕೃಷಿ : ಮಕ್ಕಳೇ ನಿರ್ಮಿಸಿದ ‘ಆರೋಗ್ಯವನ’ !

udayavani youtube

ಕ್ರಿಯೇಟಿವ್ ಪಿಯು ಕಾಲೇಜು ಮೂಡಬಿದ್ರಿ

udayavani youtube

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಕಾಂಗ್ರೆಸ್ ನ ಟಾಪ್ ಲೀಡರ್ ಗಳೇ ಬೇಲ್ ನಲ್ಲಿ‌ ಇದ್ದಾರೆ

udayavani youtube

ದೇವ್ರೇ ನನಗೆ 25 ಕೋಟಿ ಬಹುಮಾನ ಬರಬಾರದಿತ್ತು…

udayavani youtube

ಪತ್ರಿ ವರ್ಷ ಈ ಬೆಣ್ಣೆಹಣ್ಣು ಮರದಲ್ಲಿ 300 ರಿಂದ 400 ಹಣ್ಣುಗಳು ಸಿಗುತ್ತದೆ

ಹೊಸ ಸೇರ್ಪಡೆ

ಕಲಾಪಗಳ ನೇರ ಪ್ರಸಾರಕ್ಕೆ ಶೀಘ್ರ ಸ್ವಂತ ವ್ಯವಸ್ಥೆ: ಸುಪ್ರೀಂಕೋರ್ಟ್‌

ಕಲಾಪಗಳ ನೇರ ಪ್ರಸಾರಕ್ಕೆ ಶೀಘ್ರ ಸ್ವಂತ ವ್ಯವಸ್ಥೆ: ಸುಪ್ರೀಂಕೋರ್ಟ್‌

ಬಿಜೆಪಿಗೆ 2024ರವರೆಗೂ ಜೆ.ಪಿ.ನಡ್ಡಾ ಅಧ್ಯಕ್ಷ?

ಬಿಜೆಪಿಗೆ 2024ರವರೆಗೂ ಜೆ.ಪಿ.ನಡ್ಡಾ ಅಧ್ಯಕ್ಷ?

ಒಂದು ಆವರಣದಲ್ಲಿ ಒಂದೇ ಶಾಲೆ ನಡೆಸಲು ಸಚಿವರ ಸೂಚನೆ

ಒಂದು ಆವರಣದಲ್ಲಿ ಒಂದೇ ಶಾಲೆ ನಡೆಸಲು ಸಚಿವರ ಸೂಚನೆ

ದೇಶಾದ್ಯಂತ ದುರ್ಗಾರಾಧನೆ ವಿಭಿನ್ನ -ವಿಶಿಷ್ಟ: ರಾಜ್ಯಗಳಲ್ಲಿ ಒಂದೊಂದು ವಿಶೇಷ

ದೇಶಾದ್ಯಂತ ದುರ್ಗಾರಾಧನೆ ವಿಭಿನ್ನ -ವಿಶಿಷ್ಟ: ರಾಜ್ಯಗಳಲ್ಲಿ ಒಂದೊಂದು ವಿಶೇಷ

ನವರಾತ್ರಿ ಇಂದಿನ ಆರಾಧನೆ; ಕಂಕಣ ಭಾಗ್ಯದ ಅಧಿದೇವತೆ ಬ್ರಹ್ಮಚಾರಿಣಿ

ನವರಾತ್ರಿ ಇಂದಿನ ಆರಾಧನೆ; ಕಂಕಣ ಭಾಗ್ಯದ ಅಧಿದೇವತೆ ಬ್ರಹ್ಮಚಾರಿಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.