ರಾಜ್ಯದಲ್ಲಿ ಲಾಕ್‌ಡೌನ್‌ ಸಡಿಲಿಕೆ: ಜಿಲ್ಲಾವಾರು ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಆದೇಶ


Team Udayavani, May 14, 2020, 9:36 AM IST

ರಾಜ್ಯದಲ್ಲಿ ಲಾಕ್‌ಡೌನ್‌ ಸಡಿಲಿಕೆ: ಜಿಲ್ಲಾವಾರು ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಆದೇಶ

ಮುಂಬಯಿ: ಮುಂದಿನ ಮೂರು ದಿನಗಳಲ್ಲಿ ಲಾಕ್‌ಡೌನ್‌ನಿಂದ ನಿರ್ಗಮನ ಯೋಜನೆಯನ್ನು ಸಿದ್ಧಪಡಿಸುವಂತೆ ಮುಖ್ಯ ಮಂತ್ರಿ ಉದ್ಧವ್‌ ಠಾಕ್ರೆ ಜಿಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರೂ ಸಹ, ಮಹಾರಾಷ್ಟ್ರ ಮಂಗಳವಾರ ಕೋವಿಡ್‌ -19 ಪ್ರಕರಣಗಳಲ್ಲಿ 25 ಸಾವಿರ ಗಡಿಯನ್ನು ದಾಟಿದೆ. ಮುಂಬಯಿ, ಪುಣೆ ಮತ್ತು ನಾಸಿಕ್‌ನಂತಹ ಕೆಂಪು ವಲಯಗಳಲ್ಲಿ ಲಾಕ್‌ಡೌನ್‌ ಅನ್ನು ಮುಂದುವರಿಸುತ್ತಿರುವಾಗ, ಕಡಿಮೆ ಪೀಡಿತ ಪ್ರದೇಶಗಳಲ್ಲಿ ನಿರ್ಬಂಧಗಳನ್ನು ಮತ್ತಷ್ಟು ಸಡಿಲಿಸಲು ರಾಜ್ಯವು ಮುಂದಾಗಿದೆ.

25 ಸಾವಿರ ಗಡಿ ದಾಟಿದ ವೈರಸ್‌ ಪೀಡಿತರ ಸಂಖ್ಯೆ
ರಾಜ್ಯವು 1,026 ಹೊಸ ಪ್ರಕರಣಗಳನ್ನು ವರದಿ ಮಾಡಿದ್ದು 426 ಹೊಸ ಸೋಂಕುಗಳ ಜತೆಗೆ ಮುಂಬಯಿ ಒಟ್ಟು 14,947ಕ್ಕೆ ತಲುಪಿದೆ. ಮಂಗಳವಾರ ಒಟ್ಟು 53 ಸಾವುಗಳು ಸಂಭವಿಸಿ ಸಾವಿನ ಸಂಖ್ಯೆ 911ಕ್ಕೆ ತಲುಪಿದೆ. ಮುಂಬಯಿಯಲ್ಲಿ 28, ಪುಣೆ ಮತ್ತು ಪನ್ವೆಲ್‌ನಲ್ಲಿ ತಲಾ ಆರು, ಜಲ್ಗಾಂವ್‌ನಲ್ಲಿ ಐದು, ಸೋಲಾಪುರದಲ್ಲಿ ಮೂರು ಮಂದಿ ಬಲಿಯಾಗಿ¨ªಾರೆ. ಮಂಗಳವಾರ ಸಾವನ್ನಪ್ಪಿದ ರೋಗಿಗಳಲ್ಲಿ 21 ಮಂದಿ 60 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ, 27 ಮಂದಿ 40ರಿಂದ 59 ವರ್ಷ ವಯಸ್ಸಿನವರಾಗಿದ್ದರೆ. ಉಳಿದವರು 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಅವುಗಳಲ್ಲಿ 35 ಮಂದಿ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೃದಯ ಕಾಯಿಲೆಗಳು ಸೇರಿದಂತೆ ಹೆಚ್ಚಿನ ಅಪಾಯದ ಕೊಮೊರ್ಬಿಡಿಟಿಗಳನ್ನು ಹೊಂದಿದ್ದರು ಎಂದು ಮೂಲಗಳು ತಿಳಿಸಿವೆ. ಕಳೆದ ನಾಲ್ಕು ದಿನಗಳಲ್ಲಿ ರಾಜ್ಯವು 5,364 ಪ್ರಕರಣಗಳನ್ನು ವರದಿ ಮಾಡಿದ್ದು ಈ ಅವಧಿಯಲ್ಲಿ 190 ಸಾವುಗಳು ಸಂಭವಿಸಿವೆ.

ಕಂಟೈನ್‌ಮೆಂಟ್‌ ವಲಯಗಳಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹ
ಲಾಕ್‌ಡೌನ್‌ ನಿರ್ಗಮನ ಯೋಜನೆಯಲ್ಲಿ, ಠಾಕ್ರೆ ಕಂಟೈನ್‌ಮೆಂಟ್‌ ವಲಯಗಳಲ್ಲಿ ಕಟ್ಟುನಿಟ್ಟಾದ ಲಾಕ್‌ಡೌನ್‌ ಅನುಷ್ಠಾನಕ್ಕೆ ಒತ್ತು ನೀಡಿದ್ದು ಈ ಪ್ರದೇಶಗಳಿಂದ ವೈರಸ್‌ ಹರಡಬಾರದು ಎಂದು ಹೇಳಿದ್ದಾರೆ. ಸಾಕಷ್ಟು ಆರೋಗ್ಯ ಯಂತ್ರೋಪಕರಣಗಳನ್ನು ಹೊಂದಿರುವ ಜಿಲ್ಲೆಗಳು ರೋಗಲಕ್ಷಣಗಳು ಮತ್ತು ಕೊಮೊರ್ಬಿಡಿಟಿಗಳನ್ನು ಕಂಡುಹಿಡಿಯಲು ಜನರ ಮನೆ-ಮನೆಗೆ ತಪಾಸಣೆ ಪ್ರಾರಂಭಿಸಬೇಕು ಎಂದು ಮುಖ್ಯಮಂತ್ರಿ ಆದೇಶ ನೀಡಿದ್ದಾರೆ. ಉದ್ಧವ್‌ ಠಾಕ್ರೆ ಅವರು ವಿಭಾಗೀಯ ಆಯುಕ್ತರು ಮತ್ತು ಜಿಲ್ಲಾಧಿಕಾರಿ ಗಳೊಂದಿಗೆ ವಿಡಿಯೋ ಕಾನ್ಫರೆನ್ಸ್‌ ನಡೆಸಿದ್ದು ಎಲ್ಲಾ ಜಿಲ್ಲಾ ಅಧಿಕಾರಿಗಳಿಗೆ ತಮ್ಮ ಸಲಹೆಗಳು ಮತ್ತು ನಿರೀಕ್ಷೆಗಳೊಂದಿಗೆ ನಿರ್ಗಮನ ಯೋಜನೆಯನ್ನು ಸಲ್ಲಿಸುವಂತೆ ಹೇಳಿದ್ದಾರೆ. ಮೇ 15ರೊಳಗೆ ಎಲ್ಲಾ ಜಿಲ್ಲೆಗಳಿಂದ ಯೋಜನೆ ಬರಬೇಕಿದೆ. ಅದರ ಆಧಾರದ ಮೇಲೆ ರಾಜ್ಯವು ತನ್ನ ಯೋಜನೆಯನ್ನು ಸಿದ್ಧಪಡಿಸಿ ಅದನ್ನು ಕೇಂದ್ರಕ್ಕೆ ಸಲ್ಲಿಸುತ್ತದೆ. ಪ್ರಸ್ತುತ ಕೊರೊನಾ ವೈರಸ್‌ ಹರಡುವಿಕೆಯ ಸರಪಳಿಯನ್ನು ಮುರಿಯಬೇಕು. ರಾಜ್ಯದಲ್ಲಿ ಕಂಟೈನ್‌ಮೆಂಟ್‌ ವಲಯಗಳ ಹೊರಗೆ ಯಾವುದೇ ಪ್ರಸರಣವಾಗಬಾರದು ಎಂದು ಸಿಎಂ ಒತ್ತಿ ಹೇಳಿದರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

50ಕ್ಕೂ ಹೆಚ್ಚು ರೈಲುಗಳಲ್ಲಿ 65,000ಕ್ಕೂ ಹೆಚ್ಚು ವಲಸಿಗರ ರವಾನೆ
ಕೇವಲ ಒಂಬತ್ತು ದಿನಗಳಲ್ಲಿ ರಾಜ್ಯವು 10,514 ಪ್ರಕರಣಗಳನ್ನು ಕಂಡರೆ, ಈ ಅವಧಿಯಲ್ಲಿ 373 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯ ಆರೋಗ್ಯ ಇಲಾಖೆಯ ಪ್ರಕಾರ ರಾಜ್ಯದಲ್ಲಿ ಮರಣ ಪ್ರಮಾಣವು ಎ. 12 ರಂದು ಶೇ. 7.21ರಿಂದ ಶೇ. 3.71ರಷ್ಟಿದೆ. ಮಹಾರಾಷ್ಟ್ರವು 50ಕ್ಕೂ ಹೆಚ್ಚು ರೈಲುಗಳಲ್ಲಿ 65,000ಕ್ಕೂ ಹೆಚ್ಚು ವಲಸಿಗರನ್ನು ವಿವಿಧ ರಾಜ್ಯಗಳಿಗೆ ವಾಪಸ್‌ ಕಳುಹಿಸಿದೆ. ನಾವು ಕಳೆದ 50 ದಿನಗಳಿಂದ ಮನೆಯಿಲ್ಲದವರು, ವಲಸಿಗರು, ಭಿಕ್ಷುಕರು ಸೇರಿದಂತೆ 16 ಲಕ್ಷಕ್ಕೂ ಹೆಚ್ಚು ಜನರಿಗೆ ಆಹಾರವನ್ನು ನೀಡುತ್ತಿದ್ದೇವೆ. ಇದರಲ್ಲಿ ವಿವಿಧ ಜಿಲ್ಲೆಗಳ ಆಶ್ರಯದಲ್ಲಿದ್ದ 5.70 ಲಕ್ಷ ವಲಸಿಗರು ಸೇರಿದ್ದಾರೆ. ರೈಲುಗಳಲ್ಲಿ ವಾಪಸ್‌ ಕಳುಹಿಸಲ್ಪಟ್ಟವರಷ್ಟೆ ಸಂಖ್ಯೆಯ ವಲಸಿಗರನ್ನು ಬಸ್‌ಗಳಲ್ಲಿ ವಾಪಸ್‌ ಕಳುಹಿಸಲಾಗಿದೆ. ಸಾವಿರಾರು ಮಂದಿಯನ್ನು ವಾಪಸ್‌ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ. ಕೆಲವು ಲಕ್ಷ ವಲಸೆ ಕಾರ್ಮಿಕರು ನಗರಗಳಲ್ಲಿ ಸ್ವಂತ ಅಥವಾ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಅವರು ರೈಲುಗಳು ಪ್ರಾರಂಭವಾದಾಗಲೆಲ್ಲಾ ಹಿಂದಿರುಗುತ್ತಾರೆ. ನಮ್ಮಲ್ಲಿ ದತ್ತಾಂಶ ಸಂಗ್ರಹ ವಿಲ್ಲದಿದ್ದರೂ, ರೈಲುಗಳು ಪ್ರಾರಂಭವಾದ ಬಳಿಕ ಮುಂಬಯಿ, ಥಾಣೆ, ನವೀ ಮುಂಬಯಿ, ಪುಣೆ, ನಾಸಿಕ್‌ ಮುಂತಾದ ನಗರಗಳಿಂದ ಸಾಮೂಹಿಕ ವಲಸೆ ಹೋಗಬಹುದು ಎಂದು ಪರಿಹಾರ ಮತ್ತು ಪುನರ್ವಸತಿ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗೋವಾ ಮಾದರಿ ಮನೆ ಮನೆ ಸಮೀಕ್ಷೆ
ಕೋವಿಡ್‌ -19ಕ್ಕಾಗಿ ಮನೆ-ಮನೆ ಸಮೀಕ್ಷೆ ನಡೆಸಿದ ಗೋವಾದ ಉದಾಹರಣೆಯನ್ನು ಮುಖ್ಯಮಂತ್ರಿ ಉಲ್ಲೇಖೀಸಿದ್ದಾರೆ ಎಂದು ಸಿಎಂಒ ನೀಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಗೋವಾದ ಗಾತ್ರವು ನಮ್ಮ ಒಂದು ಜಿಲ್ಲೆಯಷ್ಟಿದೆ. ಅವರು ಮನೆ ಮನೆಗೆ ತೆರಳಿ ರೋಗಲಕ್ಷಣಗಳಿಗಾಗಿ ಜನರನ್ನು ಪರೀಕ್ಷಿಸಿದರು. ಜಿಲ್ಲಾ ಅಧಿಕಾರಿಗಳು ಕೊರೊನಾ ವೈರಸ್‌ಗೆ ಮಾತ್ರವಲ್ಲ, ಇತರ ಕಾಯಿಲೆಗಳಿಗೂ ಪ್ರಾಥಮಿಕ ತಪಾಸಣೆ ನಡೆಸಿದರೆ, ಜನರು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯುವುದಲ್ಲದೆ, ಗುಣಮುಖರಾಗುತ್ತಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಸಭೆಯ ಭಾಗವಾಗಿದ್ದ ವಿಭಾಗೀಯ ಆಯುಕ್ತರು, ಅವರು (ಸಿಎಂ) ಆರೋಗ್ಯ ಯಂತ್ರೋಪಕರಣಗಳಿಗೆ ಅನುಗುಣವಾಗಿ ಗಣನೀಯ ಜನಸಂಖ್ಯೆಯನ್ನು ಹೊಂದಿರುವ ಕೆಲವು ಜಿಲ್ಲೆಗಳು ಮನೆ-ಮನೆ ತಪಾಸಣೆಯಲ್ಲಿ ತೊಡಗಬೇಕು ಎಂದು ಹೇಳಿದರು.

ಹೊಸ ಪ್ರಕರಣಗಳ ಗಮನಾರ್ಹ ಏರಿಕೆ
ಕೋವಿಡ್‌ -19 ಪ್ರಕರಣಗಳು ನಿರಂತರವಾಗಿ ಏರಿಕೆಯಾಗುತ್ತಿರುವುದರಿಂದ ಮುಂಬಯಿ ಮತ್ತು ಪುಣೆಯಂತಹ ಕೆಂಪು ವಲಯಗಳಲ್ಲಿ ಕನಿಷ್ಠ ಲಾಕ್‌ಡೌನ್‌ ನಿರ್ಬಂಧಗಳನ್ನು ಸಡಿಲಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಅಲ್ಲಿ ಹೊಸ ಪ್ರಕರಣಗಳು ಗಮನಾರ್ಹ ಸಂಖ್ಯೆಯಲ್ಲಿ ವರದಿಯಾಗುತ್ತಿವೆ. ಕೋವಿಡ್‌ -19 ಹರಡುವಿಕೆ ಮತ್ತು ಜಿಲ್ಲಾಡಳಿತ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಪರಿಶೀಲನೆ ನಡೆಸುತ್ತಿರುವಾಗ, ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ಲಾಕ್‌ ಡೌನ್‌ ಬಗ್ಗೆ ಜಿಲ್ಲಾ ಮಟ್ಟದ ವರದಿಯನ್ನು ಅನುಸರಿಸಲಿದ್ದಾರೆ. ಕಿತ್ತಳೆ ಮತ್ತು ಹಸಿರು ವಲಯಗಳ ಜಿಲ್ಲಾ ಅಧಿಕಾರಿಗಳಿಗೆ ತಮ್ಮ ಪ್ರದೇಶಗಳಲ್ಲಿ ಕೈಗಾರಿಕಾ ಮತ್ತು ವಾಣಿಜ್ಯ ಕಾರ್ಯಾಚರಣೆಗಳಿಗೆ ಮುಂದಾಗುವಂತೆ ನಿರ್ದೇಶಿಸಲಾಗಿದೆ. ಈ ಪ್ರದೇಶಗಳಲ್ಲಿ ಗರಿಷ್ಠ ಕೈಗಾರಿಕಾ ಘಟಕಗಳು ಕಾರ್ಯನಿರ್ವಹಿಸಲಿವೆ ಎಂದು ಸರ್ಕಾರ ನಿರೀಕ್ಷಿಸುತ್ತಿದೆ. ಏಕೆಂದರೆ ಇದು ಆರ್ಥಿಕತೆಯ ಪುನರುಜ್ಜೀವನಕ್ಕೆ ಸಹಾಯ ಮಾಡುತ್ತದೆ ಎಂದು ಮೂಲಗಳು ತಿಳಿಸಿವೆ.

ಟಾಪ್ ನ್ಯೂಸ್

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.