ಕೋಟಿ-ಚೆನ್ನಯ ಗ್ರೂಪ್ಸ್‌  ಪುಣೆಯಿಂದ:ಮಾ.9ರಂದು ಕ್ರಿಕೆಟ್‌ ಕೂಟ


Team Udayavani, Feb 18, 2018, 10:52 AM IST

1602mum02.jpg

ಪುಣೆ: ಪುಣೆಯ ಕೋಟಿ ಚೆನ್ನಯ ಗ್ರೂಪ್ಸ್‌  ಇದರ ವತಿಯಿಂದ ಎರಡನೇ  ವರ್ಷದ ಕೋಟಿ -ಚೆನ್ನಯ ಟ್ರೋಫಿ ಕ್ರಿಕೆಟ್‌ ಪಂದ್ಯಾಟವು ಪಾಷಣ್‌ನಲ್ಲಿರುವ ಎನ್‌ಸಿಎಲ್‌ ಗ್ರೌಂಡ್‌ನ‌ಲ್ಲಿ ಮಾ. 9ರಂದು ಬೆಳಗ್ಗೆ  7.30 ರಿಂದ  ಜರಗಲಿದೆ. ಈ ಬಾರಿಯ  ಕ್ರಿಕೆಟ್‌ ಪಂದ್ಯಾಟವನ್ನು ಮುಕ್ತವಾಗಿ ಕರ್ನಾಟಕ ರಾಜ್ಯದ  ತುಳು ಕನ್ನಡಿಗರಿಗಾಗಿ ಆಯೋಜಿಸಲಾಗಿದ್ದು,  ಆಸಕ್ತ‌ ತಂಡಗಳು  ತಂಡದ ನೋಂದಾವಣಿ ಶುಲ್ಕವನ್ನು ಪಾವತಿಸಿ ಮಾ. 3ರೊಳಗೆ ಹೆಸರು ನೋದಾಯಿಸಿಕೊಳ್ಳಬಹುದು. ಆನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.

ಈ ಕ್ರಿಕೆಟ್‌ ಟೂರ್ನಮೆಂಟ್‌ನಲ್ಲಿ ಭಾಗವಹಿಸುವ ತಂಡದ ಪ್ರತಿಯೊಬ್ಬ ಸದಸ್ಯನು  ಕರ್ನಾಟಕ ರಾಜ್ಯಕ್ಕೆ ಸಂಬಂಧ ಪಟ್ಟವನಾಗಿರಬೇಕು. ಹಾಗೂ  ತುಳು ಅಥವಾ ಕನ್ನಡ ಮಾತನಾಡಲು ಬರತಕ್ಕದ್ದು. ಪಂದ್ಯಾಟದ  ದಿನದಂದು ಕಡ್ಡಾಯವಾಗಿ ಅರ್ಹತಾ  ಗುರುತು ಪತ್ರವಾದ ಆಧಾರ್‌ಕಾರ್ಡ್‌ ಅಥವಾ ವೋಟರ್‌ ಕಾರ್ಡ್‌ನ ಮೂಲ ಪ್ರತಿಯೊಂದಿಗೆ ಹಾಜರಿರತಕ್ಕದ್ದು. ಬೇರೆ ಯಾವುದೇ ಪರಿಚಯ ಪತ್ರ ಪರಿಗಣಿಸಲಾಗುವುದಿಲ್ಲ. ಪ್ರತಿಯೊಂದು ತಂಡದ ಮುಖ್ಯಸ್ಥರು ಈ ಬಗ್ಗೆ ಗಮನ ಹರಿಸಬೇಕೆಂದು ಸಂಘಟಕರು ತಿಳಿಸಿದ್ದಾರೆ.

ಆಯೋಜಕರಾದ ಕೋಟಿ ಚೆನ್ನಯ ಗ್ರೂಪ್‌ನವರ ನಿಯಮಗಳಂತೆ ಪಂದ್ಯಾಟವು ನಡೆಯಲಿದ್ದು,  ತೀರ್ಪುಗಾರರ ತೀರ್ಪು ಅಂತಿಮವಾಗಿರುತ್ತದೆ. ವಿಜೇತ ಪ್ರಥಮ ತಂಡಕ್ಕೆ ನಗದು 22222  ರೂ. ಹಾಗೂ ಕೋಟಿ ಚೆನ್ನಯ ಟ್ರೋಫಿ, ದ್ವಿತೀಯ ತಂಡಕ್ಕೆ ನಗದು 11111 ರೂ. ಹಾಗೂ  ಟ್ರೋಫಿಯನ್ನು ಪ್ರದಾನಿಸಲಾಗುವುದು. ತೃತೀಯ ಸ್ಥಾನಿ ತಂಡಕ್ಕೆ ಟ್ರೋಫಿಯನ್ನಿತ್ತು ಗೌರವಿಸಲಾಗುವುದು.  ಹೆಚ್ಚಿನ ಮಾಹಿತಿಗಾಗಿ  ಕೋಟಿ ಚೆನ್ನಯ ಗ್ರೂಪ್‌ನ  ಸಂಘಟಕರಾದ  ಕಿಶೋರ್‌ ಕೋಥ್ರೊಡ್‌  (7773900041), ಪ್ರದೀಪ್‌ ವಾಘೋಲಿ  (9623332323) ಮತ್ತು ಸುದೀಪ್‌ ಪೂಜಾರಿ ಮುನಿಯಾಲ್‌   (7972654058)  ಇವರನ್ನು ಸಂಪರ್ಕಿಸಬಹುದು.

ಕೋಟಿ-ಚೆನ್ನಯ ಗ್ರೂಪ್‌ನಿಂದ ಸಮಾಜ ಸೇವೆ 

ಪುಣೆಯಲ್ಲಿ  2017 ಸಾಲಿನಿಂದ ಕೋಟಿ-ಚೆನ್ನಯ ಮಿತ್ರವರ್ಗವು ತಮ್ಮ ಪ್ರಥಮ ವರ್ಷದ ಪಾದಾರ್ಪಣೆಯೊಂದಿಗೆ ಕ್ರಿಕೆಟ್‌ ಪಂದ್ಯಾಟವನ್ನು ಆಯೋಜಿಸಿ ಯಶಸ್ವಿಗೊಳಿಸಿದೆ. ವರ್ಷದ ತಮ್ಮ ಕಾರ್ಯಕ್ರಮಗಳಲ್ಲಿ ಜಮೆಯಾದ ಹಣದಲ್ಲಿ  ಖರ್ಚನ್ನು ತೆಗೆದು ಉಳಿದ ಮೊತ್ತವನ್ನು  ಯಾವುದೇ ರೀತಿಯಿಂದ ತುಳು ಕನ್ನಡಿಗರಿಗೆ ಸಹಾಯವಾಗುವಂತಹ ಸೇವಾ ಕಾರ್ಯಗಳನ್ನು ಮಾಡುವ ಉದ್ದೇಶ ಈ ಗ್ರೂಪ್‌ನವರದ್ದಾಗಿದೆ. ಈ ನಿಟ್ಟಿನಲ್ಲಿ ಕಳೆದ ವರ್ಷದಲ್ಲಿ ಉಳಿದ ಆದಾಯವನ್ನು  ಈ ಮಿತ್ರವರ್ಗದವರು ಇತ್ತೀಚೆಗೆ ಕೋಟಿ-ಚೆನ್ನಯರ ಜನ್ಮ ಪಡೆದ  ಪದುಮಲೆ  ಗೆಜ್ಜೆಗಿರಿ ನಂದನವನ  ಜೀರ್ಣೋದ್ಧಾರಕ್ಕಾಗಿ ಸುಮಾರು 35 ಸಾವಿರ ರೂ. ಗಳ ದೇಣಿಗೆಯನ್ನು  ಅಲ್ಲಿನ ಟ್ರಸ್ಟ್‌ಗೆ  ಹಸ್ತಾಂತರಿಸಿದ್ದಾರೆ. ಈ ಬಾರಿಯೂ ಇಂತಹ ಬೇರೆ ಸಮಾಜ ಸೇವಾ ಯೋಜನೆಯೊಂದಿಗೆ ಕಾರ್ಯಪ್ರವೃತ್ತರಾಗಿ ಈ ಪಂದ್ಯಾಟವನ್ನು  ಅಯೋಜಿಸುತ್ತಿದ್ದಾ ರೆ.

ಟಾಪ್ ನ್ಯೂಸ್

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.