ಸನ್ನಿಧಿಯ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ: ಕುಸುಮಾ ಭೋಜ ಶೆಟ್ಟಿ

Team Udayavani, Oct 13, 2019, 4:11 PM IST

ಥಾಣೆ, ಅ. 12: ಥಾಣೆ ಪೂರ್ವದ ಮೀಟ್‌ ಬಂದರ್‌ ರೋಡ್‌, ಚಾಂದನಿ ಕೋಲಿವಾಡದಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ಚಾರಿಟೆಬಲ್‌ ಟ್ರಸ್ಟ್‌ ಇದರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 50ನೇ ವಾರ್ಷಿಕ ಶರನ್ನವರಾತ್ರಿ ಮಹೋತ್ಸವವು ಸೆ. 29ರಿಂದ ಅ. 8ರ ವರೆಗೆ ಧಾರ್ಮಿಕ, ಅಧ್ಯಾತ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆದು ಸಂಪನ್ನಗೊಂಡಿತು.

ವೇದಮೂರ್ತಿ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ ಅವರ ಮಾರ್ಗದರ್ಶನದಲ್ಲಿ ಸಾಣೂರು ಸುಬ್ರಹ್ಮಣ್ಯ ಭಟ್‌ ಅವರ ಪೌರೋತ್ಯದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಕುಸುಮಾ ಭೋಜ ಶೆಟ್ಟಿ, ಗೌರವಾಧ್ಯಕ್ಷ ಭೋಜ ಶೆಟ್ಟಿ, ಅಧ್ಯಕ್ಷ ಎಸ್‌. ಎಸ್‌. ಪೂಜಾರಿ, ಉಪಾಧ್ಯಕ್ಷರಾದ ವಿಕ್ರಮಾನಂದ ಶೆಟ್ಟಿ, ವಿಠಲ್‌ ಶೆಟ್ಟಿ, ಕಾರ್ಯದರ್ಶಿ ಸುಭಾಶ್‌ ಎಸ್‌. ಶೆಟ್ಟಿ, ಜತೆ ಕಾರ್ಯದರ್ಶಿ ಜ್ಯೋತಿ ಎನ್‌. ಶೆಟ್ಟಿ, ಕೋಶಾಧಿಕಾರಿ ವಿಜಯ ಶೆಟ್ಟಿ, ಜತೆ ಕೋಶಾಧಿಕಾರಿ ಜಯಪ್ರಕಾಶ್‌ ಎ. ಶೆಟ್ಟಿ, ಉದ್ಯಮಿ ಲಕ್ಷ್ಮಣ್‌ ಮಣಿಯಾಣಿ, ಸರ್ವ ಸದಸ್ಯರು, ಮಹಿಳಾ ಸಮಿತಿಯ ಹಾಗೂ ಸೇವಾರ್ಥಿಗಳ ಉಪಸ್ಥಿತಿಯಲ್ಲಿ ಗಣಹೋಮ, ಸ್ಥಳ ಶುದ್ಧೀಕರಣ, ನವಕ ಪ್ರಧಾನ ಹೋಮ, ಕಲಶಾಭಿಷೇಕ, ಸಹಸ್ರ ನಾಮಾರ್ಚನೆ, ಕಲಶ ಪ್ರತಿಷ್ಠೆ, ದುರ್ಗಾಹೋಮ, ರಂಗಪೂಜೆ ಮುಂತಾದ ವಿವಿಧ ಪೂಜಾ ಕೈಂಕರ್ಯಗಳು ವೈದಿಕ ತತ್ವದಡಿ ನೆರವೇರಿದವು.

ಪ್ರತಿದಿನ ಅಪರಾಹ್ನ ಮಹಾ ಪೂಜೆ, ಅನ್ನಸಂತರ್ಪಣೆ ರಾತ್ರಿ ದೇವಿ ದರ್ಶನ ನಡೆಯಿತು. ಅ.7 ರಂದು ನಡೆದ ಅಭಿನಂದನಾ ಸಮಾರಂಭದಲ್ಲಿ ಆಡಳಿತ ಮೊಕ್ತೇಸರ ಕುಸುಮಾ ಭೋಜ ಶೆಟ್ಟಿ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಈಗ 50 ರ ಸಂಭ್ರಮ. ಇತಿಹಾಸದ ಪ್ರಸಿದ್ದ ಈ ಕ್ಷೇತ್ರದಲ್ಲಿ ಧಾರ್ಮಿಕ, ಆಧ್ಯಾತ್ಮಿಕ, ಸಾಮಾಜಿಕ ಚಿಂತನೆಗಳ ಕಾರ್ಯಕ್ರಮಗಳು ದಾನಿಗಳ ನೆರವಿಂದ ನಿರಂತರವಾಗಿ ನಡೆಯುತ್ತಾ ಬಂದಿವೆ. ನಿಸ್ವಾರ್ಥ ಸೇವೆ, ವಿಶಾಲ ಮನೋಭಾವನೆಯಿಂದ ಶ್ರೀ ಮಾತೆಯ ಪೂಜೆ ಈವರೆಗೆ ಮಾಡಿದ್ದೇನೆ. ನೂತನ ಕಾರ್ಯಕಾರಿ ಸಮಿತಿಯು ಸನ್ನಿಧಿಯ ಮಹತ್ತರ ಅಭಿವೃದ್ಧಿಗೆ ಕೈಜೋಡಿಸಬೇಕೆಂದು ವಿನಂತಿಸಿದರು.

ಲೇಖಕ ನಿತ್ಯಾನಂದ ಬೆಳುವಾಯಿ ಕಾರ್ಯಕ್ರಮ ನಿರ್ವಹಿಸಿದರು. ಪ್ರತಿದಿನ ನಡೆದ ಭಜನೆಯಲ್ಲಿ ಕೋಲಿವಾಡ ದುರ್ಗಾಪರಮೇಶ್ವರಿ ಭಜನ ಮಂಡಳಿ, ಕಲ್ವಾ ಫ್ರೆಂಡ್ಸ್‌ ಭಜನ ಮಂಡಲಿ, ಥಾಣೆ ಬಂಟ್ಸ್‌ ಭಜನ ಮಂಡಳಿ, ಘೋಡ್‌ ಬಂದರ್‌ರೋಡ್‌ ಕನ್ನಡ ಸಂಘ ಭಜನ ಮಂಡಳಿ, ಆಯ್ಯಪ್ಪ ಭಜನ ಮಂಡಳಿ, ಕೊಂಡೆವೂರು ಶ್ರೀ ಯೋಗಾನಂದ ಭಜನ ಮಂಡಳಿ ಮುಂಬಯಿ ಸಮಿತಿ, ಶ್ರೀ ಸತ್ಯನಾರಾಯಣ ಸೇವಾ ಸಮಿತಿ ಬಲ್ಕುಮ…, ಶ್ರೀ ದುರ್ಗಾಪರಮೇಶ್ವರಿ ಭಜನ ಮಂಡಳಿ ಪನ್ವೆಲ…, ಓಂ ಶಕ್ತಿ ಭಜನ ಮಂಡಳಿ ಥಾಣೆ ಮೊದಲಾದವರು ಪಾಲ್ಗೊಂಡರು. ಸ್ಥಳೀಯ ಉದ್ಯಮಿಗಳು, ತುಳು ಕನ್ನಡಿಗರು, ಕನ್ನಡೇತರು, ಪರಿಸರದ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಪ್ರಸಾದ ಸ್ವಿಕರಿಸಿದರು.

 

ಚಿತ್ರ-ವರದಿ: ರಮೇಶ ಅಮೀನ್

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ