ಬಾಕ್ಸಿಂಗ್‌: 6 ಮಂದಿಗೆ ಫೈನಲ್‌ ಟಿಕೆಟ್‌

Team Udayavani, Apr 26, 2019, 9:48 AM IST

ಬ್ಯಾಂಕಾಕ್‌: ಅಮಿತ್‌ ಪಂಗಲ್‌ (52 ಕೆಜಿ), ಕವೀಂದರ್‌ ಸಿಂಗ್‌ ಬಿಶ್‌r (56 ಕೆಜಿ) ಸಹಿತ ಭಾರತದ 6 ಬಾಕ್ಸರ್‌ಗಳು “ಏಶ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌’ ಕೂಟದ ಫೈನಲ್‌ ಪ್ರವೇಶಿಸಿದ್ದಾರೆ.

ಗುರುವಾರ ನಡೆದ ಪುರುಷರ ಸ್ಪರ್ಧೆಯಲ್ಲಿ ಅಮಿತ್‌, ಕವೀಂದರ್‌, ದೀಪಕ್‌ ಸಿಂಗ್‌ (49 ಕೆಜಿ), ಅಶಿಷ್‌ ಕುಮಾರ್‌ (75 ಕೆಜಿ), ವನಿತೆಯರ ಸ್ಪರ್ಧೆಯಲ್ಲಿ ಪೂಜಾ ರಾಣಿ (81 ಕೆಜಿ), ಸಿಮ್ರನ್‌ಜಿತ್‌ ಕೌರ್‌ (64 ಕೆಜಿ) ಸೆಮಿಫೈನಲ್‌ ಪಂದ್ಯಗಳಲ್ಲಿ ಗೆಲುವು ದಾಖಲಿಸಿದರು. ಫೈನಲ್‌ ಪಂದ್ಯಗಳೆಲ್ಲ ಶುಕ್ರವಾರ ನಡೆಯಲಿವೆ.

ಪಂಗಲ್‌ ಚೀನದ ಹು ಜಿಯಾಂಗುವಾನ್‌ ವಿರುದ್ಧ ಜಯಿಸಿದರೆ, ಬಿಶ್‌r ಮಂಗೋಲಿಯದ ಎನ್‌V-ಅಮರ್‌ ಖಾಖೂ ವಿರುದ್ಧ 3-2 ಅಂತರದಿಂದ ಗೆದ್ದರು. ವನಿತಾ ವಿಭಾಗದಲ್ಲಿ ಪೂಜಾ ಕಜಕೀಸ್ಥಾನದ ಫಾರಿಜಾ ಶೋಲ್ಟೆ ವಿರುದ್ಧ ಜಯಿಸಿದರು. ಸಿಮ್ರನ್‌ಜಿàತ್‌ ಕೌರ್‌ ಉಜ್ಬೇಕಿಸ್ಥಾನದ ಎದುರಾಳಿ ವಿರುದ್ಧ 5-0 ಅಂತರದಿಂದ ಗೆದ್ದ ಫೈನಲ್‌ ಪ್ರವೇಶಿಸಿದರು.

ಶಿವ ಥಾಪಗೆ ಕಂಚು
ಈ ಕೂಟದಲ್ಲಿ ಚಿನ್ನದ ಪದಕ ಗೆಲ್ಲುವ ಭರವಸೆಯಾಗಿದ್ದ ಶಿವ ಥಾಪ ಕಂಚಿನ ಪದಕಕ್ಕೆ ತೃಪ್ತಿಪಟ್ಟರು. ಇದು ಈ ಕೂಟದಲ್ಲಿ ಶಿವ ಥಾಪ ಗೆದ್ದ ಸತತ 4ನೇ ಪದಕವಾಗಿದೆ. ಉಳಿದಂತೆ ಪುರುಷರ ವಿಭಾಗದಲ್ಲಿ ಅಶೀಷ್‌, ಸತೀಶ್‌ ಕಂಚಿನ ಪದಕ ಗೆದ್ದರು. ವನಿತಾ ವಿಭಾಗದಲ್ಲಿ ಎಲ್‌. ಸರಿತಾ ದೇವಿ (60 ಕೆಜಿ), ಮನೀಷಾ (54 ಕೆಜಿ), ನಿಖತ್‌ ಜರೀನ್‌ (51 ಕೆಜಿ) ಮತ್ತು ಸೋನಿಯಾ ಚಹಲ್‌ (57 ಕೆಜಿ) ಕಂಚಿನ ಪದಕಕ್ಕೆ ತೃಪ್ತಿತಟ್ಟರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ