ಏಷ್ಯನ್ ಮ್ಯಾರಥಾನ್:ಮಾನ್ ಸಿಂಗ್ಗೆ ಚಿನ್ನ
Team Udayavani, Jan 22, 2024, 12:20 AM IST
ಹಾಂಕಾಂಗ್: ಭಾರತದ ಮಾನ್ ಸಿಂಗ್ ಅವರು ಏಷ್ಯನ್ ಮ್ಯಾರಥಾನ್ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಅವರು ಈ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಭಾರತದ ಎರಡನೇ ಓಟಗಾರರಾಗಿದ್ದಾರೆ.
34ರ ಹರೆಯದ ಮಾನ್ ಸಿಂಗ್ ಅವರು 2:14.19 ನಿಮಿಷದಲ್ಲಿ ಗುರಿ ತಲುಪಿ ಚಿನ್ನ ಗೆದ್ದರು. ಅವರ ಈ ಹಿಂದಿನ ಶ್ರೇಷ್ಠ ನಿರ್ವಹಣೆ 2:16.58 ನಿಮಿಷ ಆಗಿತ್ತು. ಇದನ್ನು ಅವರು ಕಳೆದ ವರ್ಷದ ಮುಂಬಯಿ ಮ್ಯಾರಥಾನ್ನಲ್ಲಿ ದಾಖಲಿಸಿದ್ದರು.
ಚೀನದ ಹುವಾಂಗ್ ಯಾಂಗ್ಝೆಂಗ್ ಬೆಳ್ಳಿ ಗೆದ್ದರೆ ಕಿರ್ಗಿಸ್ಥಾನದ ತಿಯಾಪಿನ್ ಲಿಯ ಕಂಚು ಪಡೆದರು. ಸ್ಫರ್ಧೆಯಲ್ಲಿದ್ದ ಇನ್ನೋರ್ವ ಭಾರತೀಯ ಎಪಿ ಬೆಳಿಯಪ್ಪ ಅವರು ಆರನೇ ಸ್ಥಾನ ಪಡೆದರು.