ಮೇ 12: ಬಸವೇಶ್ವರ ಶರಣ ಮಂಡಳಿಯಿಂದ ಬಸವೇಶ್ವರ ಜಯಂತಿ

Team Udayavani, May 10, 2019, 2:31 PM IST

ಡೊಂಬಿವಲಿ: ಡೊಂಬಿವಲಿಯ ಶ್ರೀ ಬಸವೇಶ್ವರ ಶರಣ ಮಂಡಲದ ವತಿಯಿಂದ ಜಗಜ್ಯೋತಿ ಶ್ರೀ ಬಸವೇಶ್ವರರ 888 ನೇ ಜಯಂತ್ಯುತ್ಸವವು ಮೇ 12 ರಂದು ಡೊಂಬಿವಲಿ ಪೂರ್ವದ ಗಣೇಶ ಮಂದಿರದ ವಕ್ರತುಂಡ ಸಭಾಗೃಹದಲ್ಲಿ ನಡೆಯಲಿದೆ.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಇಳ್ಕಲ್‌ ಬಿತ್ತರಗಿ ಸಂಸ್ಥಾನ ಮಠದ ಗುರು ಮಹಾಂತ ಸ್ವಾಮಿಗಳು ಹಾಗೂ ಗೌರವ ಅತಿಥಿಯಾಗಿ ಡಾ| ಸಿದ್ಧಣ್ಣ ಲಂಗೋಟಿ ಅವರು ಆಗಮಿಸಿ ಬಸವಣ್ಣನವರ ವಿಶ್ವ ಸಂದೇಶ ಮತ್ತು ಸ್ತ್ರೀ ಕುಲೋದ್ಧಾರಕ ಬಸವಣ್ಣ ಎಂಬ ವಿಷಯಗಳ ಕುರಿತು ಕ್ರಮವಾಗಿ ಉಪನ್ಯಾಸ ನೀಡಲಿದ್ದಾರೆ.

ಇದೇ ಸಂದರ್ಭದಲ್ಲಿ ಖ್ಯಾತ ಗಾಯಕಿ ರಶ್ಮೀ ಕಾಖಂಡಕಿ ಅವರಿಂದ ವಚನ ಗಾಯನ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಮಾಜ ಬಾಂಧವರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಸಂಸ್ಥೆಯ ಪ್ರಮುಖರಾದ ಶಿವಶಂಕರ ಕೊಂಡೆಗುಳಿ, ಎಂ. ಆರ್‌. ಹೊಸಕೋಟಿ ಹಾಗೂ ಎಸ್‌. ಎನ್‌. ಸೋಮಾ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ