ಡಿ.ಎಚ್‌.ಕಪ್‌ 2019:ಟ್ರೋಫಿ ಗೆದ್ದ ವಸಾಯಿ ರೋಡ್‌ ಬಾಲಾಜಿ ಸೇವಾ ಸಮಿತಿ ತಂಡ

Team Udayavani, May 16, 2019, 4:03 PM IST

ಮುಂಬಯಿ:ಡಿ.ಎಚ್‌.ಕಪ್‌ ಶ್ರೀ ಭದ್ರಕಾಳಿ ಮಹಾಲಕ್ಷ್ಮೀ ದುರ್ಗಾ ಹೊನ್ನಮ್ಮ ಸೇವಾ ಸಮಿತಿ ಖಾರ್‌ದಾಂಡಾ, ಮುಂಬಯಿ ಇದರ 17ನೇ ಇಂಟರ್‌ ಜಿ.ಎಸ್‌.ಬಿ. ಕ್ರಿಕೆಟ್‌ ಟೂರ್ನಮೆಂಟ್‌ – 2019 ಮೇ 12ರಂದು ಕಾಂದಿವಲಿ ಪೂರ್ವದ ಸಾಯಿ ನ್ಪೋರ್ಟ್ಸ್ ಮೈದಾನದಲ್ಲಿ ನಡೆಯಿತು.

ಮುಂಬಯಿಯ ಜಿ.ಎಸ್‌.ಬಿ ಸಮಾಜದ ಅಂಧೇರಿ, ದಹಿಸರ್‌, ಬೋರಿವಲಿ, ಮಾಟುಂಗ, ಮುಲುಂಡ್‌, ವಾಲ್ಕೇಶ್ವರ, ಸಾಯನ್‌, ಭಾಯಂದರ್‌, ಡೊಂಬಿವಲಿ, ಸುಧೀಂದ್ರನಗರ, ಥಾಣೆ, ಖಾರ್‌ದಾಂಡಾ ಮತ್ತು ವಸಾಯಿರೋಡ್‌ ತಂಡಗಳು ಈ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದವು.

ಅಂತಿಮ ಪಂದ್ಯದಲ್ಲಿ ಬಾಲಾಜಿ ಸೇವಾ ಸಮಿತಿ ಜಿ.ಎಸ್‌.ಬಿ. ಸಮಾಜ ವಸಾಯಿ ರೋಡ್‌ನ‌ ಯುವ ವಿಭಾಗದ ತಂಡವು ಅಂಧೇರಿ ತಂಡವನ್ನು ಸೋಲಿಸಿ ಡಿ.ಎಚ್‌. ಕಪ್‌ 2019 ಟ್ರೋಫಿಯನ್ನ ತನ್ನ ಮುಡಿಗೇರಿಸಿಕೊಂಡಿತು. ವಸಾಯಿ ರೋಡ್‌ ತಂಡದ ನಾಯಕತ್ವವನ್ನು ಅಮೇಯ ಗಣೇಶ್‌ ಪೈ ನಿರ್ವಹಿಸಿ ದರು. ತಂಡದ ಇತರ ಸದಸ್ಯರಾದ ಸಚಿನ್‌ ಶ್ರೀನಿವಾಸ್‌ ಪಡಿಯಾರ್‌, ಭದ್ರಕುಮಾರ್‌, ನಾಗೇಂದ್ರ ಕಾಮತ್‌, ಸುಶೀಲ್‌ ವಿಶ್ವನಾಥ ಪೈ, ಮಯೂರ್‌ ಕಾಮತ್‌, ಆವೇಶ್‌ ಉಮಾಕಾಂತ್‌ ಗಾಂವ್ಕರ್‌, ಸಿದ್ಧೇಶ್‌ ಗಣೇಶ್‌ ಪೈ, ಸಿದ್ಧೇಶ್‌ ವೆಂಕಟ್ರಾಯ ಪ್ರಭು, ಅನಂತ್‌ ಗಣೇಶ್‌ ಪೈ, ಶರದ್‌ ಭಟ್‌, ವಿನಾಯಕ ಶ್ಯಾನಭಾಗ್‌, ಶ್ರೀನಿವಾಸ ಪ್ರೇಮಾನಂದ ಶೆಣೈ, ನಿಖೀತ್‌ ಶಿರೋಡ್ಕರ್‌, ಅಮಿತ್‌ ವಾಸುದೇವ ಶೆಣೈ, ಸಂದೀಪ್‌ ದೇವದಾಸ್‌ ಭಟ್‌ ವಿಜಯಿ ತಂಡದ ಪರವಾಗಿ ಉತ್ತಮ ಪ್ರದರ್ಶನ ನೀಡಿದರು. ಬಾಲಕೃಷ್ಣ ಪೈ ಕೋಚ್‌ ಆಗಿ ಸಹಕರಿಸಿದರು.

ಸೆಮಿ ಫೈನಲ್‌ ಪಂದ್ಯದಲ್ಲಿ ಮ್ಯಾನ್‌ ಆಫ್‌ ದಿ ಮ್ಯಾಚ್‌ ಪ್ರಶಸ್ತಿಯನ್ನು ವಸಾಯಿ ರೋಡ್‌ನ‌ ನಾಯಕ ಅಮೇಯ್‌ ಪೈ ಅವರಿಗೆ ನೀಡಲಾಯಿತು. ಅಂತಿಮ ಪಂದ್ಯದಲ್ಲಿ ಮ್ಯಾನ್‌ ಆಫ್‌ ದಿ ಮ್ಯಾಚ್‌ ಮತ್ತು ಮ್ಯಾನ್‌ ಆಫ್‌ ದಿ ಸೀರೀಸ್‌ ಪ್ರಶಸ್ತಿಯನ್ನು ಬಾಲಾಜಿ ಸೇವಾ ಸಮಿತಿ ವಸಾಯಿ ರೋಡ್‌ ತಂಡದ ವಿನಾಯಕ್‌ ಶ್ಯಾನ್‌ಭಾಗ್‌ ಅವರಿಗೆ ನೀಡಲಾಯಿತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ