ಭಾರತಕ್ಕೆ 5 ಚಿನ್ನದ ಪದಕ
Team Udayavani, Nov 27, 2017, 11:48 AM IST
ಗುವಾಹಟಿ: ಎಐಬಿಎ ವಿಶ್ವ ಮಹಿಳಾ ಯೂತ್ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಭಾನುವಾರ ಭಾರತದ ಸ್ಪರ್ಧಿಗಳು ಪ್ರಾಬಲ್ಯ ಮೆರೆದಿದ್ದಾರೆ. 5 ಚಿನ್ನದ ಪದಕ ಗೆದ್ದು ಕೂಟದ ಇತಿಹಾಸದಲ್ಲಿಯೇ ಅಮೋಘ ಸಾಧನೆ ಮಾಡಿದ್ದಾರೆ.
48 ಕೆ.ಜಿ ವಿಭಾಗದಲ್ಲಿ ನೀತು, 51 ಕೆ.ಜಿ ವಿಭಾಗದಲ್ಲಿ ಜ್ಯೋತಿ ಗುಲಿಯಾ, 54 ಕೆ.ಜಿ ವಿಭಾಗದಲ್ಲಿ ಸಾಕ್ಷಿ ಚೌಧರಿ, 57 ಕೆ.ಜಿ ವಿಭಾಗದಲ್ಲಿ ಶಶಿ ಚೋಪ್ರಾ, 64 ಕೆ.ಜಿ. ವಿಭಾಗದಲ್ಲಿ ಅಂಕುಷಿತ ಬೋರೋ ಚಿನ್ನದ ಪದಕ ಗೆದ್ದಿದ್ದಾರೆ. ಉಳಿದಂತೆ ಭಾರತದ ನೆಹಾ ಯಾದವ್ ಪ್ಲಸ್ 81 ಕೆ.ಜಿ ವಿಭಾಗದಲ್ಲಿ ಮತ್ತು ಅನುಪಮಾ 81 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಈ ಕೂಟದ ಇತಿಹಾಸದಲ್ಲಿಯೇ ಭಾರತದ ಶ್ರೇಷ್ಠ ಪ್ರದರ್ಶನ ಇದಾಗಿದೆ. 2011ರಲ್ಲಿ ನಡೆದ ಈ ಹಿಂದಿನ ಕೂಟದಲ್ಲಿ ಭಾರತ ಒಂದು ಕಂಚಿನ ಪದಕವನ್ನು ಮಾತ್ರ ಗೆದ್ದಿತ್ತು. 48 ಕೆ.ಜಿ ವಿಭಾಗದಲ್ಲಿ ನೀತು ಕಜಕೀಸ್ಥಾನ್ನ ಜಾಜಿರ್ ಉರಕ್ಬಾಯೆವ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದರು.
ಫೈನಲ್ ಸುತ್ತಿನ ಈ ಹೋರಾಟದಲ್ಲಿ ಭಾರತೀಯ ಆಟಗಾರ್ತಿ ಎದುರಾಳಿಗೆ ಭಾರೀ ಪಂಚ್ ನೀಡಿದರು. 51 ಕೆ.ಜಿ ವಿಭಾಗದಲ್ಲಿ ಜ್ಯೋತಿ ರಷ್ಯಾದ ಎಕತೆರೆನಾ ಮಲ್ಚನೋವಾ ವಿರುದ್ಧ ಸುಲಭ ಗೆಲುವು ಸಾಧಿಸಿ ಚಿನ್ನದ ಪದಕ ಗೆದ್ದರು. 54 ಕೆ.ಜಿ ವಿಭಾಗದಲ್ಲಿ ಸಾಕ್ಷಿ ಇಂಗ್ಲೆಂಡ್ನ ಇವಿ ಜಾನೆ ಸ್ಮಿತ್ ವಿರುದ್ಧ 3-2 ರಿಂದ ಗೆಲುವು ಪಡೆದರು. ಭಾರತದ ಮತ್ತೂಬ್ಬ ಬಾಕ್ಸರ್ ಶಶಿ ಚೋಪ್ರಾ 57 ಕೆ.ಜಿ ವಿಭಾಗದಲ್ಲಿ ವಿಯೇಟ್ನಾಂನ ನೊಕೊ ಡೊ ಹಾಂಗ್ ವಿರುದ್ಧ 3-2 ರಿಂದ ಗೆಲುವು ಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ
Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್ ಪಂತ್
Amruthapura: ಅಮೃತಪುರವೆಂಬ ಅದ್ಭುತ ತಾಣ