ವಸಾಯಿ ತಾಲೂಕು ಮೊಗವೀರ ಸಂಘದ 8ನೇ ವಾರ್ಷಿಕ ಮಹಾಸಭೆ

Team Udayavani, Sep 18, 2018, 4:18 PM IST

1709mum02.jpg

ಮುಂಬಯಿ: ಸಂಘದ ಹಲವಾರು ಯೋಜನೆಗಳನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ನಾವೆಲ್ಲ ಒಗ್ಗಟ್ಟಾಗಿ ಕೆಲಸ ಮಾಡುವ ಮೂಲಕ ಸಮಾಜ ಬಾಂಧವರ ಧ್ಯೇಯೋದ್ದೇಶಕ್ಕಾಗಿ ಸ್ಥಾಪಿಸಲ್ಪಟ್ಟ ಸಂಸ್ಥೆಗೆ ಸಮೂಹ ಶಕ್ತಿಯ ಶ್ರಮದ ಆವಶ್ಯಕತೆಯಿದೆ. ಸಂಸ್ಥೆಯಲ್ಲಿ ಕೆಲವೊಂದು ವೈಯಕ್ತಿಕ ಸಮಸ್ಯೆಗಳು ಎದುರಾದರೂ ನಮ್ಮ ಕಾರ್ಯ ಚಟುವಟಿಕೆಗಳು ನಿರಂತರ ವಾಗಿರಬೇಕು. ಸಂಸ್ಥೆ ಸ್ಥಾಪಿಸುವಾಗ ಪ್ರಾರಂಭದ ಹುಮ್ಮಸ್ಸು ಈಗಲೂ ಮುಂದುವರಿದರೆ ಸಂಘದ ಪ್ರಗತಿ ಮತ್ತಷ್ಟು ಸಾಧ್ಯವಾಗುತ್ತದೆ ಎಂದು ವಸಾಯಿ ತಾಲೂಕು ಮೊಗವೀರ ಸಂಘದ ಅಧ್ಯಕ್ಷ ವಿನೋದ್‌ ಕುಂದರ್‌ ನುಡಿದರು.

ಸೆ. 16 ರಂದು ವಸಾಯಿ ತಾಲೂಕು ಮೊಗವೀರ ಸಂಘದ ಕಚೇರಿಯ ಸಭಾಗೃಹದಲ್ಲಿ ಜರಗಿದ ವಸಾಯಿ ತಾಲೂಕು ಮೊಗವೀರ ಸಂಘದ 8ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಧು-ವರ ಅನ್ವೇಷಣೆ, ಅಸಹಾಯಕರಿಗೆ ವೈದ್ಯಕೀಯ ಚಿಕಿತ್ಸೆ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಆರ್ಥಿಕ ಧನ ಸಹಾಯ ನೀಡುವ ಮೂಲಕ ಸಂಸ್ಥೆಯ  ಧ್ಯೇಯೋದ್ದೇಶಗಳನ್ನು ಪೂರೈಸಬೇಕು. ಇತರ ಜಾತೀಯ ಸಂಸ್ಥೆಗಳಿಗೆ ಹೋಲಿಸಿದರೆ ಒಗ್ಗಟ್ಟಿಗೆ ಪ್ರಸಿದ್ಧವಾದ ನಾವು ಇಂದು ಹಿನ್ನಡೆ ಯನ್ನು ಅನುಸರಿಸುತ್ತಿರುವುದು ವಿಷಾದನೀಯ ಎಂದರು.

ಪ್ರಾರ್ಥನೆಯೊಂದಿಗೆ ಮಹಾ ಸಭೆಯು ಪ್ರಾರಂಭಗೊಂಡಿತು. ಗೌರವ ಪ್ರಧಾನ ಕಾರ್ಯದರ್ಶಿ 2017-2018ನೇ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿದರು. ಆಂತ

ರಿಕ ಲೆಕ್ಕ ಪರಿಶೋಧಕ ನಿತಿನ್‌ ಬಂಗೇರ ವಾರ್ಷಿಕ ಲೆಕ್ಕಪತ್ರವನ್ನು ಸಭೆಯ ಮುಂದಿಟ್ಟರು.

ಸ್ಥಾಪಕಾಧ್ಯಕ್ಷ ಚಂದ್ರಶೇಖರ್‌ ಪುತ್ರನ್‌ ಇವರು ಮಾತನಾಡಿ, ನೈಗಾಂವ್‌-ವಿರಾರ್‌ ಮಧ್ಯೆ ಇರುವ ಸಮಸ್ತ ಮೊಗವೀರ ಬಾಂಧವರನ್ನು ಒಗ್ಗೂಡಿಸುವ ಧ್ಯೇಯದೊಂದಿಗೆ ಪ್ರಾರಂಭಗೊಂಡ ಈ ಸಂಸ್ಥೆಯು ಸಮಾಜದ ಸರ್ವತೋಮುಖ ಬೆಳವಣಿಗೆಗೆ, ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಸ್ಥಾಪನೆಯ ಸಂದ ರ್ಭದಲ್ಲಿ ಗೌರವಾಧ್ಯಕ್ಷ ರಾಘು ಸುವರ್ಣ ಅವರು ನೀಡಿದ ಸಹಕಾರವನ್ನು ಮರೆಯುವಂತಿಲ್ಲ. ಜತೆಗೆ  ಎಲ್ಲರ ಸಹಕಾರದಲ್ಲಿ ಸ್ಥಾಪಿಸಲ್ಪಟ್ಟ ಈ ಸಂಸ್ಥೆಯ ಉದ್ದೇಶ ಸಂಸ್ಕೃತಿ, ಸಾಮಾಜಿಕ, ಶೈಕ್ಷಣಿಕ, ವೈದ್ಯಕೀಯವಾಗಿ ಸಮಾಜದಲ್ಲಿರುವ  ಸಮಸ್ಯೆಯನ್ನು ಬಗೆಹರಿಸುವುದು ನಮ್ಮದಾಗಿದೆ ಎಂದರು.

ಸದಸ್ಯ ಮಾಧವ ಸುವರ್ಣ ಅವರು ಮಾತನಾಡಿ, ಸಂಘ- ಸಂಸ್ಥೆಗಳ ಸ್ಥಾಪನೆಯಲ್ಲಿ ನಾವು ಮುಂಚೂ ಣಿಯಲ್ಲಿದ್ದರೂ ಪ್ರಸ್ತುತ ನಾವು ಸಾಂಘಿಕವಾಗಿ ಹಿನ್ನಡೆಯುತ್ತಿದ್ದೇವೆ. ಈ ರೀತಿಯಾದಲ್ಲಿ ನಾವು ನಮ್ಮ ಸಂಘಟನೆಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವಲ್ಲಿ ವಿಫಲರಾಗುತ್ತೇವೆ. ಈ ನಿಟ್ಟಿನಲ್ಲಿ ನಾವು ಈಗಲೇ ಕಾರ್ಯಪ್ರವೃತªರಾಗಬೇಕು ಎಂದರು.

ವಿದ್ಯಾರ್ಥಿ ಗಳ ಶೈಕ್ಷಣಿಕ, ಕ್ರೀಡೆಯಲ್ಲಿ ನಾವು ಈಗಾಗಲೇ ಪ್ರೋತ್ಸಾಹ ನೀಡುವಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ನುಡಿದರು.

ಇನ್ನೋರ್ವ ಸದಸ್ಯ ನ್ಯಾಯವಾದಿ ಸಿ. ಎಸ್‌. ಕರ್ಕೇರ ಅವರು ಮಾತ ನಾಡಿ, 50 ವರ್ಷಗಳ ಮೊಗವೀರ ಬಂಧುತ್ವ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿದಾಗ ನನಗೆ ನಮ್ಮಲ್ಲಿ ಒಗ್ಗಟ್ಟು, ಸಹಕಾರ, ಪ್ರಗತಿಯ ಧ್ಯೇಯ ಮುಖ್ಯವಾದುದು ಎಣಿಸಿದೆ. ಈ ಉದ್ದೇಶದಿಂದಲೇ ವಸಾಯಿ ತಾಲೂಕು ಮೊಗವೀರ ಸಂಘ ಸ್ಥಾಪನೆಗೊಂಡಿದ್ದು, ಈ ಸಂಸ್ಥೆಯ ಮೂಲಕ ಮತ್ತೂಮ್ಮೆ ನಾವು ಒಗ್ಗಟ್ಟಿಗೆ ಪ್ರತಿಫಲ ತೋರಿಸುವ ಅಗತ್ಯವಿದೆ ಎಂದರು.

ಯಶೋಧರ ಕೆ. ಕೋಟ್ಯಾನ್‌, ಪ್ರದೀಪ್‌ ಜೆ. ಪುತ್ರನ್‌, ಬಸಪ್ಪ ಕರ್ಕೇರ, ಜಗನ್ನಾಥ್‌ ಕಾಂಚನ್‌, ಭೋಜ ಕೋಟ್ಯಾನ್‌, ಮೋಹಿನಿ ಮಲ್ಪೆ ಅವರು ಮುಂದಿನ ದಶ ಮಾನೋತ್ಸವದ ಸಂದರ್ಭದಲ್ಲಿ ಅಣಿಯಾಗಬೇಕಾದ ಕಾರ್ಯಕ್ರಮಗಳ ಬಗ್ಗೆ ಸಲಹೆ ನೀಡಿದರು. 
ನೂತನ ವಿಶ್ವಸ್ತರಾಗಿ ಪ್ರದೀಪ್‌ ಜೆ. ಪುತ್ರನ್‌ ಹಾಗೂ ತಿಲಕ್‌ ಜೆ. ಕೋಟ್ಯಾನ್‌ ಅವರನ್ನು ಅವಿರೋಧ ವಾಗಿ ನೇಮಿಸಲಾಯಿತು. ಚಂದಪ್ಪ ಎಸ್‌. ಕರ್ಕೇರ, ವಾಮನ್‌ ಎಸ್‌. ಕೋಟ್ಯಾನ್‌ ಅವರು ವಿಶ್ವಸ್ತರಾಗಿ ಮುಂದುವರಿಯಲಿದ್ದಾರೆ ಎಂದು ಘೋಷಿಸಲಾಯಿತು.

ಮಹಾಸಭೆಯ ಕೊನೆಯಲ್ಲಿ ಕಾರ್ಯಕ್ರಮ ವಿಭಾಗದ ಕಾರ್ಯಾಧ್ಯಕ್ಷ ಸುಧೀರ್‌ ಸಾಲ್ಯಾನ್‌ ವಂದಿಸಿದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಇಂದಿರಾ ಪುತ್ರನ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದಿ| ರತ್ನಾ ಕರ್ಕೇರ ಅವರ ಪುತ್ರಿ ಸರಸ್ವತಿ ಅವರಿಗೆ ಇದೇ ಸಂದರ್ಭದಲ್ಲಿ ಪದಾಧಿಕಾರಿಗಳು ಆರ್ಥಿಕ ನೆರವು ವಿತರಿಸಿದರು. 

ಪದಾಧಿಕಾರಿಗಳು, ಸದಸ್ಯರು, ಮಹಿಳಾ ವಿಭಾಗ, ಯುವ ವಿಭಾಗ ದವರು, ಸಮಾಜ ಬಾಂಧವರು ಉಪಸ್ಥಿತರಿದ್ದರು.     
ಚಿತ್ರ-ವರದಿ: ರಮೇಶ್‌ ಉದ್ಯಾವರ

ಟಾಪ್ ನ್ಯೂಸ್

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.