INDvsSA; ಅರ್ಷದೀಪ್, ಆವೇಶ್ ದಾಳಿಗೆ ಹರಿಣಗಳು ಧೂಳಿಪಟ; 116 ರನ್ ಗೆ ಆಲೌಟ್
Team Udayavani, Dec 17, 2023, 4:00 PM IST
ಜೋಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತೀಯ ಬೌಲರ್ ಗಳು ಮಿಂಚಿದ್ದಾರೆ. ಅರ್ಷದೀಪ್ ಸಿಂಗ್ ಮತ್ತು ಆವೇಶ್ ಖಾನ್ ಬೌಲಿಂಗ್ ದಾಳಿಗೆ ಪತರುಗುಟ್ಟಿದ ಹರಿಣಗಳ ತಂಡವು ಕೇವಲ 116 ರನ್ ಗೆ ಆಲೌಟಾಗಿದೆ.
ನ್ಯೂ ವಾಂಡರರ್ಸ್ ಸ್ಟೇಡಿಯಂನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ಬ್ಯಾಟರ್ ಗಳು ಪರದಾಡಿದರು. ಆರಂಭದಲ್ಲಿ ಅರ್ಷದೀಪ್ ದಾಳಿ ನಡೆಸಿದರೆ, ಬಳಿಕ ಆವೇಶ್ ಬೌಲಿಂಗ್ ಗೆ ಬ್ಯಾಟರ್ ಗಳು ವಿಕೆಟ್ ಒಪ್ಪಿಸಿದರು.
ಮೂರು ರನ್ ಆಗುವಷ್ಟರಲ್ಲಿ ದಕ್ಷಿಣ ಆಫ್ರಿಕಾದ ಎರಡು ವಿಕೆಟ್ ಉದುರಿತ್ತು. ಡ್ಯೂಸೆನ್ ಗೋಲ್ಡನ್ ಡಕ್ ಗೆ ಔಟಾದರು. ಟೋನಿ ಡಿ ಜೊರ್ಜಿ 28 ರನ್ ಗಳಿಸಿದರೆ, ನಾಯಕ ಮಾರ್ಕ್ರಮ್ 12 ರನ್ ಮತ್ತು ಆ್ಯಂಡಿಲೆ ಫೆಲುಕ್ವಾಯೋ 33 ರನ್ ಗಳಿಸಿದರು.
ಭಾರತದ ಪರ ಅರ್ಷದೀಪ್ ಐದು ವಿಕೆಟ್ ಕಿತ್ತರೆ, ಆವೇಶ್ ಖಾನ್ ನಾಲ್ಕು ವಿಕೆಟ್ ಕಬಳಿಸಿದರು. ಕೊನೆಯ ವಿಕೆಟ್ ಕುಲದೀಪ್ ಯಾದವ್ ಪಾಲಾಯಿತು.
ಕೆಎಲ್ ರಾಹುಲ್ ನಾಯಕತ್ವದಲ್ಲಿ ಯುವ ಭಾರತ ತಂಡ ಇಂದು ಕಣಕ್ಕಿಳಿದಿದೆ. ಸಾಯಿ ಸುದರ್ಶನ್ ಅವರು ಏಕದಿನ ಪದಾರ್ಪಣೆ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?
Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!
Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ
ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ
ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ