ಎಸ್‌ಎಂ ಶೆಟ್ಟಿ ಶಿಕ್ಷಣ ಸಂಸ್ಥೆಯ ಮಕ್ಕಳಿಂದ ರಾಷ್ಟ್ರಪತಿ ಭೇಟಿ
Team Udayavani, Sep 9, 2018, 3:52 PM IST
ಮುಂಬಯಿ: ಬಂಟರ ಸಂಘ ಮುಂಬಯಿ ಇದರ ಎಸ್. ಎಂ. ಶೆಟ್ಟಿ ಇಂಟರ್‌ನ್ಯಾಶನಲ್ ಸ್ಕೂಲ್ ಮತ್ತು ಜ್ಯೂನಿಯರ್ ಕಾಲೇಜು ವಿದ್ಯಾರ್ಥಿಗಳಿಗೆ ಈ ಬಾರಿಯ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಷ್ಟ್ರಪತಿ ಭವನದಿಂದ ಆಮಂತ್ರಣ ಬಂದಿದ್ದು, ವಿದ್ಯಾರ್ಥಿಗಳು ಭಾರತದ ರಾಷ್ಟ್ರಪತಿ ಮಾನ್ಯ ರಾಮ್‌ನಾಥ ಕೋವಿಂದ್ ಅವರನ್ನು ಭೇಟಿ ಯಾಗಿ ರಕ್ಷಾಬಂಧನ ತೊಡಿಸಿದರು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ದೇಶದ 72 ಶಾಲೆಗಳಿಗೆ ಆಹ್ವಾನ ನೀಡಲಾಗಿದ್ದು, ಮುಂಬಯಿಯಿಂದ ಕೇವಲ ಬಂಟರ ಸಂಘದ ಎಸ್‌ಎಂ ಶೆಟ್ಟಿ ಶಾಲೆಗೆ ಈ ಸದವಕಾಶ ದೊರೆತಿದೆ. ಪೊವಾಯಿ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಸಿಎ ಶಂಕರ್ ಬಿ. ಶೆಟ್ಟಿ, ಪ್ರಾಂಶುಪಾಲೆ ಮಿಡ್ರೆಡ್ ಲೋಬೋ, ಜೂನಿಯರ್ ಕಾಲೇಜಿನ ವಿದ್ಯಾರ್ಥಿ ನಾಯಕಿಯರಾದ ಗಾಯತ್ರಿ ಓಂ
ಮೆನನ್, ಕ್ಯಾಂಬ್ರಿಡ್ಜ್ ಪ್ರೈಮರಿ ಗ್ರೇಡ್ ಐದರ ವಿದ್ಯಾರ್ಥಿನಿ ನಿಹಾರಿಕಾ, ಇಂಟರ್ ನ್ಯಾಶನಲ್ ಕ್ಯುರಿಕುಲಮ್ ವಿದ್ಯಾರ್ಥಿ ಕೈರಾ ಸಾವೆ°à ಅವರು ತಂಡದಲ್ಲಿದ್ದರು. ಆಡಳಿತ ಮಂಡಳಿ ವತಿಯಿಂದ ರಾಷ್ಟ್ರಪತಿ ಅವರನ್ನು ಅಭಿನಂದಿಸಲಾಯಿತು.