Afghanistan: ನೂರ್ ಅಲಿ ಜದ್ರಾನ್ ವಿದಾಯ
Team Udayavani, Mar 9, 2024, 12:35 AM IST
ಕಾಬೂಲ್: ಅಫ್ಘಾನಿಸ್ಥಾನದ ಹಿರಿಯ ಬ್ಯಾಟರ್ ನೂರ್ ಅಲಿ ಜದ್ರಾನ್ ಶುಕ್ರವಾರ ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಘೋಷಿಸಿದರು.
ನೂರ್ ಅಲಿ ಜದ್ರಾನ್ 2009ರಲ್ಲಿ ಸ್ಕಾಟ್ಲೆಂಡ್ ವಿರುದ್ಧ ಏಕದಿನ ಕ್ರಿಕೆಟಿಗೆ ಪದಾರ್ಪಣೆಗೈದು 28 ಎಸೆತಗಳಿಂದ 45 ರನ್ ಬಾರಿಸಿ ಅಬ್ಬರಿಸಿದ್ದರು. ಕಳೆದ ವಾರ ಐರ್ಲೆಂಡ್ ವಿರುದ್ಧ ಅಂತಿಮ ಟೆಸ್ಟ್ ಆಡಿದರು.
35 ವರ್ಷದ ಜದ್ರಾನ್ ಅಫ್ಘಾನ್ ಪರ 2 ಟೆಸ್ಟ್, 51 ಏಕದಿನ ಹಾಗೂ 23 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಗಳಿಸಿದ ಒಟ್ಟು ರನ್ 1,930. ಇದರಲ್ಲಿ ಒಂದು ಶತಕ ಹಾಗೂ 11 ಅರ್ಧ ಶತಕ ಸೇರಿದೆ. ನೂರ್ ಅಲಿ ಜದ್ರಾನ್ ಶ್ರೀಲಂಕಾ ವಿರುದ್ಧ ಈ ವರ್ಷದ ಆರಂಭದಲ್ಲಷ್ಟೇ ಟೆಸ್ಟ್ ಪದಾರ್ಪಣೆ ಮಾಡಿದ್ದರು. ಸೋದರ ಸಂಬಂಧಿ ಇಬ್ರಾಹಿಂ ಜದ್ರಾನ್ ಅವರಿಂದ ಟೆಸ್ಟ್ಕ್ಯಾಪ್ ಪಡೆದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ