Udayavni Special

ಮೇ ಕೊನೆಯ ವಾರದಲ್ಲಿ ಪ್ರಾಯೋಗಿಕ ಪರೀಕ್ಷೆ

Team Udayavani, May 15, 2021, 1:41 PM IST

Clinical trial

ಮುಂಬಯಿ: ಮುಂಬಯಿ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಎಂಎಂಆರ್‌ಡಿಎ) ನಿರ್ಮಾಣದ ಮೆಟ್ರೋ-2 ಎ ಮತ್ತು ಮೆಟ್ರೋ-7 ಮಾರ್ಗಗಳ ಬಹುನಿರೀಕ್ಷಿತ ಪ್ರಾಯೋಗಿಕ ಪರೀಕ್ಷೆ ಮೇ ಕೊನೆಯ ವಾರದಲ್ಲಿ ನಡೆಯಲಿದೆ.

ಈ ಪರೀಕ್ಷೆಯನ್ನು ಎಂಎಂಆರ್‌ಡಿಎ ಸಿದ್ಧಪಡಿಸಿದ್ದು, ಆರಂಭದಲ್ಲಿ ಆರೇಯಿಂದ ಕಾಮರಾಜ್‌ ನಗರಕ್ಕೆ 20 ಕಿ. ಮೀ. ಮಾರ್ಗದಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುವುದು. ಎಂಎಂಆರ್‌ಡಿಎ ಕಳೆದ ವರ್ಷದ ಗುರಿಯ ಪ್ರಕಾರ ದಹಿಸರ್‌ನಿಂದ ಡೀನ್‌ ನಗರದವರೆಗಿನ ಮೆಟ್ರೋ-2 ಎ ಮತ್ತು ದಹಿಸರ್‌ ಪೂರ್ವದಿಂದ ಅಂಧೇರಿ ಪೂರ್ವದವರೆಗಿನ ಮೆಟ್ರೋ- 7 ಪರೀಕ್ಷೆಗಳನ್ನು ಜನವರಿಯಲ್ಲಿ ನಿಗದಿಪಡಿ ಸಲಾಗಿತ್ತು.

ಬಳಿಕ ಮೆಟ್ರೋವನ್ನು ಎಪ್ರಿಲ್‌ನಲ್ಲಿ ಪ್ರಾರಂಭಿಸಲು ಯೋಜಿಸಲಾಗಿತ್ತು. ಆದರೆ ಲಾಕ್‌ಡೌನ್ ನಿಂದಾಗಿ ಯೋಜನೆ ಸ್ಥಗಿತಗೊಂಡು ಜಪಾನ್‌ ನಿಂದ ಪ್ರಮುಖ ಅಂಶ ಆಮದು ಮಾಡಿ ಕೊಳ್ಳುವಲ್ಲಿ ವಿಳಂಬವಾಯಿತು. ಪರಿಣಾಮವಾಗಿ ಮೆಟ್ರೋ ನಿರ್ಮಾಣ ಸ್ಥಗಿತಗೊಂಡಿತು.ಮುಂಬಯಿಗೆ ಮೆಟ್ರೋ ಆಗಮನ ವಿಳಂಬ ವಾದ ಕಾರಣ ಮೆಟ್ರೊ ಪರೀಕ್ಷೆ ವಿಳಂಬವಾಗಿದೆ. ಪ್ರಸ್ತುತ ಆರು ಕೋಚ್‌ ಅನ್ನು ಹೊಂದಿರುವ ಮೆಟ್ರೋ  ರೈಲು ಮುಂಬಯಿಗೆ ಬಂದಿದೆ. ಈ ಮಾದರಿ ರೈಲು ಚಾರ್ಕೋಪ್‌ ನಿಲ್ದಾಣದಲ್ಲಿ ಪರೀಕ್ಷೆಗೆ ಸಿದ್ಧವಾಗುತ್ತಿದೆ.

ಚಾರ್ಕೋಪ್‌ ಡಿಪೋ ಬಳಿಯ ಕಾಮರಾಜ್‌ ನಗರ ಮತ್ತು ಆರೆ ನಡುವೆ 20 ಕಿ. ಮೀ. ದೂರದಲ್ಲಿ ಪರೀಕ್ಷೆ ನಡೆಯಲಿದೆ. ಈ ಮಾರ್ಗದಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ ಪ್ರದೇಶದ ಕೆಲವು ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ. ಅದು ಪೂರ್ಣಗೊಂಡ ಕೂಡಲೇ ಮುಂದಿನ ಮಾರ್ಗವನ್ನು ಎಂಎಂಆರ್‌ಡಿಎ ಪರೀಕ್ಷಿಸಲಿದೆ.ಈ ಮಧ್ಯೆ ಎಂಎಂಆರ್‌ಡಿಎ ಈ ವರ್ಷದ ಅಂತ್ಯದ ವೇಳೆಗೆ ಮೆಟ್ರೋ – 2 ಎ ಮತ್ತು ಮೆಟ್ರೋ – 7 ಅನ್ನು ಲೋಕಾರ್ಪಣೆಗೆ ಯೋಜಿಸುತ್ತಿದೆ.

ಈ ನಿಟ್ಟಿನಲ್ಲಿ ಎಂಎಂಆರ್‌ಡಿಎ ಕ್ರಮ ಕೈಗೊಳ್ಳುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾದರಿ ರೈಲು ಪರೀಕ್ಷೆಯನ್ನು ಪೂರ್ಣಗೊಳಿಸಿದ ಬಳಿಕ ರೈಲ್ವೇ ಸುರಕ್ಷಾ ಆಯುಕ್ತರಿಗೆ ಅನುಮೋದನೆಗಾಗಿ ಕಳುಹಿಸಲಾಗುತ್ತದೆ. ಮೆಟ್ರೋ ನಿಲ್ದಾಣಗಳ ಸಿಗ್ನಲಿಂಗ್‌ ವ್ಯವಸ್ಥೆಯ ಕೆಲಸವನ್ನು ಎಂಎಂಆರ್‌ಡಿಎ ಸಂಪೂರ್ಣವಾಗಿ ಪೂರ್ಣಗೊಳಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟಾಪ್ ನ್ಯೂಸ್

mimi chakraborty

ನಕಲಿ ಲಸಿಕೆ ಕೇಂದ್ರದಲ್ಲಿ ಕೋವಿಡ್ ಲಸಿಕೆ ಪಡೆದ ನಟಿ, ಸಂಸದೆ ಮಿಮಿ ಚಕ್ರವರ್ತಿ! ಓರ್ವನ ಬಂಧನ

udupi dc jagadish

ಕಾನೂನು ಎಲ್ಲರಿಗೂ ಒಂದೇ,ಎಷ್ಟೇ ದೊಡ್ಡವನಾದರೂ ಕಾನೂನು ಪಾಲನೆ ಮಾಡಬೇಕು: ಉಡುಪಿ DC ವಾರ್ನಿಂಗ್

ಮುಂದಿನ ಚುನಾವಣೆಯನ್ನು ನಾವೆಲ್ಲಾ ಒಗ್ಗಟ್ಟಾಗಿ ಎದುರಿಸುತ್ತೇವೆ: ಸಚಿವ ಭೈರತಿ ಬಸವರಾಜ್

ಮುಂದಿನ ಚುನಾವಣೆಯನ್ನು ನಾವೆಲ್ಲಾ ಒಗ್ಗಟ್ಟಾಗಿ ಎದುರಿಸುತ್ತೇವೆ: ಸಚಿವ ಭೈರತಿ ಬಸವರಾಜ್

ಸೌಥಂಪ್ಟನ್ ಮೈದಾನದಿಂದ ಇಬ್ಬರು ಪ್ರೇಕ್ಷಕರನ್ನು ಹೊರಹಾಕಿದ ಐಸಿಸಿ

ಸೌಥಂಪ್ಟನ್ ಮೈದಾನದಿಂದ ಇಬ್ಬರು ಪ್ರೇಕ್ಷಕರನ್ನು ಹೊರಹಾಕಿದ ಐಸಿಸಿ

ಮಧ್ಯಪ್ರದೇಶದಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿ ಸೋಂಕಿತೆ ಸಾವು

ಮಧ್ಯಪ್ರದೇಶದಲ್ಲಿ ಮೊದಲ ಡೆಲ್ಟಾ ಪ್ಲಸ್ ರೂಪಾಂತರಿ ಸೋಂಕಿತೆ ಸಾವು

ಎಚ್ಚರ…ಭಾರತದಲ್ಲಿ ಕಳೆದ 24ಗಂಟೆಯಲ್ಲಿ 54,069 ಕೋವಿಡ್ ಪ್ರಕರಣ ಪತ್ತೆ, 1321 ಮಂದಿ ಸಾವು

ಎಚ್ಚರ…ಭಾರತದಲ್ಲಿ ಕಳೆದ 24ಗಂಟೆಯಲ್ಲಿ 54,069 ಕೋವಿಡ್ ಪ್ರಕರಣ ಪತ್ತೆ, 1321 ಮಂದಿ ಸಾವು

delta-plus

ಮೈಸೂರಿನಲ್ಲಿ ಮತ್ತೆ ಮೂರು ಡೆಲ್ಟಾ ಪ್ಲಸ್ ಪ್ರಕರಣಗಳು ಪತ್ತೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

anivasi kannadiga

ಶ್ರೇಷ್ಠತೆಗಾಗಿ ವಿವಿ ಶ್ರಮಿಸಲಿ: ರಾಜ್ಯಪಾಲ ಭಗತ್‌ ಸಿಂಗ್‌ ಕೋಶ್ಯಾರಿ

Free Covid Vaccine Camp

ಜಿಎಸ್‌ಬಿ ಸಭಾ ನವಿಮುಂಬಯಿ: ಉಚಿತ ಕೋವಿಡ್‌ ಲಸಿಕೆ ಶಿಬಿರ

Home construction

ಮನೆ ನಿರ್ಮಾಣಕ್ಕೆ ಸಹಾಯಹಸ್ತ

The Bhagavad-Gita

ಭಗವದ್ಗೀತೆ ಭಾವಾರ್ಥ ಮಾತೃಭಾಷೆಯಲ್ಲಿ ಬೆಸೆಯಲಿ: ಡಾ| ವೀರೇಂದ್ರ ಹೆಗ್ಗಡೆ

covid news

ಮೂರನೇ ಅಲೆ ಬಗ್ಗೆ ಜಾಗೃತಿ ಅಗತ್ಯ: ಡಿಸಿಎಂ ಅಜಿತ್‌ ಪವಾರ್‌

MUST WATCH

udayavani youtube

ಒಲಿಂಪಿಕ್ಸ್‌ : ವನಿತಾ ಹಾಕಿಗೆ ರಾಣಿ ರಾಮ್‌ಪಾಲ್‌ ನಾಯಕಿ

udayavani youtube

udayavani youtube

ಪಾಕಿಸ್ತಾನ: ಉಗ್ರ ಹಫೀಜ್ ಸಯೀದ್ ನಿವಾಸದ ಬಳಿ ಸ್ಫೋಟ

udayavani youtube

ಜಮ್ಮು-ಕಾಶ್ಮೀರ: ಭಯೋತ್ಪಾದಕರ ಗುಂಡಿನ ದಾಳಿಗೆ ಸಿಐಡಿ ಇನ್ಸ್ ಪೆಕ್ಟರ್ ಸಾವು

udayavani youtube

‘ಸಂಚಾರಿ’ ವಿಜಯ್ ಕುರಿತ ಊಹಾಪೋಹ ಸುದ್ದಿಗಳಿಗೆ ಸ್ಪಷ್ಟನೆ ಕೊಟ್ಟ ಸಹೋದರ ವಿರೂಪಾಕ್ಷ!

ಹೊಸ ಸೇರ್ಪಡೆ

mimi chakraborty

ನಕಲಿ ಲಸಿಕೆ ಕೇಂದ್ರದಲ್ಲಿ ಕೋವಿಡ್ ಲಸಿಕೆ ಪಡೆದ ನಟಿ, ಸಂಸದೆ ಮಿಮಿ ಚಕ್ರವರ್ತಿ! ಓರ್ವನ ಬಂಧನ

aduge

ಮಣಿಪಾಲ: ಅಡುಗೆ ಅನಿಲ ಸಿಲಿಂಡರ್ ಸ್ಫೋಟ; ಅಪಾರ ಹಾನಿ

udupi dc jagadish

ಕಾನೂನು ಎಲ್ಲರಿಗೂ ಒಂದೇ,ಎಷ್ಟೇ ದೊಡ್ಡವನಾದರೂ ಕಾನೂನು ಪಾಲನೆ ಮಾಡಬೇಕು: ಉಡುಪಿ DC ವಾರ್ನಿಂಗ್

ಮುಂದಿನ ಚುನಾವಣೆಯನ್ನು ನಾವೆಲ್ಲಾ ಒಗ್ಗಟ್ಟಾಗಿ ಎದುರಿಸುತ್ತೇವೆ: ಸಚಿವ ಭೈರತಿ ಬಸವರಾಜ್

ಮುಂದಿನ ಚುನಾವಣೆಯನ್ನು ನಾವೆಲ್ಲಾ ಒಗ್ಗಟ್ಟಾಗಿ ಎದುರಿಸುತ್ತೇವೆ: ಸಚಿವ ಭೈರತಿ ಬಸವರಾಜ್

ಸೌಥಂಪ್ಟನ್ ಮೈದಾನದಿಂದ ಇಬ್ಬರು ಪ್ರೇಕ್ಷಕರನ್ನು ಹೊರಹಾಕಿದ ಐಸಿಸಿ

ಸೌಥಂಪ್ಟನ್ ಮೈದಾನದಿಂದ ಇಬ್ಬರು ಪ್ರೇಕ್ಷಕರನ್ನು ಹೊರಹಾಕಿದ ಐಸಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.