ಏಷ್ಯಾ ಕಪ್ : ಚಹರ್ ಬದಲು ಕುಲದೀಪ್ ಸೇನ್?
Team Udayavani, Aug 25, 2022, 8:52 PM IST
ಯುಎಇ: ಭಾರತದ ಏಷ್ಯಾ ಕಪ್ ತಂಡದಲ್ಲಿ ಒಂದು ಬದಲಾವಣೆಯಾಗುವ ಸಾಧ್ಯತೆ ಇದೆ. ದೀಪಕ್ ಚಹರ್ ಮತ್ತೆ ಗಾಯಾಳಾಗಿದ್ದು, ಇವರ ಸ್ಥಾನಕ್ಕೆ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಮಿಂಚಿದ್ದ ಕುಲದೀಪ್ ಸೇನ್ ಟೀಮ್ ಇಂಡಿಯಾವನ್ನು ಸೇರಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಆದರೆ ಇದಿನ್ನೂ ಅಧಿಕೃತಗೊಂಡಿಲ್ಲ.
ಗಾಯಾಳಾಗಿದ್ದ ದೀಪಕ್ ಚಹರ್ ಸುದೀರ್ಘ ವಿಶ್ರಾಂತಿ ಬಳಿಕ ಕಳೆದ ಜಿಂಬಾಬ್ವೆ ಪ್ರವಾಸದ ವೇಳೆ ಭಾರತ ತಂಡಕ್ಕೆ ಮರಳಿದ್ದರು. ಈ ಸರಣಿಯ ವೇಳೆ ಚಹರ್ ಮತ್ತೆ ಗಾಯಾಳಾದ ಕಾರಣ ಏಷ್ಯಾ ಕಪ್ ಆಡುವ ಸಾಧ್ಯತೆ ಇಲ್ಲ ಎನ್ನಲಾಗಿದೆ.
ಈಗಾಗಲೇ ಭಾರತ ಜಸ್ಪ್ರೀತ್ ಬುಮ್ರಾ ಮತ್ತು ಹರ್ಷಲ್ ಪಟೇಲ್ ಸೇವೆಯಿಂದ ವಂಚಿತವಾಗಿದೆ. ಭುವನೇಶ್ವರ್ ಕುಮಾರ್, ಆವೇಶ್ ಖಾನ್, ಆರ್ಷದೀಪ್ ಸಿಂಗ್ ಮಾತ್ರ ಟೀಮ್ ಇಂಡಿಯಾದ ಪ್ರಮುಖ ವೇಗಿಗಳಾಗಿದ್ದಾರೆ.