Udayavni Special

ವೀರ ತಾಯಂದಿರ ಧೈರ್ಯದಿಂದಾಗಿ ದೇಶ ಸುರಕ್ಷಿತ: ಕೋಶ್ಯಾರಿ

ಲೋಧಾ ಫೌಂಡೇಶನ್‌ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಹರ್ಷಲ್‌ ಕನ್ಸಾರ ಕಾರ್ಯಕ್ರಮ ನಡೆಸಿಕೊಟ್ಟರು.

Team Udayavani, Jul 28, 2021, 2:27 PM IST

Mumbai

ಮುಂಬಯಿ, ಜು. 27: ಹುತಾತ್ಮರ ಕುಟುಂಬ ಗಳು ತಮ್ಮ ಹೃದಯವನ್ನು ಗಟ್ಟಿಗೊಳಿಸುವುದು ಎಷ್ಟು ಕಷ್ಟ ಎಂದು ನಾವು ನೋಡಿದ್ದೇವೆ. ವೀರ ತಾಯಂದಿರ ಧೈರ್ಯದಿಂದಾಗಿ ದೇಶ ಸುರಕ್ಷಿತವಾಗಿದೆ ಎಂದು ರಾಜ್ಯಪಾಲ ಭಗತ್‌ ಸಿಂಗ್‌ ಕೋಶ್ಯಾರಿ ಹೇಳಿದರು.

ಕಾರ್ಗಿಲ್‌ ವಿಜಯ ದಿನಾಚರಣೆಯ 22ನೇ ವಾರ್ಷಿಕೋತ್ಸವದ ಸಂದರ್ಭ ಅವರು ಜು. 26ರಂದು ರಾಜಭವನದಲ್ಲಿ ಕಾರ್ಗಿಲ್‌ ಯೋಧರು ಮತ್ತು ಹುತಾತ್ಮರ ಕುಟುಂಬಗಳನ್ನು ಸಮ್ಮಾನಿಸಿದರು. ಈ ಸಂದರ್ಭ ಹುತಾತ್ಮ ಕ್ಯಾಪ್ಟನ್‌ ವಿನಾಯಕ ಗೋರ್‌ ಅವರ ವೀರ ತಾಯಿ ಅನುರಾಧಾ ಗೋರ್‌ ಬರೆದ ಇಂಪಾಸಿಬಲ್‌ ಟು ಪಾಸಿಬಲ್ ಪುಸ್ತಕವನ್ನು ಬಿಡುಗಡೆ ಮಾಡಿ, ಕಾರ್ಗಿಲ್‌ ಯುದ್ಧದ ಯೋಧರಿಗೆ ಗೌರವ ಸಲ್ಲಿಸಿ, ಭಾರತವು ಶಾಂತಿಯನ್ನು ಬಯಸಿದ್ದರೂ ದೇಶವು ಶತ್ರು ರಾಷ್ಟ್ರಗಳಿಂದ ಆವೃತವಾಗಿದೆ ಎಂಬ ಅಂಶವನ್ನು ಮರೆಯಲು ಸಾಧ್ಯವಿಲ್ಲ.

ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ದೇಶದ ದೂರದ ಗಡಿ ಪ್ರದೇಶಗಳಲ್ಲಿ ಉತ್ತಮ ರಸ್ತೆಗಳು ಮತ್ತು ಸುಸಜ್ಜಿತ ವಾಯುನೆಲೆಗಳನ್ನು ಸ್ಥಾಪಿಸಲಾಗಿದೆ. ತನ್ನ 22 ವರ್ಷದ ಸಹೋದರಿಯ ಪತಿ 1962ರ ಯುದ್ಧದಲ್ಲಿ ಹುತಾತ್ಮರಾದರು ಎಂದು ತಿಳಿಸಿದರು. ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಮಾತನಾಡಿ, ಡೋಕ್ಲಾಮಾ ಮತ್ತು ಗಾಲ್ವಾನ್‌ನಲ್ಲಿ ಚೀನ ಹೊಸ ಭಾರತದ ಬಲವನ್ನು ಕಂಡಿದೆ.

ಕಾರ್ಗಿಲ್‌ ಯುದ್ಧದಲ್ಲಿ ಭಾರತದ ಕಾರ್ಯತಂತ್ರ ಮತ್ತು ರಾಜತಾಂತ್ರಿಕತೆ ಗೆದ್ದಿದೆ. ಇಂಪಾಸಿಬಲ್‌ ಟು ಪಾಸಿಬಲ್ ಕಾರ್ಗಿಲ್‌ ಯುದ್ಧವನ್ನು ನೋಡುವ ಸಮಗ್ರ ಪುಸ್ತಕವಾಗಿದೆ ಎಂದು ಹೇಳಿದರು. ಹವಲ್ದಾರ್‌ ದಿಗೇಂದ್ರ ಸಿಂಗ್‌, ಹವಲ್ದಾರ್‌ ದೀಪ್‌ಚಂದ್‌, ಹವಾಲ್ದಾರ್‌ ಮಧುಸೂದನ್‌ ಸರ್ವೆ, ಹವಾಲ್ದಾರ್‌ ಪಾಂಡುರಂಗ್‌ ಅಂಬ್ರೆ ಮತ್ತು ಹವಾಲ್ದಾರ್‌ ದತ್ತ ಚವಾಣ, ಸ್ಕ್ವಾಡ್ರನ್‌ ನಾಯಕ ರಾಹುಲ್‌ ದುಬೆ, ಕ್ಯಾಪ್ಟನ್‌ ರೂಪೇಶ್‌ ಕೊಹ್ಲಿ, ಕ್ಯಾಪ್ಟನ್‌ ವಿದ್ಯಾ ರತ್ನಪಾರ್ಕಿ, ಸವಿತಾ ದೋಂಧೆ, ಸವಿತಾ ದೊಂಡೆ ಅವರನ್ನು ಗೌರವಿಸಲಾಯಿತು.

ಲೇಖಕಿ ಅನುರಾಧಾ ಗೋರ್‌ ಅವರು ಇಂಪಾಸಿಬಲ್‌ ಟು ಪಾಸಿಬಲ್… ಪುಸ್ತಕವನ್ನು ಬರೆಯುವ ಹಿಂದಿನ ಪ್ರೇರಣೆ ಮತ್ತು ಪಾತ್ರವನ್ನು ವಿವರಿಸಿದರು. ದಿನಕರ್‌ ಗಂಗಲ್‌ ಮತ್ತು ಗ್ರಂಥಾಲಿ ಪ್ರಕಾಶನ್‌ ಸಂಸ್ಥೆಯ ಸುದೇಶ್‌ ಹಿಂಗ್ಲಾಸ್ಪುರ್ಕರ್‌ ಅವರನ್ನು ರಾಜ್ಯಪಾಲರು ಸಮ್ಮಾನಿಸಿದರು. ಆರಂಭದಲ್ಲಿ, ಕಾರ್ಗಿಲ್‌ ಯುದ್ಧದ ವರ್ಣಚಿತ್ರಗಳ ಪ್ರದರ್ಶನವನ್ನು ರಾಜ್ಯಪಾಲರು ಉದ್ಘಾಟಿಸಿದರು.

ಶಾಸಕ ಮಂಗಲ್‌ ಪ್ರಭಾತ್‌ ಲೋಧಾ, ಲೋಧಾ ಫೌಂಡೇಶನ್‌ ಅಧ್ಯಕ್ಷ ಮಂಜು ಲೋಧಾ, ಅನುರಾಧಾ ಗೋರ್‌ ಮತ್ತು ಮುಂಬಯಿ ವಾರ್ಡ್‌ ಮುಖ್ಯಸ್ಥ ಏರ್‌ ವೈಸ್‌ ಮಾರ್ಷಲ್‌ ಎಸ್‌. ಆರ್‌. ವಾಯ್ಸ್ ಆಫ್‌ ಮುಂಬಯಿ ಮತ್ತು ಲೋಧಾ ಫೌಂಡೇಶನ್‌ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಹರ್ಷಲ್‌ ಕನ್ಸಾರ ಕಾರ್ಯಕ್ರಮ ನಡೆಸಿಕೊಟ್ಟರು.

ಟಾಪ್ ನ್ಯೂಸ್

ಐಸಿಐಸಿಐ ಹೋಮ್‍ ಫೈನಾನ್ಸ್ ನಿಂದ 600 ಉದ್ಯೋಗಿಗಳ ನೇಮಕಾತಿಗೆ ಆಹ್ವಾನ

ಐಸಿಐಸಿಐ ಹೋಮ್‍ ಫೈನಾನ್ಸ್ ನಿಂದ 600 ಉದ್ಯೋಗಿಗಳ ನೇಮಕಾತಿಗೆ ಆಹ್ವಾನ

ಉಳ್ಳಾಲ: ಕ್ರೈಸ್ತ ಧರ್ಮ ಪ್ರಚೋದಿಸುವ ಪತ್ರಗಳು ಪತ್ತೆ, ಮತಾಂತರ ಕುಮ್ಮಕ್ಕು ಆರೋಪ

ಉಳ್ಳಾಲ: ಕ್ರೈಸ್ತ ಧರ್ಮ ಪ್ರಚೋದಿಸುವ ಪತ್ರಗಳು ಪತ್ತೆ, ಮತಾಂತರ ಕುಮ್ಮಕ್ಕು ಆರೋಪ

ಬಾಂಬೆ ಷೇರುಪೇಟೆ ಇತಿಹಾಸದಲ್ಲೇ ಪ್ರಥಮ ಬಾರಿಗೆ 60,000 ಗಡಿ ದಾಟಿದ ಸೆನ್ಸೆಕ್ಸ್

ಬಾಂಬೆ ಷೇರುಪೇಟೆ ಇತಿಹಾಸದಲ್ಲೇ ಪ್ರಥಮ ಬಾರಿಗೆ 60,000 ಗಡಿ ದಾಟಿದ ಸೆನ್ಸೆಕ್ಸ್

23-dvg-22

ಶಾಲಾ ಶಿಕ್ಷಕಿಯ ಶಪಥ: ಅಂತೂ ರಾಂಪುರಕ್ಕೆ ಬಂತು ಸರ್ಕಾರಿ ಬಸ್‌!

ರೆಡ್‍ ಮಿ 10 ಪ್ರೈಮ್‍: ಬಜೆಟ್‍ ದರದಲ್ಲಿ ಉತ್ತಮ ಸ್ಪೆಸಿಫಿಕೇಷನ್‍

ರೆಡ್‍ ಮಿ 10 ಪ್ರೈಮ್‍: ಬಜೆಟ್‍ ದರದಲ್ಲಿ ಉತ್ತಮ ಸ್ಪೆಸಿಫಿಕೇಷನ್‍

vbgfxgdf

ನಿತ್ಯ ಸ್ನಾನ ಮಾಡದ ಹೆಂಡತಿಗೆ ತಲಾಖ್ ನೀಡಲು ಮುಂದಾದ ಪತಿ

ಆರ್ ಸಿಬಿ ಪಂದ್ಯಕ್ಕೂ ಮುನ್ನ ಧೋನಿ ಪಡೆಗೆ ಗಾಯದ ಬರೆ: ಪ್ರಮುಖ ಆಟಗಾರ ತಂಡದಿಂದ ಔಟ್?

ಆರ್ ಸಿಬಿ ವಿರುದ್ಧ ಪಂದ್ಯಕ್ಕೂ ಮುನ್ನ ಧೋನಿ ಪಡೆಗೆ ಗಾಯದ ಬರೆ: ಪ್ರಮುಖ ಆಟಗಾರ ತಂಡದಿಂದ ಔಟ್?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾವು ಮಾಡುವ ಧರ್ಮ ಕಾರ್ಯಗಳು ಸ್ಮರಣೀಯ: ಚಂದ್ರಹಾಸ್‌ ಕೆ. ಶೆಟ್ಟಿ

ನಾವು ಮಾಡುವ ಧರ್ಮ ಕಾರ್ಯಗಳು ಸ್ಮರಣೀಯ: ಚಂದ್ರಹಾಸ್‌ ಕೆ. ಶೆಟ್ಟಿ

ಲೋಕಕಲ್ಯಾಣಾರ್ಥ ಶತಚಂಡಿಕಾಯಾಗ ಆಯೋಜನೆ: ಪ್ರದೀಪ್‌ ಸಿ. ಶೆಟ್ಟಿ

ಲೋಕಕಲ್ಯಾಣಾರ್ಥ ಶತಚಂಡಿಕಾಯಾಗ ಆಯೋಜನೆ: ಪ್ರದೀಪ್‌ ಸಿ. ಶೆಟ್ಟಿ

ನಾಡಿನ ಸಂಸ್ಕೃತಿ-ಸಂಸ್ಕಾರಗಳನ್ನು ಯುವ ಪೀಳಿಗೆಗೆ ಪರಿಚಯಿಸಬೇಕು: ವಿನೋದಾ ಡಿ. ಶೆಟ್ಟಿ

ನಾಡಿನ ಸಂಸ್ಕೃತಿ-ಸಂಸ್ಕಾರಗಳನ್ನು ಯುವ ಪೀಳಿಗೆಗೆ ಪರಿಚಯಿಸಬೇಕು: ವಿನೋದಾ ಡಿ. ಶೆಟ್ಟಿ

ವಾಲ್ಕೇಶ್ವರ ಶ್ರೀ ಕವಳೆ ಮಠ: ವಾರ್ಷಿಕ ಗಣೇಶೋತ್ಸವ ಸಂಪನ್ನ

ವಾಲ್ಕೇಶ್ವರ ಶ್ರೀ ಕವಳೆ ಮಠ: ವಾರ್ಷಿಕ ಗಣೇಶೋತ್ಸವ ಸಂಪನ್ನ

ದೇವಿ ಅನುಗ್ರಹದಿಂದ ಸಭಾಭವನ ನಿರ್ಮಾಣ ಕಾರ್ಯ ಪ್ರಾರಂಭವಾಗಲಿ: ಅಣ್ಣಿ ಸಿ. ಶೆಟ್ಟಿ

ದೇವಿ ಅನುಗ್ರಹದಿಂದ ಸಭಾಭವನ ನಿರ್ಮಾಣ ಕಾರ್ಯ ಪ್ರಾರಂಭವಾಗಲಿ: ಅಣ್ಣಿ ಸಿ. ಶೆಟ್ಟಿ

MUST WATCH

udayavani youtube

ರಾತ್ರೋರಾತ್ರಿ ಕೋಟ್ಯಧಿಪತಿಯಾದ ಆಟೋ ಚಾಲಕ

udayavani youtube

ಕುಣಬಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ವಿಧಾನ ಪರಿಷತ್ ಸದಸ್ಯ ಘೋಟ್ನೇಕರ್ ಆಗ್ರಹ

udayavani youtube

ಕೇಂದ್ರ ಹಾಗೂ ರಾಜ್ಯ ಸರಕಾರದ ಜನವಿರೋಧಿ ನೀತಿ ಖಂಡಿಸಿ ಯುವ ಕಾಂಗ್ರೆಸ್ ಪ್ರತಿಭಟನೆ

udayavani youtube

ಗದ್ದಲದ ಗೂಡಾದ ಉದ್ಯಾವರ ಗ್ರಾಮ ಸಭೆ

udayavani youtube

6 ನದಿಗಳನ್ನು ದಾಟಿ ಆಶ್ರಮಕ್ಕೆ ತಲುಪುತ್ತಿದ್ದೆ

ಹೊಸ ಸೇರ್ಪಡೆ

23-dvg-16

27ರಂದು ಕರ್ನಾಟಕ ಬಂದ್‌ಗೆ ನಿರ್ಧಾರ

ghfghtfyt

ದಸರಾ ಬಳಿಕ “ಸಿಹಿ’ ಸುದ್ದಿ: ಸೋಮಶೇಖರ್‌

23-dvg-17-copy

30 ರಂದು ಡಾ| ಮಹಾಂತ ಸ್ವಾಮೀಜಿ ಜಯಂತ್ಯುತ್ಸವ 

ಐಸಿಐಸಿಐ ಹೋಮ್‍ ಫೈನಾನ್ಸ್ ನಿಂದ 600 ಉದ್ಯೋಗಿಗಳ ನೇಮಕಾತಿಗೆ ಆಹ್ವಾನ

ಐಸಿಐಸಿಐ ಹೋಮ್‍ ಫೈನಾನ್ಸ್ ನಿಂದ 600 ಉದ್ಯೋಗಿಗಳ ನೇಮಕಾತಿಗೆ ಆಹ್ವಾನ

ಮೈಷುಗರ್‌: ಸ್ಪಷ್ಟ ನಿರ್ಧಾರ ಪ್ರಕಟಿಸದ ಸರ್ಕಾರ

ಮೈಷುಗರ್‌: ಸ್ಪಷ್ಟ ನಿರ್ಧಾರ ಪ್ರಕಟಿಸದ ಸರ್ಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.