ಉಡುಪಿಯ ವಿಶ್ವಬಂಟರ ಸಮ್ಮಿಲನ-2018 ಪೂರ್ವಭಾವಿ ಸಭೆ

Team Udayavani, Jul 27, 2018, 4:17 PM IST

ಮುಂಬಯಿ:ಆರ್ಥಿಕವಾಗಿ ಅಭ್ಯುದಯ ಹೊಂದಿರುವ ಬಂಟರಿಂದು ಸಮಾಜದಲ್ಲಿ ಆರ್ಥಿಕವಾಗಿ ತೀರಾ ಶೋಚನೀಯ ಸ್ಥಿತಿಯಲ್ಲಿರುವ ಬಂಟ ಬಂಧುಗಳಿಗೆ ವಿಶಿಷ್ಟ ಕೊಡುಗೆ ಸಲ್ಲಿಸಲು ಮುಂದೆ ಬರುತ್ತಿರುವುದು ಸಂತಸದಾಯಕ ವಿಷಯವಾಗಿದೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಅವರು ಅಭಿಪ್ರಾಯಿಸಿದರು.

ಜು. 25 ರಂದು ಸಂಜೆ ಬಂಟರ ಭವನದ ರಂಜನಿ ಸುಧಾಕರ ಹೆಗ್ಡೆ ತುಂಗಾ ಎನೆಕ್ಸ್‌ ಸಂಕೀರ್ಣದ ವಿಜಯಲಕ್ಷಿ³¾à ಮಹೇಶ್‌ ಶೆಟ್ಟಿ ಬಾಬಾಸ್‌ ಹವಾನಿಯಂತ್ರಿತ ಕಿರು ಸಭಾಗೃಹದಲ್ಲಿ ನಡೆದ  ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಸೆಪ್ಟೆಂಬರ್‌ 9 ರಂದು ಉಡುಪಿಯಲ್ಲಿ ಜರಗಲಿರುವ ವಿಶ್ವ ಬಂಟರ ಸಮ್ಮಿಲನ-2018 ಸಂಭ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಇವರು, ಹಳ್ಳಿಪ್ರದೇಶದಲ್ಲಿ ವಾಸಿಸುವ ಕೆಲವು ಬಂಟ ಬಾಂಧವರ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಈ ಉದ್ಧೇಶದಿಂದ ಜಾಗತಿಕ ಬಂಟರ ಸಂಘಗಳ ಒಕ್ಕೂಟವು ಅಂತವರನ್ನು ಗುರುತಿಸಿ ಸಹಾಯ ನೀಡಲು ಮುಂದಾಗಿದೆ. ಆರ್ಥಿಕವಾಗಿ ಬಲವುಳ್ಳವರು ಆರ್ಥಿಕ ಸಹಾಯ ನೀಡುವ ಮೂಲಕ ಸಹಕರಿಸಿದರೆ, ಇನ್ನುಳಿದವರು ಇತರ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ನಾನು ಇದ್ದವರಿಂದ ಪಡೆದು ಇಲ್ಲದವರಿಗೆ ತಲುಪಿಸುವ ಕಾಯಕದಲ್ಲಿ ತೊಡಗಿದ್ದೇನೆ. ಈ ಕಾರ್ಯ ಕಷ್ಟಕರವಾದರೂ ಇದೊಂದು ಭಾಗ್ಯವೆಂದು ತಿಳಿದು ತೃಪ್ತಿ ಪಟ್ಟುಕೊಳ್ಳುತ್ತಿದ್ದೇನೆ. ಉಡುಪಿಯಲ್ಲಿ ಜರಗಲಿರುವ ವಿಶ್ವ ಬಂಟರ ಸಮ್ಮಿಲನ ಸಂಭ್ರಮದಲ್ಲಿ ಮುಂಬಯಿಯ ಬಂಟರೆಲ್ಲರೂ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಪಾತ್ರರಾಗ ಬೇಕು. ಸಮ್ಮಿಲನವು ಬಂಟರ ಅಸ್ಮಿತೆಯ ಪ್ರತೀಕವಾಗಬೇಕು. ಒಕ್ಕೂಟದ  ಕಾನೂನು ನಿಯಾಮಾವಳಿಯಲ್ಲಿ ಬದಲಾವಣೆ ತರಲಾಗಿದೆ. ಒಕ್ಕೂಟದ ಪ್ರತಿಯೊಂದು ಯೋಜನೆ-ಯೋಚನೆ ಪಾರದರ್ಶಕ ರೀತಿಯಲ್ಲಿ ನಡೆಯಬೇಕು ನನ್ನ ಉದ್ಧೇಶವಾಗಿದೆ. ಸದಸ್ಯರಾದವರಿಗೆ ಯಾವುದೇ ಮಾಹಿತಿಯನ್ನು ಪರಿಶೀಲಿಸಲು ಕೂಲಂಕುಷವಾಗಿ ಚರ್ಚಿಸಲು ಅವಕಾಶ ಕಲ್ಪಿಸಲಾಗುವುದು. ಮಹಾಪೋಷಕರಾಗಿ ಸಹಕರಿಸಿದ ಎಲ್ಲಾ ಮಹನೀಯರಿಗೆ ಅವರು ಕೃತಜ್ಞತೆ ಸಲ್ಲಿಸಿದರು.

ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ನ್ಯಾಯವಾದಿ ಸುಭಾಷ್‌ ಶೆಟ್ಟಿ ಅವರು ಮಾತನಾ ಡಿ, ಒಕ್ಕೂಟದ ಯೋಜನೆ ಸ್ವಾಗತಾರ್ಹ. ಬಡತನದ ರೇಖೆಯಲ್ಲಿರುವ ಕುಟುಂಬದ ಮಕ್ಕಳಿಗೆ ಶಿಕ್ಷಣ, ಇರಲ್ಲೊಂದು ಸೂರು, ವೈದ್ಯಕೀ ಯ ಸೌಲಭ್ಯ ನೀಡುವುದು ಅಗತ್ಯವಾಗಿದೆ. ಐಕಳ ಹರೀಶ್‌ ಶೆಟ್ಟಿ ಸಮಾಜಮುಖೀ ಕಾರ್ಯಕ್ಕೆ ಅಸೋಸಿಯೇಶನ್‌ನ ಸಂಪೂರ್ಣ ಸಹಕಾರವಿದೆ ಎಂದರು.

ಸಮಾಜ ಸೇವಕ, ಒಕ್ಕೂಟದ ಮಹಾಪೋಷಕ ವಿರಾರ್‌ ಶಂಕರ್‌ ಶೆಟ್ಟಿ ಇವರು ಮಾತನಾಡಿ, ಆರ್ಥಿಕವಾಗಿ ತೊಂದರೆಯಲ್ಲಿರುವ ಬಂಟರು ತಮ್ಮ ಸ್ವಾಭಿಮಾನದ ಮೂಲಕ ಮತ್ತಷ್ಟು ಹಿಂದುಳಿಯುವಂತಾಗಿದೆ. ಅಂತವರನ್ನು ಹುಡುಕಿ ತೆಗೆಯುವ ಕಾರ್ಯ ನಡೆಯಬೇಕು. ಒಕ್ಕೂಟದ ಯೋಜನೆ ಸಹಕಾರ ನೀಡುವುದು ನಮ್ಮೆಲ್ಲರ ಕರ್ತವ್ಯ ಒಕ್ಕೂಟವು ಹರಿಯುವ ನದಿಯಾಗಿ ಸದಾ ಹರಿಯುವಂತಾಗಲಿ ಎಂದು ಹಾರೈಸಿದರು.

ಮುಲುಂಡ್‌ ಬಂಟ್ಸ್‌ ಉಪಾಧ್ಯಕ್ಷ ವಸಂತ್‌ ಶೆಟ್ಟಿ ಪಲಿಮಾರು ಮಾತನಾಡಿ, ಹಳ್ಳಿಯಲ್ಲಿರುವ ಬಂಟ ಬಾಂಧವರ ಆರ್ಥಿಕ ಸಂಕಷ್ಟಕ್ಕೆ ಒಕ್ಕೂಟ ಕೈಗೊಂಡ ಕಾರ್ಯ ಯೋಜನೆಗಳ ಬಗ್ಗೆ ಶ್ಲಾಘಿಸಿದರು. ಜವಾಬ್‌ನ ಉಪಾಧ್ಯಕ್ಷ ಸಿಎ ಐ. ಆರ್‌. ಶೆಟ್ಟಿ ಅವರು ಮಾತನಾಡಿ, ನಮ್ಮೆಲ್ಲಾ ತೊಂದರೆಗಳಿಗೆ ಶಿಕ್ಷಣವೇ ಮೂಲ ಪರಿಹಾರ. ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ. ಒಕ್ಕೂಟದ ಜೊತೆ ನಾವೆಲ್ಲರ ಕೈಜೋಡಿಸೋಣ ಎಂದರು. ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ್‌ ಹೆಗ್ಡೆ ಮಾತನಾಡಿ, ತನ್ನ ವೈಯಕ್ತಿಕ ಕಾರ್ಯಗಳನ್ನು ಬದಿಗಿರಿಸಿ ಸಮಾಜದ ಬಗ್ಗೆ ವಿಶೇಷ ಕಳಕಳಿ ಇಟ್ಟಿರುವ ಐಕಳ ಹರೀಶ್‌ ಶೆಟ್ಟಿ ಅವರನ್ನು ಸಹೃದಯತೆಯನ್ನು ಅಭಿನಂದಿಸಿ, ಅವರಿಗೆ ಇನ್ನಷ್ಟು ಶಕ್ತಿ ನೀಡಲೆಂದು ಹಾರೈಸಿದರು.

ಸಮಾಜ ಸೇವಕ, ಬಂಟ್ಸ್‌ ಫಾರಂ ಮೀರಾ- ಭಾಯಂದರ್‌ ಗೌರವಾಧ್ಯಕ್ಷ  ಸಂತೋಷ್‌ ರೈ ಬೆಳ್ಳಿಪ್ಪಾಡಿ ಅನಿಸಿಕೆ ವ್ಯಕ್ತಪಡಿಸಿ, ಸಂಘಟನಾ ಶಕ್ತಿ ಎಂದರೆ ಏನೆಂಬುವುದನ್ನು ಐಕಳ ಹರೀಶ್‌ ಶೆಟ್ಟಿ ಅವರಿಂದ ಕಲಿಯಬೇಕು. ಬಂಟರ ಸಂಘಟನೆಯನ್ನು ವಿಶ್ವಕ್ಕೆ ಪರಿಚಯಿಸುವ ಪ್ರಯ ತ್ನವನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಾಡುತ್ತಿರುವುದು ಅಭಿನಂದನೀಯ ಎಂದರು.

ಆರಂಭದಲ್ಲಿ ಪ್ರತಿಮಾ ಶೆಟ್ಟಿ ಪ್ರಾರ್ಥನೆಗೈದರು. ಬಂಟರ ಸಂಘ ಮುಂಬಯಿ ಮಾಜಿ ಅಧ್ಯಕ್ಷ, ಒಕ್ಕೂಟದ ಸಲಹಾ ಸಮಿತಿಯ ಕಾರ್ಯಾಧ್ಯಕ್ಷ  ಕರ್ನಿರೆ ವಿಶ್ವನಾಥ ಶೆಟ್ಟಿ ಸ್ವಾಗತಿಸಿದರು. ಒಕ್ಕೂಟದ ಕಾರ್ಯದರ್ಶಿ ವಿಜಯ ಪ್ರಸಾದ್‌ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿ, ಒಕ್ಕೂಟದ ಸಿದ್ಧಿ- ಸಾಧನೆಗಳನ್ನು ವಿವರಿಸಿದರು. ಅಲ್ಲದೆ ಕಾನೂನು ನಿಯಮಾವಳಿಯಲ್ಲಾದ ಬದಲಾವಣೆಯ ಬಗ್ಗೆ ಸಭೆಗೆ ತಿಳಿಸಿದರು. ಈಗಾಗಲೇ ಸುಮಾರು 600 ಮಕ್ಕಳ ಶಿಕ್ಷಣಕ್ಕೆ ಸಹಾಯ ನೀಡಲಾಗಿದೆ. 25 ಬಂಟರ ಆರೋಗ್ಯದ ಬಗ್ಗೆ ಸಹಕರಿಸಲಾಗಿದೆ. ಸುರತ್ಕಲ್‌ ಮತ್ತು ಗುರುಪುರದಲ್ಲಿರುವ ಕುಟುಂಬಗಳಿಗೆ ಮನೆ ಒದಗಿಸುವ ಕಾರ್ಯ ನಡೆದಿದೆ. ಐಎಎಸ್‌, ಐಪಿಎಸ್‌ ವಿದ್ಯಾಭ್ಯಾಸಕ್ಕೆ ನೆರವು ಕಲ್ಪಿಸಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ವಿಶ್ವ ಬಂಟ ಸಮ್ಮಿಲನದ ವಿಶಿಷ್ಟತೆಯನ್ನು ಸಾರುವ ಲಾಂಛನವನ್ನು ಆನಂದ ಎಂ. ಶೆಟ್ಟಿ ಬಿಡುಗಡೆಗೊಳಿಸಿದರು. ಸಿಎ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ಶ್ರುತಿ ಎಸ್‌. ಶೆಟ್ಟಿ ಮತ್ತು ಅವರ ಮಾತಾಪಿತರನ್ನು ಗೌರವಿಸಲಾಯಿತು. ಕಾರ್ಯದರ್ಶಿ ವಿಜಯ ಪ್ರಸಾದ್‌ ಆಳ್ವ ಇದುವರೆಗೆ ಒಕ್ಕೂಟದ ಮಹಾ ಪೋಷಕರು ಹಾಗೂ ಪೋಷಕರಾಗಿ ಸಹಕರಿ ಸಿದವರ ಹೆಸರು ವಾಚಿಸಿದರು.  ನಗರದ ವಿವಿಧ ಬಂಟ ಸಂಘಟನೆಗಳ ಪದಾಧಿಕಾರಿಗಳನ್ನು, ಮಾಜಿ ಅಧ್ಯಕ್ಷರುಗಳನ್ನು, ಪ್ರಾದೇಶಿಕ ಸಮಿತಿ ಹಾಗೂ ಬಂಟರ ಸಂಘದ ಉಪಸಮಿತಿಗಳ ಪದಾಧಿಕಾ ರಿಗಳನ್ನು ಗೌರವಿಸಲಾಯಿತು. ಬಂಟರವಾಣಿಯ ಗೌರವ ಸಂಪಾದಕ ಅಶೋಕ್‌ ಪಕ್ಕಳ ಕಾರ್ಯಕ್ರಮ ನಿರ್ವಹಿಸಿದರು. ಕೊನೆಯಲ್ಲಿ ವಿಶ್ವ ಬಂಟರ ಸಮ್ಮಿಲನ ಸಮಿತಿಯ ಕೋಶಾಧಿಕಾರಿ ಉಳೂ¤ರು ಮೋಹನ್‌ದಾಸ್‌ ಶೆಟ್ಟಿ ವಂದಿಸಿದರು. ಸಮ್ಮಿಲನದ ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಕರ್ನೂರು ಮೋಹನ್‌ ರೈ ಸಹಕರಿಸಿದರು. ವೇದಿಕೆಯಲ್ಲಿ ಒಕ್ಕೂಟದ ಮಹಾಪೋಷಕ ಕೃಷ್ಣ ವೈ. ಶೆಟ್ಟಿ ಕೃಷ್ಣ ಪ್ಯಾಲೇಸ್‌ ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ನಗ್ರಿಗುತ್ತು ವಿವೇಕ್‌ ಶೆಟ್ಟಿ, ಸಲಹಾ ಸಮಿತಿಯ ಕಾರ್ಯಾಧ್ಯಕ್ಷ, ಬಂಟರ ಸಂಘದ ಮಾಜಿ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಉಳೂ¤ರು ಮೋಹನ್‌ದಾಸ್‌ ಶೆಟ್ಟಿ ಉಪಸ್ಥಿತರಿದ್ದರು.    

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅವರ ಸಮಾಜಪರ ಧ್ಯೇಯ ಧೋರಣೆ ಹಾಗೂ ಉದ್ದೇಶ ಅತ್ಯುತ್ತಮ ದೃಷ್ಟಿಕೋನದಿಂದ ಕೂಡಿದೆ. ಬಂಟ ಸಮಾಜದಲ್ಲಿ ಅತೀ ಶೋಚನೀಯ ಸ್ಥಿತಿಯಲ್ಲಿರುವ ಕುಟುಂಬಗಳಿಗೆ ಸಹಾಯ ಹಂಚುವ ಕಾರ್ಯದಲ್ಲಿ ನಾವೆಲ್ಲರೂ ಐಕಳರೊಂದಿಗೆ ಸಹಕರಿಸೋಣ. ಉಡುಪಿಯ ವಿಶ್ವ ಬಂಟರ ಸಮ್ಮಿಲನ ಯಶಸ್ವಿಯಾಗಲಿ
– ಪದ್ಮನಾಭ ಎಸ್‌. ಪಯ್ಯಡೆ 
ಅಧ್ಯಕ್ಷರು : ಬಂಟರ ಸಂಘ ಮುಂಬಯಿ

ಉತ್ತಮ ಧ್ಯೇಯ, ದೃಢಚಿತ್ತದಿಂದ ಮಾಡುವ ಯಾವುದೇ ಕಾರ್ಯ ಯಶಸ್ವಿಯಾಗುತ್ತದೆ ಎಂಬುವುದಕ್ಕೆ ಐಕಳ ಹರೀಶ್‌ ಶೆಟ್ಟಿ ಅವರು ನಿದರ್ಶನ. ಸಂಘಟನಾತ್ಮಕ ಗುಣ ಹಾಗೂ ಸ್ವಸಾಮರ್ಥ್ಯ ಹೊಂದಿರುವ ಐಕಳರ ಸಾಧನೆ ನಮ್ಮಿಂದ ಅಸಾಧ್ಯ. ಸಮಾಜಕ್ಕಾಗಿ ಅವರು ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಅವರ ಸಮಾಜಪರ ಕಾರ್ಯಗಳಿಗೆ ಬೆಂಗಾವಲಾಗಿ ನಿಂತು ಸಹಾಯ ಮಾಡುತ್ತೇನೆ
– ಆನಂದ್‌ ಎಂ. ಶೆಟ್ಟಿ 
ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ : ಆರ್ಗಾನಿಕ್‌ ಕೆಮಿಕಲ್ಸ್‌

ಐಕಳರ ಪರಿಕಲ್ಪನೆ ಸಾಕಾರವಾಗಲು ತಾನು ಸದಾ ಸಹಕರಿಸುತ್ತೇನೆ. ಆರ್ಥಿಕವಾಗಿ ತೊಂದರೆಯಲ್ಲಿರುವ ಬಂಟ ಸಮುದಾಯಕ್ಕೆ ಸಹಾಯ ನೀಡುವ ಸಂದರ್ಭದಲ್ಲಿ ಎಲ್ಲಾ ಬಂಟ ಸಂಘ-ಸಂಸ್ಥೆಗಳು ಒಂದಾಗಿ ಒಂದೇ ವೇದಿಕೆಯಡಿಯಲ್ಲಿ ನಿಂತು ಸಹಾಯ ನೀಡಬೇಕೇ ಹೊರತು, ಬೇರೆ ಬೇರೆಯಾಗಿ ನೀಡುವುದು ಸರಿಯಲ್ಲ. ಈ ಬಗ್ಗೆ ಚಿಂತನೆ ನಡೆಸುವ ಅಗತ್ಯವಿದೆ
-ಕೆ. ಎಂ. ಶೆಟ್ಟಿ
ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ : ವಿ. ಕೆ. ಗ್ರೂಪ್‌ ಆಫ್‌ ಕಂಪೆನೀಸ್‌

ಐಕಳ ಹರೀಶ್‌ ಶೆಟ್ಟಿ ಅವರು ತಾನು ಕೈಗೆತ್ತಿಕೊಂಡ ಯಾವುದೇ ಕಾರ್ಯವನ್ನು ಅತ್ಯಂತ ಜವಾಬ್ದಾರಿಯಿಂದ ಸಾಧಿಸಿ ಯಶಸ್ಸು ಪಡೆಯುತ್ತಾರಲ್ಲದೆ, ಸಮಾಜ ಸೇವೆಗೆ ಹೇಳಿಮಾಡಿಸಿದಂತಹ ವ್ಯಕ್ತಿತ್ವ ಅವರದ್ದಾಗಿದೆ. ಕಣ್ಣೀರು ಹರಿಸುವ ಸಮಾಜ ಬಾಂಧವರ ಕಣ್ಣೀರೊರೆಸುವ ಕಾರ್ಯದಲ್ಲಿ ಒಕ್ಕೂಟ ತಳೆದಿರುವ ಯೋಜನೆಗೆ ನಾವೆಲ್ಲರೂ ಒಂದಾಗಿ ಸಹಕರಿಸೋಣ.
– ಕೆ. ಡಿ. ಶೆಟ್ಟಿ 
ಕಾರ್ಯಾಧ್ಯಕ್ಷರು ಮತ್ತು ಆಡಳಿತ ನಿರ್ದೇಶಕ : ಭವಾನಿ ಗ್ರೂಪ್‌ ಆಫ್‌ ಕಂಪೆನೀಸ್‌     

 ಚಿತ್ರ ವರದಿ: ಪ್ರೇಮನಾಥ್‌ ಶೆಟ್ಟಿ ಮುಂಡ್ಕೂರು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ