ಆಧಾರಿಕಾ ಸಮಾಜ ವಿಕಾಸ್ ಸಂಸ್ಥೆಗೆ ರಾಜ್ಯಪಾಲರ ಭೇಟಿ: ಸಂವಹನ
Team Udayavani, Feb 21, 2021, 12:38 PM IST
ಮುಂಬಯಿ, ಫೆ. 20: ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ಫೆ. 19ರಂದು ಕಾಂದಿವಲಿಯ ಮಹಾವೀರ ನಗರದ ಆಧಾರಿಕಾ ಸಮಾಜ ವಿಕಾಸ್ ಸಂಸ್ಥೆಗೆ ಭೇಟಿ ನೀಡಿ ಮಹಿಳಾ ಕೌಶಲ ತರಬೇತಿ ಮತ್ತು ಉದ್ಯಮಶೀಲತಾ ಕೇಂದ್ರವನ್ನು ಪರಿಶೀಲಿಸಿ ಹಾಜರಿದ್ದ ಮಹಿಳೆಯರೊಂದಿಗೆ ಸಂವಾದ ನಡೆಸಿದರು.
ಈ ಸಂದರ್ಭ ಮಾತನಾಡಿದ ರಾಜ್ಯಪಾಲರು, ತಾಯಿಯ ಶಕ್ತಿಯೇ ದೊಡ್ಡ ಶಕ್ತಿ. ಅಪಾರ ಕಷ್ಟಗಳನ್ನು ಸಹಿಸಿಕೊಳ್ಳುವ ಮೂಲಕ, ತಾಯಿಯ ಶಕ್ತಿಯು ಪ್ರಪಂಚವನ್ನು ಮುನ್ನಡೆಸುತ್ತದೆ. ಇಂದು ಮಹಿಳಾ ಅಭಿವೃದ್ಧಿಗೆ ಮುದ್ರಾ, ಸ್ಟಾರ್ಟ್‌ಅಪ್, ಪ್ರೈಮ್ ಸ್ಕಿಲ್ ಡೆವಲಪೆ¾ಂಟ್ ಮುಂತಾದ ವಿವಿಧ ಯೋಜನೆಗಳು ಲಭ್ಯವಿದೆ. ಮಹಿಳೆಯರು ಈ ಯೋಜನೆಗಳ ಲಾಭವನ್ನು ಪಡೆದುಕೊಂಡು ತಮ್ಮನ್ನು ತಾವು ಉನ್ನತೀಕರಿಸಬೇಕು. ತಮ್ಮ ಜೀವನೋಪಾಯಕ್ಕಾಗಿ ಮಾತ್ರವಲ್ಲ ಇತರ ಮಹಿಳೆಯರನ್ನು ಮುಂದೆ ತರಬೇಕೆಂದು ರಾಜ್ಯಪಾಲರು ಮನವಿ ಮಾಡಿದರು.
ಚಾಲಕ ತರಬೇತಿ, ಬ್ಯೂಟಿ ಪಾರ್ಲರ್ ಕೋರ್ಸ್, ಹೊಲಿಗೆ ಕೆಲಸ ಇತ್ಯಾದಿಗಳನ್ನು ಪೂರೈಸುವ ಮೂಲಕ ಉದ್ಯೋಗ ಮತ್ತು ಸ್ವಯಂ ಉದ್ಯೋಗ ಪಡೆದ ಮಹಿಳೆಯರನ್ನು ರಾಜ್ಯಪಾಲರು ಸಮ್ಮಾನಿಸಿದರು. ಸಂಸದ ಗೋಪಾಲ್ ಶೆಟ್ಟಿ, ಶಾಸಕ ಮನೀಷಾ ಚೌಧರಿ, ಆಧರಿಕ ಸಮಾಜದ ನಿರ್ದೇಶಕ ವಿಕಾಸ್ ಸಂಸ್ಥಾ, ರುಚಿ ಮಾನೆ, ನಗರ ಸೇವಕಿ ಬಿನಾ ದೋಶಿ, ಸ್ತ್ರೀರೋಗತಜ್ಞ ಡಾ| ರನ್ನಾ ದೋಶಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದರೋಡೆಕೋರರನ್ನು ಅಟ್ಟಾಡಿಸಿದ ಜನರು.. ಯಾವ ಸಿನಿಮಾಗೂ ಕಡಿಮೆಯಿಲ್ಲ ಚೇಸಿಂಗ್ ದೃಶ್ಯ
ಕುಮಾರಸ್ವಾಮಿಯನ್ನು ನಂಬಬೇಡಿ, ಅವರೊಂದಿಗೆ ಹೊಂದಾಣಿಕೆ ಬೇಡ: ಬಿಜೆಪಿ ವರಿಷ್ಠರಿಗೆ ಯೋಗೀಶ್ವರ್
CoWin App ಸಮಸ್ಯೆ ! ಎರಡು ದಿನ ಲಸಿಕೆ ಹಂಚಿಕೆ ಇಲ್ಲ ! | Udayavani
ದಾನದ ಪರಿಕಲ್ಪನೆಯ ಕುರಿತು Dr. Gururaj Karajagi ಹೇಳಿದ ಕತೆ ಕೇಳಿ.. Part-3
ಕಾಯಕದಲ್ಲಿ ಕಟ್ಟಡ ಕಟ್ಟುವ ಮೇಸ್ತ್ರಿ; ಬಿಡುವಿನಲ್ಲಿ ಹಾಳೆ ಮುಟ್ಟಾಳೆ ತಯಾರಕರು
ಹೊಸ ಸೇರ್ಪಡೆ
ಪೊಲೀಸ್ ಠಾಣೆ ಬಳಿ ತುಕ್ಕು ಹಿಡಿಯುತ್ತಿವೆ ವಾಹನಗಳು
ಪುತ್ತೂರು ಜಿಲ್ಲೆಯಾದರೆ ಬೆಳ್ತಂಗಡಿಗೂ ಅನುಕೂಲ: ಪ್ರದೇಶವಾರು ಮೂಲ ಸೌಕರ್ಯ ಅಭಿವೃದ್ಧಿ ಸಾಧ್ಯ
ಹಸಿ ತ್ಯಾಜ್ಯದಿಂದ ಗೊಬ್ಬರ ತಯಾರಿ : ಬಂಟ್ವಾಳ ಪುರಸಭೆಯಿಂದ ಮಾರಾಟಕ್ಕೆ ಸಿದ್ಧತೆ
ಬೈರಿಕಟ್ಟೆ-ಕಲ್ಲಜೇರ-ನೆಕ್ಕಿತ್ತಪುಣಿ ರಸ್ತೆ ವಿಸ್ತರಣೆಗೆ ಆಗ್ರಹ
“ರಥ ಚಲಿಸುವ ಧರ್ಮ ಸಭಾ ಮಂಟಪ’ : ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ