ಪರಿವಾರದೊಂದಿಗೆ ಗೋಪಾಲ ಶೆಟ್ಟಿ ಮತದಾನ

Team Udayavani, Apr 30, 2019, 11:22 AM IST

ಮುಂಬಯಿ: ಉತ್ತರ ಮುಂಬಯಿ ಲೋಕಸಭಾ ಕ್ಷೇತ್ರದ ಸಂಸದ, ಭಾರತೀಯ ಜನತಾ ಪಕ್ಷದ ಅಭ್ಯರ್ಥಿ, ತುಳು-ಕನ್ನಡಿಗ ಗೋಪಾಲ ಶೆಟ್ಟಿಯವರು ಪರಿವಾರದೊಂದಿಗೆ ಇಂದು ಮುಂಜಾನೆ ಬೊರಿವಲಿ ಪಶ್ಚಿಮ ಸಾಯಿಬಾಬ ನಗರದ ಜೆ. ಬಿ. ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಇವರೊಂದಿಗೆ ತಾಯಿ ಗುಲಾಬಿ ಶೆಟ್ಟಿ, ಪತ್ನಿ ಉಷಾ ಶೆಟ್ಟಿ, ಪುತ್ರಿ ಜ್ಯೋತಿ ಮತ್ತು ಪುತ್ರ ರಾಕೇಶ್‌ ಶೆಟ್ಟಿ ಅವರೂ ತಮ್ಮ ಹಕ್ಕನ್ನು ಚಲಾಯಿಸಿದರು. ಆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮತದಾರರು ನನ್ನ ಸೇವಾ ಕಾರ್ಯಗಳನ್ನು ಗುರುತಿಸಿದ್ದು ಬಹುಮತದಿಂದ ಗೆಲ್ಲುವುದರಲ್ಲಿ ಸಂದೇಹವಿಲ್ಲ ಎಂದರು. ಗೋಪಾಲ ಶೆಟ್ಟಿ ತುಳು ಕನ್ನಡಿಗ ಅಭಿಮಾನಿ ಬಳಗದ ರೂವಾರಿ, ಪ್ರಚಾರ ಸಮಿತಿಯ ಪ್ರಮುಖ, ಉದ್ಯಮಿ ಎರ್ಮಾಳ್‌ ಹರೀಶ್‌ ಶೆಟ್ಟಿ ಇದೇ ಸಂದರ್ಭದಲ್ಲಿ ಮತ ಚಲಾಯಿಸಿದರು.

ಚುನಾವಣೆಗೆ ಮೊದಲು ಎರ್ಮಾಳ್‌ ಹರೀಶ್‌ ಶೆಟ್ಟಿ ಅವರು, ತುಳು ಕನ್ನಡಿಗ ಅಭಿಮಾನಿ ಬಳಗದ ವತಿಯಿಂದ ಬೊರಿವಲಿ, ದಹಿಸರ್‌, ಕಾಂದಿವಲಿ, ಮಲಾಡ್‌ ಪರಿಸರದಲ್ಲಿ ತುಳು ಕನ್ನಡಿಗರನ್ನು ಒಟ್ಟುಗೂಡಿಸಿ ಸಭೆಯನ್ನು ಆಯೋಜಿಸಿ ಗೋಪಾಲ ಶೆಟ್ಟಿ ಅವರನ್ನು ದೊಡ್ಡ ಪ್ರಮಾಣದ ಅಂತರದಲ್ಲಿ ಜಯಿಸುವಂತೆ ಮಾಡಲು ನಿರಂತರವಾಗಿ ಪ್ರಯತ್ನಿಸಿ¨ªಾರೆ. ಅಲ್ಲದೆ ಇಂದು ನಗರದ ತುಳು ಕನ್ನಡಿಗ ಜಾತೀಯ ಹಾಗೂ ಇತರ ಎÇÉಾ ಸಂಘ ಸಂಸ್ಥೆಗಳ ಪ್ರಮುಖರು, ತುಳು ಕನ್ನಡಿಗರು ಮಹಾನಗರದಿಂದ ಹೊರಗೆ ಪ್ರಯಾಣಿಸದೆ ತಮ್ಮ ಮತ ಚಲಾಯಿಸಿದರು.

ಬೊರಿವಲಿ ಶಾಸಕ, ರಾಜ್ಯ ಶಿಕ್ಷಣ ಸಚಿವ ವಿನೋದ್‌ ತಾಬ್ಡೆ, ದಹಿಸರ್‌ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಶಾಸಕಿ ಮನೀಷಾ ಚೌಧರಿ, ಮಾಘಾಠಾಣೆ ಶಿವಸೇನೆ ಶಾಸಕರಾದ ಪ್ರಕಾಶ್‌ ಸುರ್ವೆ, ಕಾಂದಿವಲಿ ಪೂರ್ವದ ಬಿಜೆಪಿ ಶಾಸಕ ಅತುಲ್‌ ಭಟ್‌ ಖಳ್ಕರ್‌, ಚಾರ್‌ಕೋಪ್‌ ಬಿಜೆಪಿ ಶಾಸಕ ಯೋಗೇಶ್‌ ಸಾಗರ್‌, ಎಂಎಲ್‌ಸಿಗಳಾದ ವಿಜಯ್‌ ಭೈ ಗಿರ್ಕರ್‌ ಮತ್ತು ಪ್ರವೀಣ್‌ ಧಾರೆಕಾರ್‌ ಹಾಗೂ 40 ಕ್ಕೂ ಅಧಿಕ ವಾರ್ಡ್‌ಗಳ ಮುನ್ಸಿಪಾಲ್‌ ಕಾರ್ಪೋರೇಟರ್‌ಗಳು ಗೋಪಾಲ್‌ ಶೆಟ್ಟಿ ಅವರ ಪ್ರಚಾರ ಕಾರ್ಯದಲ್ಲಿ ಈಗಾಗಲೆ ಗುರುತಿಸಿಕೊಂಡಿದ್ದು, ಎದುರಾಳಿ ಸ್ಪರ್ಧಿಯಾಗಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಾಲಿವುಡ್‌ ನಟಿ ಊರ್ಮಿಳಾ ಮಾತೊಂಡ್ಕರ್‌ ಅವರ ವಿರುದ್ಧ ಗೋಪಾಲ್‌ ಶೆಟ್ಟಿ ಅವರನ್ನು ಭರ್ಜರಿಯಾಗಿ ಜಯಗಳಿಸುವ ನಿಟ್ಟಿನಲ್ಲಿ ರಣತಂತ್ರವನ್ನು ರೂಪಿಸಿ ಪ್ರಚಾರ ನಡೆಸಲಾಗಿದೆ.

ಉತ್ತರ ಮುಂಬಯಿ ಲೋಕಸಭಾ ಕ್ಷೇತ್ರದಲ್ಲಿ ಗೋಪಾಲ್‌ ಶೆಟ್ಟಿ ಅವರು ಮಾಡಿರುವ ಅಭಿವೃದ್ಧಿಪರ ಕಾರ್ಯಗಳು ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಲಿದೆ. ಇನ್ನೊಂದೆಡೆ ಮೋದಿ ಅಲೆ ಗೋಪಾಲ್‌ ಶೆಟ್ಟಿ ಅವರ ಗೆಲುವಿನ ಅಂತರವನ್ನು ಮತ್ತಷ್ಟು ಹೆಚ್ಚಿಸುವಲ್ಲಿ ಸಂಶಯವಿಲ್ಲ ಎನ್ನಲಾಗುತ್ತಿದೆ. ಒಂದು ಕಾಲದಲ್ಲಿ ಉತ್ತರ ಮುಂಬಯಿ ಕ್ಷೇತ್ರ ಗುಜರಾತಿ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶವಾಗಿತ್ತು. ಆದರೆ ಪ್ರಸ್ತುತ ಎಲ್ಲಾ ಭಾಷಿಗರು ಇಲ್ಲಿ ನೆಲೆಸಿದ್ದು, ವಿಶೇಷವೆಂದರೆ ತುಳು-ಕನ್ನಡಿಗ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವುದು ಗೋಪಾಲ್‌ ಶೆಟ್ಟಿ ಅವರಿಗೆ ವರದಾನವಾಗಲಿದೆ.

2014ರಲ್ಲಿ ಭಾರತೀಯ ಬಿಜೆಪಿಯು ರಾಮ್‌ ನಾಯ್ಕ ಅವರ ಬದಲಾಗಿ ಅವರ ಅಪ್ಪಟ ಶಿಷ್ಯ ಗೋಪಾಲ ಶೆಟ್ಟಿ ಅವರನ್ನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದು, ಸುಮಾರು 6,64,004 ಮತಗಳನ್ನು ಪಡೆದ ಗೋಪಾಲ ಶೆಟ್ಟಿ ಎದುರಾಳಿ ಕಾಂಗ್ರೆಸ್‌ನ ಸಂಜಯ್‌ ನಿರೂಪಮ್‌ ಅವರಗಿಂತ 4,46,562 ಹೆಚ್ಚುವರಿ ಮತಗಳೊಂದಿಗೆ ಭರ್ಜರಿ ಜಯಭೇರಿ ಪಡೆದು ರಾಷ್ಟ್ರದ ಜನತೆ ಈ ಕ್ಷೇತ್ರದತ್ತ ಚಿತ್ತಹರಿಸುವಂತೆ ಮಾಡಿದ್ದರು. ಮಾತ್ರವಲ್ಲದೆ ಅತ್ಯಾಧಿಕ ಮತಗಳನ್ನು ಪಡೆದು ರಾಷ್ಟ್ರದಲ್ಲೇ ಐದನೇ ಸ್ಥಾನ ಮತ್ತು ಮಹಾರಾಷ್ಟ್ರ ರಾಜ್ಯದಲ್ಲೇ ಪ್ರಥಮ ಸ್ಥಾ§ನದ ಪಡೆದ ಕೀರ್ತಿಗೆ ಪಾತ್ರರಾಗಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ