ಆಸ್ಟ್ರೇಲಿಯನ್‌ ಓಪನ್‌: ಇನ್ನು ಕ್ವಾರ್ಟರ್‌ ಫೈನಲ್‌ ಕದನ


Team Udayavani, Feb 15, 2021, 6:40 AM IST

ಆಸ್ಟ್ರೇಲಿಯನ್‌ ಓಪನ್‌: ಇನ್ನು ಕ್ವಾರ್ಟರ್‌ ಫೈನಲ್‌ ಕದನ

ಮೆಲ್ಬರ್ನ್: ಆಸ್ಟ್ರೇಲಿಯನ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ಪಂದ್ಯಾವಳಿ ಕ್ವಾರ್ಟರ್‌ ಫೈನಲ್‌ ಕದನಕ್ಕೆ ಅಣಿಯಾಗಿದೆ. ಹಾಲಿ ಚಾಂಪಿಯನ್‌ ನೊವಾಕ್‌ ಜೊಕೋವಿಕ್‌ ಗಾಯದ ನಡುವೆಯೂ ಸೆಣಸಾಡಿ ಗೆದ್ದು ಬಂದು ಬಂದಿದ್ದಾರೆ. ಜತೆಗೆ ಅಲೆಕ್ಸಾಂಡರ್‌ ಜ್ವೆರೇವ್‌, ಅಸ್ಲಾನ್‌ ಕರತ್ಸೇವ್‌, ಸೆರೆನಾ, ನವೋಮಿ ಒಸಾಕಾ, ಸಿಮೋನಾ ಹಾಲೆಪ್‌ ಅಂತಿಮ ಎಂಟರ ಸುತ್ತಿನ ಕಣದಲ್ಲಿದ್ದಾರೆ.

ಆದರೆ ಯುಎಸ್‌ ಓಪನ್‌ ಚಾಂಪಿಯನ್‌ ಖ್ಯಾತಿಯ ಡೊಮಿನಿಕ್‌ ಥೀಮ್‌, ಕಳೆದ ಸಲದ ಫೈನಲಿಸ್ಟ್‌ ಗಾರ್ಬಿನ್‌ ಮುಗುರುಜಾ ಸೋತು ಹೊರಬಿದ್ದಿದ್ದಾರೆ.

ಜೊಕೋವಿಕ್‌ ಸಾಹಸ :

ಸ್ನಾಯು ಸೆಳೆದಿಂದ ಆಡುವುದೇ ಅನುಮಾನ ಎಂಬ ಸ್ಥಿತಿಯಲ್ಲಿದ್ದ ಹಾಲಿ ಚಾಂಪಿಯನ್‌ ಜೊಕೋವಿಕ್‌ ಕೆನಡಾದ ಮಿಲೋಸ್‌ ರಾನಿಕ್‌ ವಿರುದ್ಧ ಮೊದಲೆರಡು ಸೆಟ್‌ಗಳಲ್ಲಿ ಲಯ ಕಳೆದುಕೊಂಡರೂ ಬಳಿಕ ನೈಜ ಆಟಕ್ಕೆ ಕುದುರಿಕೊಂಡರು. ಗೆಲುವಿನ ಅಂತರ 7-6 (7-4), 4-6, 6-1, 6-4.

ಮಂಗಳವಾರದ ಕ್ವಾ. ಫೈನಲ್‌ನಲ್ಲಿ ಜೊಕೋವಿಕ್‌ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೇವ್‌ ಸವಾಲನ್ನು ಎದುರಿಸಲಿದ್ದಾರೆ. ಜ್ವೆರೇವ್‌ 6-4, 7-6 (7-5), 6-3 ಅಂತರದಿಂದ ಸರ್ಬಿಯಾದ ಡುಸಾನ್‌ ಲಾಜೋವಿಕ್‌ ಅವರನ್ನು ಹಿಮ್ಮೆಟ್ಟಿಸಿದರು.

ಕಳೆದ ಸಲದ ಫೈನಲ್‌ನಲ್ಲಿ ಎಡವಿದ ಥೀಮ್‌ ಈ ಬಾರಿ 4ನೇ ಸುತ್ತಿನಲ್ಲೇ ಆಟ ಮುಗಿಸಿದರು. ಬಲ್ಗೇರಿಯಾದ ಗ್ರಿಗರ್‌ ಡಿಮಿಟ್ರೋವ್‌ 6-4, 6-4, 6-0 ಅಂತರದಿಂದ ಥೀಮ್‌ ಆಟವನ್ನು ಕೊನೆಗೊಳಿಸಿದರು. ಡಿಮಿಟ್ರೋವ್‌ ಅವರ ಮುಂದಿನ ಎದುರಾಳಿ ರಶ್ಯದ ಅಸ್ಲಾನ್‌ ಕರತ್ಸೇವ್‌. ಮೊದಲ ಗ್ರ್ಯಾನ್‌ಸ್ಲಾಮ್‌ ಆಡುತ್ತಿರುವ ಕರತ್ಸೇವ್‌ 5 ಸೆಟ್‌ಗಳ ಸೆಣಸಾಟದ ಬಳಿಕ ಕೆನಡಾದ ಫೆಲಿಕ್ಸ್‌ ಔಗರ್‌ ಅಲಿಯಾಸಿಮ್‌ ಅವರನ್ನು ಮಣಿಸಿದರು. ಅಂತರ 3-6, 1-6, 6-3, 6-3, 6-4.

ಸೆರೆನಾ ವರ್ಸಸ್‌ ಹಾಲೆಪ್‌ :

ಸೆರೆನಾ ವಿಲಿಯಮ್ಸ್‌ 7ನೇ ಶ್ರೇಯಾಂಕದ ಬೆಲರೂಸಿಯನ್‌ ಆಟಗಾರ್ತಿ ಅರಿನಾ ಸಬಲೆಂಕಾ ಅವರನ್ನು 6-4, 2-6, 6-4ರಿಂದ ಹಿಮ್ಮೆಟ್ಟಿಸಿದರು. ಕ್ವಾರ್ಟರ್‌ ಫೈನಲ್‌ನಲ್ಲಿ ಸೆರೆನಾ ಎದುರಾಳಿ ಸಿಮೋನಾ ಹಾಲೆಪ್‌. ರೊಮೇನಿಯದ ಹಾಲೆಪ್‌ ಪೋಲೆಂಡ್‌ನ‌ ಐಗಾ ಸ್ವಿಯಾಟೆಕ್‌ ಅವರಿಗೆ 3-6, 6-1, 6-4 ಅಂತರದ ಸೋಲುಣಿಸಿದರು.

ನವೋಮಿ ಒಸಾಕಾ ಸ್ಪೇನಿನ ಮುಗುರುಜಾ ವಿರುದ್ಧ 4-6, 6-4, 7-5 ಅಂತರದ ರೋಚಕ ಜಯ ಸಾಧಿಸಿದರು. ಒಸಾಕಾ ಅವರ ಕ್ವಾ.ಫೈನಲ್‌ ಎದುರಾಳಿ ತೈವಾನ್‌ನ ಶೀ ಸು ವೀ. ಇವರಿಗೆ ಶರಣಾದವರು ಜೆಕ್‌ನ ಮಾರ್ಕೆಟಾ ವೊಂಡ್ರೂಸೋವಾ.

ಟಾಪ್ ನ್ಯೂಸ್

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.