Asia ಒಲಿಂಪಿಕ್ ಕ್ವಾಲಿಫೈಯರ್ ಶೂಟಿಂಗ್: ವಿಜಯವೀರ್ಗೆ ಪ್ಯಾರಿಸ್ ಟಿಕೆಟ್
Team Udayavani, Jan 13, 2024, 11:32 PM IST
ಜಕಾರ್ತಾ: ಶೂಟರ್ ವಿಜಯವೀರ್ ಸಿಧು ಅವರಿಗೆ ಪ್ಯಾರಿಸ್ ಟಿಕೆಟ್ ಲಭ್ಯವಾಗಿದೆ. ಇದರೊಂದಿಗೆ ಈ ವರ್ಷದ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಲಿರುವ ಭಾರತದ ಶೂಟರ್ಗಳ ಸಂಖ್ಯೆ 17ಕ್ಕೆ ಏರಿದೆ.
ಇಲ್ಲಿ ನಡೆಯುತ್ತಿರುವ ಏಷ್ಯಾ ಒಲಿಂಪಿಕ್ ಕ್ವಾಲಿಫೈಯರ್ ಶೂಟಿಂಗ್ ಸ್ಪರ್ಧೆಯ 25 ಮೀ. ರ್ಯಾಪಿಡ್ ಫೈರ್ ಸ್ಪರ್ಧೆಯಲ್ಲಿ ವಿಜಯವೀರ್ ಸಿಧು ಬೆಳ್ಳಿ ಪದಕ ಗೆದ್ದು ಅರ್ಹತೆ ಸಂಪಾದಿಸಿದರು. 21 ವರ್ಷದ ವಿಜಯವೀರ್ ಹ್ಯಾಂಗ್ಝೂ ಏಷ್ಯಾಡ್ನಲ್ಲಿ ಕಂಚಿನ ಪದಕ ಜಯಿಸಿದ್ದರು. ಶನಿವಾರದ ಸಾಧನೆಯೊಂದಿಗೆ 25 ಮೀ. ರ್ಯಾಪಿಡ್ ಫೈರ್ ಸ್ಪರ್ಧೆಯಲ್ಲಿ ಸೀನಿಯರ್ ಶೂಟರ್ ಅನೀಶ್ ಭನ್ವಾಲಾ ಅವರನ್ನು ಕೂಡಿಕೊಂಡರು. ಅನೀಶ್ ಕಳೆದ ವರ್ಷದ ಚಾಂಗನ್ ಏಷ್ಯನ್ ಚಾಂಪಿಯನ್ಶಿಪ್ನಲ್ಲಿ ಒಲಿಂಪಿಕ್ಸ್ ಅರ್ಹತೆ ಸಂಪಾದಿಸಿದ್ದರು.
ಶನಿವಾರದ ಫೈನಲ್ನಲ್ಲಿ ವಿಜಯವೀರ್ ಅವರ 28 ಶಾಟ್ಗಳು ಯಶಸ್ವಿಯಾದವು. ಕಜಕಸ್ಥಾನದ ನಿಕಿಟ ಚಿರುÂಕಿನ್ ಚಿನ್ನ ಗೆದ್ದರು (32).
ಕಠಿನ ಸ್ಪರ್ಧೆ
ರ್ಯಾಪಿಡ್ ಫೈರ್ ಪಿಸ್ತೂಲ್ ಸ್ಪರ್ಧೆ ಎನ್ನುವುದು ಭಾರತೀ ಯರ ಪಾಲಿಗೆ ಅತ್ಯಂತ ಕಠಿನವಾಗಿ ಪರಿಣಮಿಸುತ್ತ ಬಂದಿದೆ. 2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ವಿಜಯ್ ಕುಮಾರ್ ಬೆಳ್ಳಿ ಜಯಿಸಿದ್ದೇ ಅತ್ಯುತ್ತಮ ಸಾಧನೆ.
ಜಕಾರ್ತಾ ಕೂಟದ ಮೂಲಕ ಭಾರತಕ್ಕೆ 4 ಒಲಿಂಪಿಕ್ಸ್ ಕೋಟಾ ಲಭಿಸಿದಂತಾಯಿತು. ಇದಕ್ಕೂ ಮುನ್ನ ಇಶಾ ಸಿಂಗ್, ವರುಣ್ ತೋಮರ್ ಮತ್ತು ರಿದಂ ಸಂಗ್ವಾನ್ ಈ ಅವಕಾಶ ಪಡೆದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು