Udayavni Special

ರಾಷ್ಟ್ರದ ಅಭಿವೃದ್ಧಿ ಚಿಂತನೆ ಪ್ರತಿ ಮನೆಯಿಂದಲೇ ಆರಂಭವಾಗಲಿ: ನರೇಶ್‌ ದೇವಾಡಿಗ

ದೇವಾಡಿಗ ಸಂಘ ಮುಂಬಯಿ: ನೆರೂಲ್‌ ದೇವಾಡಿಗ ಭವನದಲ್ಲಿ ಸ್ವಾತಂತ್ರ್ಯೋತ್ಸವ

Team Udayavani, Aug 29, 2021, 2:21 PM IST

ರಾಷ್ಟ್ರದ ಅಭಿವೃದ್ಧಿ ಚಿಂತನೆ ಪ್ರತಿ ಮನೆಯಿಂದಲೇ ಆರಂಭವಾಗಲಿ: ನರೇಶ್‌ ದೇವಾಡಿಗ

ನವಿಮುಂಬಯಿ: ರಾಷ್ಟ್ರದ ಬೆಳವಣಿಗೆ, ರಾಷ್ಟ್ರದ ಹಿತಾಸಕ್ತಿ ಎಲ್ಲವೂ ನಮ್ಮ ನಮ್ಮ ಮನೆಯಿಂದಲೇ ಪ್ರಾರಂಭಗೊಳ್ಳುತ್ತದೆ. ಮನೆಯಲ್ಲಿ, ಸಮಾಜದಲ್ಲಿ ಪ್ರಾರಂಭಗೊಂಡ ಒಮ್ಮತ, ಒಗ್ಗಟ್ಟು, ಬೆಳವಣಿಗೆ ಮುಂದುವರಿದು ದೇಶದ ಭದ್ರತೆಗೆ ನೆರವಾಗುವುದು. ಅದಕ್ಕಾಗಿ ನಾವು ನಮ್ಮ ಮನೆ, ಕೇರಿ, ಸಮಾಜಗಳಿಂದಲೇ ದೇಶದ ಬೆಳವಣಿಗೆ, ದೇಶದ ಸಂರಕ್ಷಣೆ ಮತ್ತು ದೇಶದ ಪ್ರಗತಿ ಬಗ್ಗೆ ಚಿಂತನೆಯನ್ನು ಮುಂದುವರಿಸುತ್ತಿರ ಬೇಕು ಎಂದು ದೇವಾಡಿಗ ಸಂಘ ಮುಂಬಯಿ ಇದರ ಉಪಾಧ್ಯಕ್ಷ ನರೇಶ್‌ ದೇವಾಡಿಗ ಹೇಳಿದರು.

ಆ. 15 ರಂದು ಐರೋಲಿಯ ದೇವಾಡಿಗ ಭವನದಲ್ಲಿ ನಡೆದ 75ನೇ ಸ್ವಾತಂತ್ರ್ಯದಿನಾಚರಣೆಯ ಸಂದರ್ಭ ಧ್ವಜಾರೋಹಣಗೈದು ಮಾತನಾಡಿದ ಅವರು, ದೇಶದ ಸ್ವಾತಂತ್ರಕ್ಕಾಗಿ ಬಲಿದಾನ ಮಾಡಿದ ಹೋರಾಟಗಾರರನ್ನು ಸ್ಮರಿಸಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವುದು ಎಲ್ಲರ ಧರ್ಮ ಎಂದರು.

ಸಂಘದ ಮಾಜಿ ಅಧ್ಯಕ್ಷ ಎಸ್‌. ಪಿ. ಕರ್ಮರನ್‌ ಮಾತನಾಡಿ, ಭಾರತದಲ್ಲಿ ಇಂದು ನಾವು ಶಾಂತಿಯುತವಾಗಿ ಬಾಳಲು ಕಾರಣ ನಮಗೆ ದೊರಕಿದ ಸ್ವಾತಂತ್ರ್ಯವಾಗಿದೆ. ಈ ಸ್ವಾತಂತ್ರ್ಯಪಡೆಯಲು ಅದೆಷ್ಟೋ ವೀರರು ಹೋರಾಟ ನಡೆಸಿದ ಕಾರಣ ಈಗ ನಾವು ಯಾವುದೇ ಚಿಂತೆಯಿಲ್ಲದೆ ಸುರಕ್ಷಿತವಾಗಿ ಬದುಕಲು ಸಾಧ್ಯವಾಗಿದೆ. ಅವರ ಬಲಿದಾನದಿಂದ ಬಂದಂತಹ ಈ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಅದನ್ನು ಪ್ರಬಲವಾಗಿಸುವಲ್ಲಿ ಭಾರತದ ಪ್ರತಿ ಪ್ರಜೆಗಳು ದುಡಿಯಬೇಕಾಗಿದೆ. ನಮ್ಮ ಮನೆಯಲ್ಲಿ, ಸಮಾಜದಲ್ಲಿ ನಾವು ಒಗ್ಗಟ್ಟಿನಿಂದ ಬಾಳಿ ಬದುಕಿದರೆ ಅದೇ ದೇಶದ ಉನ್ನತಿಗೆ ಸಾಧನ ಎಂದು ಹೇಳಿದರು.

ಸಂಘದ ಮಹಿಳಾ ಉಪಾಧ್ಯಕ್ಷೆ ಪೂರ್ಣಿಮಾ ಡಿ. ದೇವಾಡಿಗ ಮಾತನಾಡಿ, ಸಂಘ ಬೆಳೆಯಲು ಕಾರಣವಾದ ಎಲ್ಲ ಬಾಂಧವರಿಗೆ ಸಂಘದ ಪರವಾಗಿ ಧನ್ಯವಾದಗಳು. ಸಂಘದ ಶ್ರೇಯಸ್ಸಿಗೆ, ಸಂಘದ ಬೆಳವಣಿಗೆಗಾಗಿ ಎಲ್ಲರೂ ಮುಂದೆ ಬಂದು ಒಮ್ಮತದಿಂದ ಕೆಲಸ ಮಾಡಿದರೆ ಅದೇ ನಿಜವಾದ ಸಮಾಜಸೇವೆ ಮತ್ತು ದೇಶಸೇವೆ ಎಂದು ಹೇಳಿ ಶುಭ ಹಾರೈಸಿದರು.

ಸಂಘದ ಮಾಜಿ ಕೋಶಾಧಿಕಾರಿ ದಯಾನಂದ ದೇವಾಡಿಗ, ಹಿರಿಯ ಸದಸ್ಯ ಚಂದ್ರಶೇಖರ್‌ ದೇವಾಡಿಗ, ಸಂಘದ ಸ್ಥಳೀಯ ಸದಸ್ಯರಾದ ಭೋಜ ದೇವಾಡಿಗ, ಮಹಿಳಾ ಸದಸ್ಯೆಯರಾದ ಸುನಂದಾ ಕರ್ಮರನ್‌, ಧನವತಿ ದೇವಾಡಿಗ, ಶಾಂತಾ ಪಿ. ದೇವಾಡಿಗ, ಶಾಂತಾ ಎಸ್‌. ದೇವಾಡಿಗ, ಆಶಾ ದೇವಾಡಿಗ, ವೈಷ್ಣವಿ ಎನ್‌. ದೇವಾಡಿಗ, ತನ್ವಿ ಡಿ. ದೇವಾಡಿಗ, ಸ್ವಾತಿ ದೇವಾಡಿಗ, ವಿಮಲಾ ದೇವಾಡಿಗ, ಧನುಷ್‌ ಎನ್‌. ದೇವಾಡಿಗ, ರೋಹನ್‌ ಡಿ. ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.ಸಂಘದ ನವಿಮುಂಬಯಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ನ್ಯಾಯವಾದಿ ಪ್ರಭಾಕರ್‌ ದೇವಾಡಿಗ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ಟಾಪ್ ನ್ಯೂಸ್

tryhtr

ನಾಳೆಯ ‘ಭಾರತ್ ಬಂದ್‍’ಗೆ ಕಾಂಗ್ರೆಸ್ ಬೆಂಬಲ : ಡಿ.ಕೆ.ಶಿವಕುಮಾರ

ghfyht

ಉಸಿರು ಚೆಲ್ಲಿದೆ ಗಂಗೆ | ಸಕ್ರೆಬೈಲು ಬಿಡಾರದಲ್ಲಿ ಶೋಕ

ರೈತಸಂಘ ಹೋರಾಟದ ಹೆಸರಲ್ಲಿ ಅಭಿವೃದ್ಧಿ ಕೆಲಸಕ್ಕೆ ಅಡ್ಡಿ ಮಾಡುವ ಅಗತ್ಯವಿಲ್ಲ : ಪುಟ್ಟರಾಜು

ರೈತಸಂಘ ಹೋರಾಟದ ಹೆಸರಲ್ಲಿ ಅಭಿವೃದ್ಧಿ ಕೆಲಸಕ್ಕೆ ಅಡ್ಡಿ ಮಾಡುವ ಅಗತ್ಯವಿಲ್ಲ : ಪುಟ್ಟರಾಜು

ಗೋವಾದಲ್ಲಿ ಕನ್ನಡ ಭವನ ನಿರ್ಮಾಣದ ಜೊತೆ ಪದವಿ ಶಿಕ್ಷಣದವರೆಗೆ ಕನ್ನಡ ವಿಸ್ತರಣೆ : ಮಹೇಶ್ ಜೋಶಿ

ಗೋವಾದಲ್ಲಿ ಕನ್ನಡ ಭವನ ನಿರ್ಮಾಣದ ಜೊತೆ ಪದವಿ ಶಿಕ್ಷಣದವರೆಗೆ ಕನ್ನಡ ವಿಸ್ತರಣೆ : ಮಹೇಶ್ ಜೋಶಿ

ಗಂಗಾವತಿ : ಭತ್ತದ ಗದ್ದೆಗೆ ನುಗ್ಗಿದ ಕಲ್ಯಾಣ ಕರ್ನಾಟಕ ಸಾರಿಗೆ ಬಸ್

ಗಂಗಾವತಿ : ಭತ್ತದ ಗದ್ದೆಗೆ ನುಗ್ಗಿದ ಕಲ್ಯಾಣ ಕರ್ನಾಟಕ ಸಾರಿಗೆ ಬಸ್

panjab

ಪಂಜಾಬ್ : ತೀವ್ರ ಬಿಕ್ಕಟ್ಟಿನ ನಡುವೆ ಛನ್ನಿ ಸಂಪುಟ ರಚನೆ

fcgfgtd

ನಾವು ರಾಜೀನಾಮೆ ನೀಡಿ ಬಿಜೆಪಿಗೆ ಬರದಿದ್ದರೆ ಸಚಿವರಾಗುತ್ತಿರಲಿಲ್ಲ : ಬಿ.ಸಿ ಪಾಟೀಲ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತುಳು ಕೂಟ ಫೌಂಡೇಶನ್‌ ನಲಸೋಪರ ವಾರ್ಷಿಕ ಮಹಾಸಭೆ

ತುಳು ಕೂಟ ಫೌಂಡೇಶನ್‌ ನಲಸೋಪರ ವಾರ್ಷಿಕ ಮಹಾಸಭೆ

ಯಕ್ಷಗಾನ ಕ್ಷೇತ್ರಕ್ಕೆ ಅಜೆಕಾರು ಕಲಾಭಿಮಾನಿ ಬಳಗದ ಕೊಡುಗೆ ಅಪಾರ: ಶಾಂತರಾಮ್‌ ಶೆಟ್ಟಿ 

ಯಕ್ಷಗಾನ ಕ್ಷೇತ್ರಕ್ಕೆ ಅಜೆಕಾರು ಕಲಾಭಿಮಾನಿ ಬಳಗದ ಕೊಡುಗೆ ಅಪಾರ: ಶಾಂತರಾಮ್‌ ಶೆಟ್ಟಿ 

ನೊಂದವರಿಗೆ ನೆರಳಾಗುತ್ತಿರುವ ಒಕ್ಕೂಟದ ಕಾರ್ಯ ಸ್ತುತ್ಯರ್ಹ

ನೊಂದವರಿಗೆ ನೆರಳಾಗುತ್ತಿರುವ ಒಕ್ಕೂಟದ ಕಾರ್ಯ ಸ್ತುತ್ಯರ್ಹ

67ನೇ ವಾರ್ಷಿಕ ಗಣೇಶೋತ್ಸವ ಸಂಪನ್ನ; ಸ್ನೇಹ ಸಮ್ಮಿಲನ

67ನೇ ವಾರ್ಷಿಕ ಗಣೇಶೋತ್ಸವ ಸಂಪನ್ನ; ಸ್ನೇಹ ಸಮ್ಮಿಲನ

ನಾವು ಮಾಡುವ ಧರ್ಮ ಕಾರ್ಯಗಳು ಸ್ಮರಣೀಯ: ಚಂದ್ರಹಾಸ್‌ ಕೆ. ಶೆಟ್ಟಿ

ನಾವು ಮಾಡುವ ಧರ್ಮ ಕಾರ್ಯಗಳು ಸ್ಮರಣೀಯ: ಚಂದ್ರಹಾಸ್‌ ಕೆ. ಶೆಟ್ಟಿ

MUST WATCH

udayavani youtube

ನೂತನ ರಾಷ್ಟ್ರೀಯ ಶಿಕ್ಷಣ ನೀತಿ 2020 ಸಮಾಜಕ್ಕೆ ಬಹಳಷ್ಟು ಅವಶ್ಯಕತೆ : ಡಾ| ಅಶ್ವತ್ಥನಾರಾಯಣ

udayavani youtube

ಕೋವಿಡ್ ಆತಂಕದ ನಡುವೆ ಜಾನಪದ ಸಮ್ಮೇಳನದಲ್ಲಿ ಶಾಲಾ ಮಕ್ಕಳು ಭಾಗಿ

udayavani youtube

ಪಾಕ್ – ಚೀನಾ ಹೆಸರು ಹೇಳಲು ಮೋದಿಗೆ ಭಯವೇಕೆ ? ಕಾಂಗ್ರೆಸ್ ಪ್ರಶ್ನೆ|

udayavani youtube

ವಿನಾಯಕ ನಗರಕ್ಕೆ ವಿಘ್ನ ತಂದೊಡ್ಡಲಿರುವ ಅಕ್ರಮ ಗ್ಯಾಸ್ ಫಿಲ್ಲಿಂಗ್

udayavani youtube

ಕಾಪು ಗೃಹೋಪಯೋಗಿ ಮಾರಾಟ ಮಳೆಗೆಯಲ್ಲಿ‌ ಬೆಂಕಿ, ಅಪಾರ ಸೊತ್ತು‌ಹಾನಿ

ಹೊಸ ಸೇರ್ಪಡೆ

atm

ಎಟಿಎಂನಲ್ಲಿ ಹೊಗೆ;ಕೆಲ ಕಾಲ ಆತಂಕ

tryhtr

ನಾಳೆಯ ‘ಭಾರತ್ ಬಂದ್‍’ಗೆ ಕಾಂಗ್ರೆಸ್ ಬೆಂಬಲ : ಡಿ.ಕೆ.ಶಿವಕುಮಾರ

Untitled-1

ದಶಕದ ಬಳಿಕ ಶಾಲೆ ಪುನಾರಂಭ

ghfyht

ಉಸಿರು ಚೆಲ್ಲಿದೆ ಗಂಗೆ | ಸಕ್ರೆಬೈಲು ಬಿಡಾರದಲ್ಲಿ ಶೋಕ

ರೈತಸಂಘ ಹೋರಾಟದ ಹೆಸರಲ್ಲಿ ಅಭಿವೃದ್ಧಿ ಕೆಲಸಕ್ಕೆ ಅಡ್ಡಿ ಮಾಡುವ ಅಗತ್ಯವಿಲ್ಲ : ಪುಟ್ಟರಾಜು

ರೈತಸಂಘ ಹೋರಾಟದ ಹೆಸರಲ್ಲಿ ಅಭಿವೃದ್ಧಿ ಕೆಲಸಕ್ಕೆ ಅಡ್ಡಿ ಮಾಡುವ ಅಗತ್ಯವಿಲ್ಲ : ಪುಟ್ಟರಾಜು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.