Australia-Pakistan: ಪಿಂಕ್ ಟೆಸ್ಟ್ ಪಂದ್ಯದ ಸರದಿ
Team Udayavani, Jan 2, 2024, 5:55 AM IST
ಸಿಡ್ನಿ: ಆಸ್ಟ್ರೇಲಿಯ ಮತ್ತು ಪಾಕಿಸ್ಥಾನ ತಂಡಗಳು “ಪಿಂಕ್ ಟೆಸ್ಟ್ ಮ್ಯಾಚ್’ಗೆ ಸಜ್ಜಾಗಿವೆ. ಈ ಪಂದ್ಯ ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ಜ. 3ರಂದು ಆರಂಭವಾಗಲಿದೆ.
ಈ ಪಂದ್ಯದಲ್ಲಿ ಆಟಗಾರರು ಗುಲಾಲಿ ಬಣ್ಣದ ಕ್ಯಾಪ್ ಧರಿಸಲಿದ್ದಾರೆ. ಅಂದು ಆಸ್ಟ್ರೇಲಿಯನ್ನರದು “ಬ್ಯಾಗ್ಗಿ ಗ್ರೀನ್’ ಬದಲು “ಬ್ಯಾಗ್ಗಿ ಪಿಂಕ್ ಕ್ಯಾಪ್’ ಆಗಿರುತ್ತದೆ. ಕ್ರಿಕೆಟಿಗರ ಜೆರ್ಸಿ ಮೇಲಿನ ಬರಹಗಳೆಲ್ಲ ಪಿಂಕ್ ಬಣ್ಣದಲ್ಲಿರಲಿವೆ.
ಸಿಡ್ನಿಯಲ್ಲಿ ಆಡಲಾಗುವ ವರ್ಷದ ಮೊದಲ ಟೆಸ್ಟ್ ಪಂದ್ಯವನ್ನು “ಪಿಂಕ್ ಟೆಸ್ಟ್’ ಎಂದು ಕರೆಯಲಾಗುವುದು. ಆಸ್ಟ್ರೇಲಿಯದ ಮಾಜಿ ವೇಗಿ ಗ್ಲೆನ್ ಮೆಕ್ಗ್ರಾತ್ ಅವರ ಪತ್ನಿ, ಜೇನ್ ಮೆಕ್ಗ್ರಾತ್ ಅವರಿಗೆ ಈ ಪಂದ್ಯವನ್ನು ಅರ್ಪಿಸಲಾಗುತ್ತದೆ. ಅವರು ಸ್ತನ ಕ್ಯಾನ್ಸರ್ನಿಂದ ನಿಧನರಾಗಿದ್ದರು.
ಪಂದ್ಯದ 3ನೇ ದಿನ ಸಿಡ್ನಿ ಕ್ರೀಡಾಂಗಣದ “ಲೇಡಿಸ್ ಸ್ಟಾಂಡ್’ ತಾತ್ಕಾಲಿಕವಾಗಿ “ಜೇನ್ ಮೆಕ್ಗ್ರಾತ್ ಸ್ಟಾಂಡ್’ ಎಂದು ಕರೆಯಲ್ಪಡುತ್ತದೆ. ಅಂದು “ಜೇನ್ ಮೆಕ್ಗ್ರಾತ್ ಡೇ’ ಕೂಡ ಆಗಿರುತ್ತದೆ. ಜೇನ್ ಮೆಕ್ಗ್ರಾತ್ ನಿಧನ ಹೊಂದಿದ್ದು 2008ರಲ್ಲಿ. ಅಂದಿನಿಂದ “ಮೆಕ್ಗ್ರಾತ್ ಫೌಂಡೇಶನ್’ ಸ್ತನ ಕ್ಯಾನ್ಸರ್ ವಿರುದ್ಧ ಜಾಗೃತಿ ಮೂಡಿಸುತ್ತ ಬರುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ