ಗೋಪಾಲ್‌ ಶೆಟ್ಟಿ ಅವರಿಗೆ ಮೊಗವೀರ ವ್ಯವಸ್ಥಾಪಕ ಮಂಡಳಿಯಿಂದ ಅಭಿನಂದನೆ

Team Udayavani, Jun 16, 2019, 4:14 PM IST

ಮುಂಬಯಿ: ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಉತ್ತರ ಮುಂಬಯಿ ಕ್ಷೇತ್ರದಿಂದ ಭಾರೀ ಮತಗಳ ಅಂತರದಿಂದ ದ್ವಿತೀಯ ಬಾರಿಗೆ ಜಯಗಳಿಸಿದ ತುಳು-ಕನ್ನಡಿಗರ ಹೆಮ್ಮೆಯ ರಾಜಕೀಯ ಧುರೀಣ ಸಂಸದ ಗೋಪಾಲ್‌ ಶೆಟ್ಟಿ ಅವರನ್ನು ಮೊಗವೀರ ವ್ಯವಸ್ಥಾಪಕ ಮಂಡಳಿ, ಮೊಗವೀರ ಕೋ. ಆಪರೇಟಿವ್‌ ಬ್ಯಾಂಕ್‌ ಮತ್ತು ಶ್ರೀ ಮದ್ಭಾರತ ಮಂಡಳಿಯ ವತಿಯಿಂದ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಕೆ. ಎಲ್‌. ಬಂಗೇರ, ಟ್ರಸ್ಟಿ ಪುರಂದರ ಎನ್‌. ಸುವರ್ಣ, ಜತೆ ಕಾರ್ಯದರ್ಶಿ ಲಕ್ಷ್ಮಣ್‌ ಶ್ರೀಯಾನ್‌, ದೇವರಾಜ್‌ ಕುಂದರ್‌, ದೇವರಾಜ ಬಂಗೇರ, ಡಿ. ಬಿ. ಪುತ್ರನ್‌, ಮೊಗವೀರ ಬ್ಯಾಂಕ್‌ ವತಿಯಿಂದ ಕಾರ್ಯಾಧ್ಯಕ್ಷ ಸದಾನಂದ ಎ. ಕೋಟ್ಯಾನ್‌, ಉಪ ಕಾರ್ಯಾಧ್ಯಕ್ಷ ಪಿ. ಧರ್ಮಪಾಲ್‌, ನಿರ್ದೇಶಕರಾದ ಜಯಶೀಲ ತಿಂಗಳಾಯ, ಶ್ರೀ ಮದ್ಭಾರತ ಮಂಡಳಿಯ ಪರವಾಗಿ ಕಾರ್ಯದರ್ಶಿ ವಿ. ಕೆ. ಸುವರ್ಣ ಮತ್ತು ಅಶೋಕ್‌ ಕರ್ಕೇರ, ಬೊರಿವಲಿ ಸ್ಥಳೀಯ ಸಮಾಜ ಸೇವಕ ಶಿವರಾಮ ಅಮೀನ್‌ ಅವರು ಉಪಸ್ಥಿತರಿದ್ದು ಸಂಸದ ಗೋಪಾಲ್‌ ಶೆಟ್ಟಿ ಅವರನ್ನು ಅವರ ಬೊರಿವಲಿಯ

ಕಚೇರಿಯಲ್ಲಿ ಭೇಟಿಯಾಗಿ ಪುಷ್ಪಗುತ್ಛವನ್ನಿತ್ತು ಅಭಿನಂದಿಸಿ ಶುಭಹಾರೈಸಲಾಯಿತು. ಈ ಸಂದರ್ಭದಲ್ಲಿ ಗೋಪಾಲ್‌ ಶೆಟ್ಟಿ ಅವರ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ