ಸಾಂತಾಕ್ರೂಜ್‌ ಬಿಲ್ಲವ ಭವನದಲ್ಲಿ ತುಳು ಚಲನಚಿತ್ರ ಪ್ರದರ್ಶನ

Team Udayavani, Nov 15, 2018, 5:03 PM IST

1311mum06.jpg

ಮುಂಬಯಿ: ಕಲಾ ಜಗತ್ತು ಡಾ| ವಿಜಯ ಕುಮಾರ್‌ ಶೆಟ್ಟಿ ಅವರ ಪರಿಕಲ್ಪನೆಯಲ್ಲಿ ಪತ್ತನಾಜೆ ಸಿನೆಮಾವು ಉತ್ತಮವಾಗಿ ಮೂಡಿ ಬಂದಿದೆ. ಈ ಚಿತ್ರವು ತುಳು ಚಿತ್ರಪ್ರೇಮಿಗಳ ಮನಮುಟ್ಟುವಲ್ಲಿ ಯಶಸ್ವಿಯಾಗಿದೆ. ಮುಂಬಯಿ ಮಹಾ ನಗರದಲ್ಲಿ ಪತ್ತನಾಜೆ ಚಲನ ಚಿತ್ರ 200ಕ್ಕೂ ಮಿಕ್ಕಿದ ಪ್ರದ ರ್ಶನ ದಾಖಲೆಯನ್ನು ಮಾಡಲಿ.  ವಿಜಯ ಕುಮಾರ್‌ಶೆಟ್ಟಿ ಇವರಿಂದ ಇನ್ನಷ್ಟು ತುಳು ಸಿನೆಮಾಗಳು ಮೂಡಿ ಬಂದು ನಾಡಿನ ಕಲೆ, ಸಂಸ್ಕೃತಿ ಶ್ರೀಮಂತಗೊಳ್ಳಲಿ ಎಂದು ಬಿಲ್ಲವರ ಅಸೋಸಿಯೇಶನ್‌ ಅಧ್ಯಕ್ಷ ಚಂದ್ರಶೇಖರ ಎಸ್‌. ಪೂಜಾರಿ ಅಭಿಪ್ರಾಯಿಸಿದರು.

ನ. 10ರಂದು ಸಾಂತಾಕ್ರೂಜ್‌ ಪೂರ್ವದ ಬಿಲ್ಲವ ಭವನದಲ್ಲಿ ಪತ್ತನಾಜೆ ಅಭಿಮಾನಿ ಬಳಗದ ವತಿ ಯಿಂದ ನಡೆದ ಪತ್ತನಾಜೆ ಚಲನಚಿತ್ರ ಪ್ರದರ್ಶನ ಮತ್ತು ಸಾಧಕರಿಗೆ ಸಮ್ಮಾನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಅವರು, ಪತ್ತನಾಜೆ ಚಲನಚಿತ್ರದಲ್ಲಿ ನಾಡಿನ ಕಲೆ, ಸಂಸ್ಕೃತಿ ಮೇಳೈಸಿದೆ. ಚಿತ್ರವು ವಿಭಿನ್ನ ರೀತಿಯಲ್ಲಿ ಮೂಡಿ ಬಂದಿದ್ದು, ಮತ್ತೆ ಮತ್ತೆ ನೋಡುವಂತೆ ಪ್ರೇರೇಪಿಸುತ್ತದೆ ಎಂದರು.

ಪತ್ತನಾಜೆ ಸಿನೇಮಾದ ನಿರ್ಮಾ ಪಕ, ನಿರ್ದೇಶಕ ವಿಜಯ ಕುಮಾರ್‌ ಶೆಟ್ಟಿ ಮಾತನಾಡಿ, ಕಲಾಸೇವೆಯ ಮುಖಾಂತರ ಕಲಾಜಗತ್ತು ಜನ ಪ್ರಿಯತೆ ಪಡೆದ ಸಂಸ್ಥೆ ಈ ಕಲಾಜಗತ್ತು ಸಂಸ್ಥೆಗೆ ಅವರದ್ದೇ ಆದ ಪ್ರೇಕ್ಷಕ ವರ್ಗವಿದೆ. ಸ್ವತಃ ಚಿತ್ರ ನಿರ್ಮಾಣ ಮಾಡಬೇಕು ಎಂಬ ಆಶಯ ನನ್ನ ದಾಗಿತ್ತು. ಇದಕ್ಕೆ ಅಭಿಮಾನಿಗಳು ನನ್ನನ್ನು ಪ್ರೇರೇಪಿಸಿದರು. ಪತ್ತನಾಜೆ ಸಿನೆಮಾಕ್ಕೆ ತವರೂರಿಗಿಂತಲೂ ಹೆಚ್ಚು ಮುಂಬಯಿ ಪ್ರೇಕ್ಷಕರು ಪ್ರೋತ್ಸಾಹ ನೀಡಿರುವುದು ಸಂತೋಷದ ಸಂಗತಿಯಾಗಿದೆ. ಮುಂಬಯಿ ಯಲ್ಲಿ ತುಳು ಸಿನೆಮಾ ಹತ್ತು ಪ್ರದರ್ಶನ ಕಾಣುವುದು ಬಹಳ ಕಷ್ಟದ ಕಾರ್ಯ. ಆದರೆ ಪತ್ತನಾಜೆ 66 ಪ್ರದರ್ಶನಗಳನ್ನು ಮುಂಬಯಿ ಮಹಾನಗರದಲ್ಲಿ ಕಂಡಿದೆ ಎನ್ನಲು ಸಂತೋಷವಾಗು ತ್ತಿದೆ. ಇದಕ್ಕೆ ಮುಂಬಯಿ ಅಭಿಮಾನಿ ಗಳ, ಪ್ರೇಕ್ಷಕರ ಬೆಂಬಲವೇ ಕಾರಣ ವಾಗಿದೆ. ಪತ್ತನಾಜೆ ಸಿನೆಮಾ ಮುಂಬಯಿಯಲ್ಲಿ 100 ಪ್ರದರ್ಶನ ನೀಡಿ ಇತಿಹಾಸ ರಚಿಸುವುದು ನನ್ನ ಆಶಯವಾಗಿದೆ. ಈಗಾಗಲೇ ಹೆಚ್ಚಿನ ಪ್ರದರ್ಶನಗಳು ಹೌಸ್‌ಫುಲ್‌ ಪ್ರದರ್ಶನ ಕಂಡಿದೆ. ಇದು ಈ ಸಿನೆಮಾದ ಧನಾತ್ಮಕ ಅಂಶವಾಗಿದೆ. ಮುಂದೆಯೂ ನಿಮ್ಮೆಲ್ಲರ ಸಹಕಾರ ಸದಾ ಇರಲಿ ಎಂದು ನುಡಿದು ಕೃತಜ್ಞತೆ ಸಲ್ಲಿಸಿದರು.

ವಿವಿಧ ಕ್ಷೇತ್ರಗಳ ಸಾಧಕ ಕಲಾವಿದರಾದ ಬಿಲ್ಲವರ ಅಸೋಸಿಯೇಶನ್‌ ಕಲ್ವಾ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ನಾರಾಯಣ ಎಲ್‌. ಸುವರ್ಣ, ಉಪ ಕಾರ್ಯಾಧ್ಯಕ್ಷ ಹರೀಶ್‌ ಡಿ. ಸಾಲ್ಯಾನ್‌, ರಂಗನಟ ಜಿ. ಕೆ. ಕೆಂಚನಕೆರೆ, ಲತೇಶ್‌ ಎಂ. ಪೂಜಾರಿ, ಕೃತೇಶ್‌ ಅಮೀನ್‌, ಕೃತಿಕಾ ಅಮೀನ್‌, ಐಶ್ವರ್ಯಾ ಸನಿಲ್‌, ಸುಚಿತ್ರಾ ವಿ. ಅಂಚನ್‌, ಕೃಷಾ ಎಂ. ಪೂಜಾರಿ, ಬ್ರಿಜೇಶ್‌, ಲೋಕೇಶ್‌ ಕರ್ಕೇರ, ಸೋನಿಯಾ ಸುವರ್ಣ, ಕ್ಷಿತಿಜ್‌ ಪೂಜಾರಿ, ಉದಯ್‌ ಪೂಜಾರಿ, ನ್ಯಾಯವಾದಿ ಲವಿಕಾ ಪೂಜಾರಿ, ಸದಾನಂದ ಅವರಿಗೆ ತೌಳವ ಸಿರಿ ಪ್ರಶಸ್ತಿ ಪ್ರದಾನಿಸಲಾಯಿತು.

ಬಿಲ್ಲವರ ಅಸೋಸಿಯೇಶನ್‌ ಉಪಾಧ್ಯಕ್ಷ ದಯಾನಂದ ಪೂಜಾರಿ, ಜತೆ ಕೋಶಾಧಿಕಾರಿ ಸದಾಶಿವ ಎ. ಕರ್ಕೇರ, ಭಾರತ್‌ ಬ್ಯಾಂಕಿನ ನಿರ್ದೇಶಕರುಗಳಾದ ಪ್ರೇಮ ನಾಥ್‌ ಪಿ. ಕೋಟ್ಯಾನ್‌, ರಾಜಾ ವಿ. ಸಾಲ್ಯಾನ್‌, ಕವಿ, ಸಾಹಿತಿ ಶಿಮಂ ತೂರು ಚಂದ್ರಹಾಸ ಸುವರ್ಣ, ಬಿಲ್ಲವರ ಅಸೋಸಿಯೇಶನ್‌ ಸದಸ್ಯ ಮೋಹನ್‌ದಾಸ್‌ ಎಂ. ಪೂಜಾರಿ, ಅಕ್ಷಯ ಮಾಸಿಕದ ಮುಖ್ಯ ಸಂಪಾದಕ ಡಾ| ಈಶ್ವರ ಅಲೆವೂರು, ಸಂಪಾದಕ ಹರೀಶ್‌ ಹೆಜ್ಮಾಡಿ, ಎಸ್‌. ಎಸ್‌. ಪೂಜಾರಿ, ಬಿಲ್ಲವರ ಅಸೋ ಸಿಯೇಶನ್‌ ಮಲಾಡ್‌ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಸಂತೋಷ್‌ ಪೂಜಾರಿ, ಕಲಾಜಗತ್ತು ಕ್ರಿಯೇಶನ್‌ ಸದಸ್ಯರಾದ ಬಿ. ಎಸ್‌. ಪೈ, ಪೃಥ್ವಿರಾಜ್‌ ಮುಂಡ್ಕೂರು, ಕೃಷ್ಣರಾಜ್‌ ಸುವರ್ಣ, ಸದಾನಂದ ಅಮೀನ್‌ ಉಪಸ್ಥಿತರಿದ್ದರು. ಸತೀಶ್‌ ಎರ್ಮಾಳ್‌ ಕಾರ್ಯ ಕ್ರಮ ನಿರ್ವಹಿಸಿದರು.

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.