70 ಮಂದಿ ಸಾವಿಗೆ ಕಾರಣವಾದ 10 ಮಂದಿಗೆ ಮರಣದಂಡನೆ
Team Udayavani, Feb 22, 2017, 12:12 PM IST
ಕೈರೋ: 2012 ಫೆಬ್ರವರಿಯಲ್ಲಿ ಈಜಿಪ್ಟ್ ನಲ್ಲಿ ನಡೆದ ಫುಟ್ಬಾಲ್ ದುರಂತಕ್ಕೆ ಸಂಬಂಧಪಟ್ಟಂತೆ ಈಜಿಪ್ಟ್ ಸರ್ವೋಚ್ಚ ನ್ಯಾಯಾಲಯ ಐತಿಹಾಸಿಕ ತೀರ್ಪು ಪ್ರಕಟಿಸಿದೆ.
ಘಟನೆಗೆ ಕಾರಣರಾದ 10 ಮಂದಿಗೆ ಕೆಳ ನ್ಯಾಯಾಲಯ ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು ಎತ್ತಿ ಹಿಡಿದಿರುವ ಸರ್ವೋಚ್ಚ ನ್ಯಾಯಪೀಠ ತೀರ್ಪಿನಲ್ಲಿ ಯಾವ ತಪ್ಪೂ ಇಲ್ಲ ಎಂದಿದೆ. ಇದೇ ತೀರ್ಪಿನಲ್ಲಿ 10 ಮಂದಿಗೆ 15, 14 ಮಂದಿಗೆ 10, 15 ಮಂದಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿದೆ.
2012ರಲ್ಲಿ ಕೈರೋದ ಪೋರ್ಟ್ ಸಯ್ಯದ್ ಮೈದಾನದಲ್ಲಿ ಅಲ್ ಮಸ್ರಿ ಮತ್ತು ಅಲ್ ಅಹ್ಲಿ ತಂಡಗಳ ನಡುವೆ ಪಂದ್ಯ ನಡೆದಿತ್ತು. ಈ ವೇಳೆ ಮೈದಾನಕ್ಕೆ ನುಗ್ಗಿದ ಅಲ್ ಮಸ್ರಿ ತಂಡದ ಬೆಂಬಲಿಗರು ವ್ಯಾಪಕ ದಾಂಧಲೆ ನಡೆಸಿದರು.
ಇದು ಮೈದಾನದಲ್ಲಿ ತುಂಬಿಕೊಂಡಿದ್ದ ಪ್ರೇಕ್ಷಕರಲ್ಲಿ ಭೀತಿ ಹುಟ್ಟಿಸಿ ನೂಕುನುಗ್ಗಲು ಉಂಟಾಯಿತು. ಕಾಲು¤ಳಿತಕ್ಕೆ ಸಿಲುಕಿ ಕೆಲವರು ಮೃತಪಟ್ಟರು. ಕೆಲವರನ್ನು ಮೈದಾನದಿಂದ ಹೊರಗೆ ಎತ್ತಿ ಎಸೆಯಲಾಯಿತು. ಇದರ ಪರಿಣಾಮ 70 ಮಂದಿ ಮೃತಪಟ್ಟಿದ್ದರು. ಈಜಿಪ್ಟ್ನಲ್ಲಿ ಈ ರೀತಿಯ ಘಟನೆಗಳು ಮಾಮೂಲು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ