Udayavni Special

ಬಿಎಂಸಿಯಿಂದ “ಸೇವ್‌ ಲೈವ್ಸ್‌’ ಯೋಜನೆ


Team Udayavani, Jul 3, 2020, 5:40 PM IST

ಬಿಎಂಸಿಯಿಂದ “ಸೇವ್‌ ಲೈವ್ಸ್‌’ ಯೋಜನೆ

ಮುಂಬಯಿ, ಜು. 2: ಕೋವಿಡ್ ಸೋಂಕಿನ ಹಿನ್ನೆಲೆ ನಗರದಲ್ಲಿ ಹೆಚ್ಚುತ್ತಿರುವ ಸಾವಿನ ಪ್ರಕರಣಗಳನ್ನು ಕಡಿಮೆ ಮಾಡಲು ಮುಂಬಯಿ ಮನಪಾ “ಸೇವ್‌ ಲೈವ್ಸ್‌’ ಎಂಬ ಯೋಜನೆಯನ್ನು ರೂಪಿಸಿದೆ.

ಕೋವಿಡ್ ಹಿನ್ನೆಲೆ ಮುಂಬಯಿಯ ಸಾವಿನ ಪ್ರಮಾಣ ಜೂನ್‌ 30ರ ವೇಳೆಗೆ ಶೇ. 5.86ರಷ್ಟಿದೆ. ರಾಜ್ಯದ ಸರಾಸರಿ ಸಾವಿನ ಪ್ರಮಾಣ ಶೇ. 4.49ರಷ್ಟಿದ್ದು, ಇದು ದೇಶದ ಸರಾಸರಿ ಸಾವಿನ ಪ್ರಮಾಣ ಶೇ. 2.9ಕ್ಕಿಂತ ಅಧಿಕವಿದೆ ಎಂದು ಮಹಾರಾಷ್ಟ್ರ ಸರಕಾರದ ವೈದ್ಯಕೀಯ ಶಿಕ್ಷಣ ಮತ್ತು ಔಷಧ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಸೇವ್‌ ಲೈವ್ಸ್‌ ಕಾರ್ಯತಂತ್ರವು ತೀವ್ರ ಸೋಂಕಿತರ ಮೇಲೆ ಹೆಚ್ಚಿನ ಮೇಲ್ವಿಚಾರಣೆಯನ್ನು ಮಾಡುತ್ತದೆ. ಇದರಲ್ಲಿ ಘಟಕದ ಮುಖ್ಯಸ್ಥ ಮತ್ತು ಆಸ್ಪತ್ರೆಯ ಮುಖ್ಯಸ್ಥರ ವೀಡಿಯೋ ಕಣ್ಗಾವಲೂ ಸೇರಿದೆ. ಕೋವಿಡ್‌ -19 ಸಾವಿನ ಪ್ರಕರಣಗಳಲ್ಲಿ ಲೆಕ್ಕಪರಿಶೋಧನೆ ನಡೆಯಲಿರುವುದಲ್ಲದೆ ಕಾರಣಗಳನ್ನು ನಿರ್ಧರಿಸಲು ವೀಡಿಯೋ ತುಣುಕನ್ನು ವಿಧಿವಿಜ್ಞಾನವಾಗಿ ಪರಿಶೀಲಿಸುತ್ತದೆ ಎಂದು ಮೂಲಗಳು ತಿಳಿಸಿವೆ. ಹೆಚ್ಚಾಗಿ ಮಧ್ಯಾಹ್ನ 1ರಿಂದ ಸಂಜೆ 5ರ ವರೆಗೆ ಹಲವಾರು ಸಾವುಗಳು ಸಂಭವಿಸಿವೆ ಎಂದು ಬಿಎಂಸಿ ಗಮನಿಸಿದೆ. ತೀವ್ರ ಸೋಂಕಿತರಿಗೆ ಆಮ್ಲಜನಕದ ಬೆಂಬಲದ ಸಂಪರ್ಕವನ್ನು ಕಡಿತಗೊಳಿಸಿದಾಗ ಮತ್ತು ಶೌಚಾಲಯಕ್ಕೆ ಹೋಗಲು ಬಿಟ್ಟಾಗ ಕುಸಿದು ಬಿದ್ದು ಸಾವನ್ನಪ್ಪಿದ ಪ್ರಕರಣಗಳು ಹೆಚ್ಚಿವೆ ಎಂದು ತಿಳಿಸಿದೆ.

ಸೇವ್‌ ಲೈವ್ಸ್‌ ಕಾರ್ಯತಂತ್ರದ ಭಾಗವಾಗಿ, ಮುಂಬಯಿ ಮಹಾನಗರ ಪಾಲಿಕೆಯು ಪ್ರತಿ ಹಾಸಿಗೆಗೆ ಒಂದು ಬೆಡ್‌ಪಾನ್‌ ಮತ್ತು ಹತ್ತಿರದ ಪ್ರತಿ ನಾಲ್ಕು ಹಾಸಿಗೆಗಳಿಗೆ ಒಂದು ಕಮೋಡ್‌ ಅನ್ನು ಇಡಲು ನಿರ್ಧರಿಸಿದೆ. ರಾತ್ರಿಯ ಸಮಯದಲ್ಲಿ ಶೌಚಾಲಯವನ್ನು ಬಳಸಲು ಬಯಸುವ ರೋಗಿಗಳೊಂದಿಗೆ ಸಹಕರಿಸುವಂತೆ ಎಲ್ಲ ಆರೋಗ್ಯ ಸಿಬಂದಿಗೆ ಸೂಚನೆ ನೀಡಲಾಗಿದೆ. ಔಷಧಿಗಳು, ಡೋಸೇಜ್, ಸಮಯ, ಆಹಾರ, ಇತ್ಯಾದಿಗಳಿಂದ ಆರೋಗ್ಯ ಸಿಬಂದಿ ಪ್ರತಿ ರೋಗಿಗೆ ವೈಯಕ್ತಿಕವಾಗಿ ಚೆಕ್‌ ಬಾಕ್ಸ್ ಗಳ ಮೂಲಕ ಸರಿಯಾದ ಪ್ರೋಟೋಕಾಲ್‌ ಅನ್ನು ನಿರ್ವಹಿಸಬೇಕು. ಸಂಬಂಧಪಟ್ಟ ರೋಗಿಯ ಚಿಕಿತ್ಸೆಯನ್ನು ನವೀಕರಿಸಬೇಕು ಎಂದು ಬಿಎಂಸಿ ಆದೇಶಿಸಿದೆ.

ಏಪ್ರಿಲ್‌ ಮಧ್ಯದಲ್ಲಿ ಮಹಾರಾಷ್ಟ್ರ ಸರಕಾರವು 9 ವೈದ್ಯರ ಕಾರ್ಯಪಡೆ ಸ್ಥಾಪಿಸಿ ರಾಜ್ಯದಲ್ಲಿ ಹೆಚ್ಚಿನ ಮಾರಣಾಂತಿಕ ಕಾರಣ ಗಳನ್ನು ಪರೀಕ್ಷಿಸಲು ಮತ್ತು ಅದನ್ನು ಕಡಿಮೆ ಮಾಡಲು ಕ್ರಮಗಳನ್ನು ಸೂಚಿಸಿದೆ. ಆ ಸಮಯದಲ್ಲಿ ರಾಜ್ಯದಲ್ಲಿ ಸಾವಿನ ಪ್ರಮಾಣ ಶೇ. 6 ಅನ್ನು ದಾಟಿದೆ ಎನ್ನಲಾಗಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

School-Children-01

ಚಿಂತನೆ: ಹೊಸ ಶಿಕ್ಷಣ ನೀತಿ ಒಂದು ಐತಿಹಾಸಿಕ ಹೆಜ್ಜೆ

ಮೊಬೈಲ್‌ ಆ್ಯಪ್‌ ಬಳಸಿ ರೈತರಿಂದಲೇ ಬೆಳೆ ಸಮೀಕ್ಷೆ

ಮೊಬೈಲ್‌ ಆ್ಯಪ್‌ ಬಳಸಿ ರೈತರಿಂದಲೇ ಬೆಳೆ ಸಮೀಕ್ಷೆ

ಕನ್ನಡ ಚಿತ್ರಗಳಿಗೆ ಪ್ರತ್ಯೇಕ OTT: ಚಿಂತನೆ

ಕನ್ನಡ ಚಿತ್ರಗಳಿಗೆ ಪ್ರತ್ಯೇಕ OTT: ಚಿಂತನೆ

ಇನ್ನು ಸೈಕಲ್‌ ಜತೆ ಬಸ್‌ ಪ್ರಯಾಣ ಸಾಧ್ಯ! ; ಬೆಂಗಳೂರಿನಲ್ಲೊಂದು ವಿನೂತನ ಯೋಜನೆ

ಇನ್ನು ಸೈಕಲ್‌ ಜತೆ ಬಸ್‌ ಪ್ರಯಾಣ ಸಾಧ್ಯ! ; ಬೆಂಗಳೂರಿನಲ್ಲೊಂದು ವಿನೂತನ ಯೋಜನೆ

ಮಲೆನಾಡಿನಲ್ಲಿ ಮಳೆ ಶಾಂತ; ಕರಾವಳಿಯಲ್ಲಿ ಬಿರುಸು

ಮಲೆನಾಡಿನಲ್ಲಿ ಮಳೆ ಶಾಂತ; ಕರಾವಳಿಯಲ್ಲಿ ಬಿರುಸು

31,541 ಹೆಕ್ಟೇರ್‌ ಕೃಷಿ ಹಾನಿ: ಪ್ರಧಾನಿ ಮೋದಿಗೆ ಇಂದು ಮೊರೆ

31,541 ಹೆಕ್ಟೇರ್‌ ಕೃಷಿ ಹಾನಿ: ಪ್ರಧಾನಿ ಮೋದಿಗೆ ಇಂದು ಮೊರೆ

ದಾವಣಗೆರೆ: ಕೋವಿಡ್ ಸೋಂಕಿಗೆ ಒಂದೇ ದಿನ 9 ಬಲಿ

ದಾವಣಗೆರೆ: ಕೋವಿಡ್ ಸೋಂಕಿಗೆ ಒಂದೇ ದಿನ 9 ಬಲಿ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೆಚ್ಚಿನ ಪರೀಕ್ಷೆ: ಪಾಸಿಟಿವ್‌ ಪ್ರಕರಣಗಳ ಸಂಖ್ಯೆಯಲ್ಲಿ  ಭಾರೀ ಇಳಿಕೆ

ಹೆಚ್ಚಿನ ಪರೀಕ್ಷೆ: ಪಾಸಿಟಿವ್‌ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಇಳಿಕೆ

ಶ್ರಮಿಕ ವಿಶೇಷ ರೈಲಿನಿಂದ ರಾಜ್ಯಕ್ಕೆ 42 ಲಕ್ಷ ರೂ. ನಷ್ಟ

ಶ್ರಮಿಕ ವಿಶೇಷ ರೈಲಿನಿಂದ ರಾಜ್ಯಕ್ಕೆ 42 ಲಕ್ಷ ರೂ. ನಷ್ಟ

Mumbai-tdy-1

1.70 ಲಕ್ಷ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತ

ಯುಪಿಎಸ್‌ಸಿ ಪರೀಕ್ಷೆ: ಅಕ್ಕಲ್‌ಕೋಟೆಯ ಕನ್ನಡಿಗ 249ನೇ ಸ್ಥಾನ ಪಡೆದು ಉತ್ತೀರ್ಣ

ಯುಪಿಎಸ್‌ಸಿ ಪರೀಕ್ಷೆ: ಅಕ್ಕಲ್‌ಕೋಟೆಯ ಕನ್ನಡಿಗ 249ನೇ ಸ್ಥಾನ ಪಡೆದು ಉತ್ತೀರ್ಣ

ಪೊಲೀಸರ ನಂಬಿಕೆ ಇಲ್ಲದಿದ್ದರೆ ರಾಜ್ಯ ಬಿಡಲಿ;ಅಮೃತಾ ಫಡ್ನವೀಸ್‌ ವಿರುದ್ಧ ಅನಿಲ್‌ ಪರಬ್ ಕಿಡಿ

ಪೊಲೀಸರ ನಂಬಿಕೆ ಇಲ್ಲದಿದ್ದರೆ ರಾಜ್ಯ ಬಿಡಲಿ; ಅಮೃತಾ ಫಡ್ನವೀಸ್‌ ವಿರುದ್ಧ ಅನಿಲ್‌ ಪರಬ್ ಕಿಡಿ

MUST WATCH

udayavani youtube

ರಾಂಬೂಟಾನ್ ಬೆಳೆಯುವ ಸೂಕ್ತ ವಿಧಾನ | How To Grow Rambutan Fruit | FULL INFORMATION

udayavani youtube

ಟೇಬಲ್ ಟಾಪ್ ರನ್ ವೇ ಏಕೆ ಸವಾಲು?

udayavani youtube

ಜೇನುನೊಣಗಳ ಸಂತತಿ ಇಲ್ಲವಾದರೆ ಇಡೀ ಜೀವ ಸಂಕುಲವೇ ನಶಿಸಿಹೋಗುತ್ತದೆ | Udayavani

udayavani youtube

VP NAGARAದ 75 CENTS ಜಾಗದಲ್ಲಿ ಮಾದರಿ ಕೃಷಿ ತೋಟ| Udayavani

udayavani youtube

ಹೈನುಗಾರಿಕೆಯಿಂದ ಬದುಕು ಕಟ್ಟಿಕೊಂಡ ಕುಟುಂಬ | Interview with successful Dairy Farmerಹೊಸ ಸೇರ್ಪಡೆ

School-Children-01

ಚಿಂತನೆ: ಹೊಸ ಶಿಕ್ಷಣ ನೀತಿ ಒಂದು ಐತಿಹಾಸಿಕ ಹೆಜ್ಜೆ

ಮೊಬೈಲ್‌ ಆ್ಯಪ್‌ ಬಳಸಿ ರೈತರಿಂದಲೇ ಬೆಳೆ ಸಮೀಕ್ಷೆ

ಮೊಬೈಲ್‌ ಆ್ಯಪ್‌ ಬಳಸಿ ರೈತರಿಂದಲೇ ಬೆಳೆ ಸಮೀಕ್ಷೆ

ಕನ್ನಡ ಚಿತ್ರಗಳಿಗೆ ಪ್ರತ್ಯೇಕ OTT: ಚಿಂತನೆ

ಕನ್ನಡ ಚಿತ್ರಗಳಿಗೆ ಪ್ರತ್ಯೇಕ OTT: ಚಿಂತನೆ

ಇನ್ನು ಸೈಕಲ್‌ ಜತೆ ಬಸ್‌ ಪ್ರಯಾಣ ಸಾಧ್ಯ! ; ಬೆಂಗಳೂರಿನಲ್ಲೊಂದು ವಿನೂತನ ಯೋಜನೆ

ಇನ್ನು ಸೈಕಲ್‌ ಜತೆ ಬಸ್‌ ಪ್ರಯಾಣ ಸಾಧ್ಯ! ; ಬೆಂಗಳೂರಿನಲ್ಲೊಂದು ವಿನೂತನ ಯೋಜನೆ

Rajnath-Singh-01

ಆತ್ಮನಿರ್ಭರ ದೇಶ ರಕ್ಷಣೆ: 101 ಮಾದರಿಯ ರಕ್ಷಣ ಸಾಮಗ್ರಿ ಆಮದು ನಿಷೇಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.