ಒಂದಷ್ಟು ಆಳಕ್ಕೆ ಪರಿಶೋಧಕ ಪ್ರಯಾಣ


Team Udayavani, Feb 15, 2021, 6:36 AM IST

ಒಂದಷ್ಟು ಆಳಕ್ಕೆ ಪರಿಶೋಧಕ ಪ್ರಯಾಣ

ಮೌನ, ಆಳವಾದ ಧ್ಯಾನ, ತನ್ನೊಳಕ್ಕೆ ಆಳವಾದ ಇಣುಕುವಿಕೆಯ ಫ‌ಲವಾಗಿ ಎಲ್ಲರ ಹೃದಯವನ್ನೂ ತಟ್ಟುವ ಪರಿಶುದ್ಧ ಪ್ರೀತಿ ಚಿಮ್ಮಿ ಬರುತ್ತದೆ. ಅದನ್ನು ಪಡೆ  ಯುವ ಹಾದಿಯಲ್ಲಿ ಕಳೆದುಕೊಳ್ಳುವ ವುಗಳ ಬಗ್ಗೆ ಮರುಗಬೇಡಿ.

ಒಂದೂರಿನಲ್ಲೊಬ್ಬ ಕಟ್ಟಿಗೆ ಮಾರಾಟ ಗಾರ ಇದ್ದ. ದಿನವೂ ಪಕ್ಕದ ಕಾಡಿಗೆ ಹೋಗಿ ಆವತ್ತಿಗೆ ಬೇಕಾದಷ್ಟು ಸೌದೆ ಕಡಿದು ಪಕ್ಕದ ಪೇಟೆಯಲ್ಲಿ ಮಾರು ವುದು, ಅವತ್ತಿಗೆ ಬೇಕಾದಷ್ಟನ್ನು ಖರೀದಿಸಿ ತಂದು ಗಂಜಿ ಬೇಯಿಸಿ ಉಣ್ಣುವುದು ಅವನ ಬದುಕು. ಮಳೆಗಾಲದಲ್ಲಿ ಕೆಲವು ದಿನ ಸೌದೆ ಸಿಗು ತ್ತಿರಲಿಲ್ಲ. ಚಳಿಗಾಲದಲ್ಲಿ ಚಳಿಯಲ್ಲಿ ಮುರುಟ ಬೇಕಾಗುತ್ತಿತ್ತು, ಬೇಸಗೆ ಯಲ್ಲಿ ಒಣಗಬೇಕಾಗು ತ್ತಿತ್ತು.

ಆ ಕಾಡಿನಲ್ಲೊಬ್ಬ ಸಂತನಿದ್ದ. ಹಲವು ವರ್ಷಗಳಿಂದ ಈ ಸೌದೆ ಮಾರಾಟಗಾರನ ಬದುಕನ್ನು ಕಂಡಿದ್ದ ಸಂತ ಒಂದು ದಿನ ಆತನನ್ನು ಬಳಿಗೆ ಕರೆದು ಹೇಳಿದ, “ನೀನು ಕಷ್ಟ ಪಡುವುದನ್ನು ತುಂಬಾ ಸಮಯದಿಂದ ಗಮನಿಸುತ್ತಿದ್ದೇನೆ. ನೀನು ಕಾಡಿನಲ್ಲಿ ಒಂದಷ್ಟು ದೂರ ಮುಂದಕ್ಕೆ ಯಾಕೆ ಹೋಗಬಾರದು?’

“ಯಾಕೆ ಸ್ವಾಮೀ? ಹೆಚ್ಚು ಕಟ್ಟಿಗೆ ಸಿಗುವುದೆಂದೇ? ಅದರಿಂದ ಹೆಚ್ಚು ದೂರ ಸೌದೆ ಹೊರಬೇಕಾಗುತ್ತದಲ್ಲ!’ ಬಡವ ಕೇಳಿದ.

ಸಂತ ಉತ್ತರಿಸಿದ, “ಅಲ್ಲ. ಸ್ವಲ್ಪ ದೂರ ಮುಂದುವರಿದರೆ ಅಲ್ಲೊಂದು ತಾಮ್ರದ ಗಣಿ ಇದೆ. ಅಲ್ಲಿಂದ ತಾಮ್ರ ತಂದು ಮಾರಾಟ ಮಾಡಿದರೆ ಕೆಲವು ದಿನಗಳಿಗೆ ಸಾಲುವಷ್ಟು ಹಣ ಸಿಗುತ್ತದೆ’.

ಬಡವನಿಗೆ ಹೌದಲ್ಲ ಎನಿಸಿತು. ಕಾಡಿನೊಳಗೆ ಹೋಗಿ ನೋಡಿಬಂದ. ಹೌದು, ಸಂತ ಹೇಳಿದ್ದು ನಿಜ. ಹಿಂದಿರುಗಿ ಬಂದು ಸಂತನ ಕಾಲು ಮುಟ್ಟಿ ನಮಸ್ಕರಿ ಸಿದ. “ಹೆಚ್ಚು ಆನಂದ ಪಡಬೇಡ. ಕಾಡಿ ನೊಳಗೆ ಇನ್ನೂ ಸ್ವಲ್ಪ ದೂರ ಹೋಗಲು ತಯಾರಿದ್ದೀಯಾ’ – ಸಂತ ಕೇಳಿದ.

“ಯಾಕೆ, ತಾಮ್ರ ಮಾರಿದರೆ ಒಂದು ವಾರಕ್ಕಾಗುವಷ್ಟು ಹಣ ಸಿಗುತ್ತದೆಯಲ್ಲ!’ ಬಡವನ ಪ್ರಶ್ನೆ.

“ಹಾಗಲ್ಲ, ಇನ್ನೂ ಸ್ವಲ್ಪ ದೂರ ಹೋದರೆ ಬೆಳ್ಳಿಯ ಗಣಿ ಇದೆ. ಅಲ್ಲಿಂದ ಬೆಳ್ಳಿ ತಂದರೆ ಮಾರಾಟ ಮಾಡಿ ಒಂದೆರಡು ತಿಂಗಳಿಗೆ ಸಾಕಾಗುವಷ್ಟು ಸಂಪಾದಿಸಬಹುದು…’ ಸಂತ ನುಡಿದ. ಬಡವ ಹೋಗಿ ನೋಡಿದರೆ ಅಲ್ಲಿ ಬೆಳ್ಳಿ ಗಣಿ ಇದೆ. ಆತ ಕುಣಿಯುತ್ತ ಬಂದು ಸಂತನಿಗೆ ವಂದಿಸಿದ.

“ತಡೆದುಕೋ. ಇನ್ನೂ ಸ್ವಲ್ಪ ದೂರ ಹೋಗಬಹುದಿತ್ತಲ್ಲ…’ ಎಂದ ಸಂತ.

“ಬೆಳ್ಳಿಯ ಗಣಿ ಕಳೆದುಹೋದರೆ…’ ಬಡವನ ಪ್ರಶ್ನೆ.

“ಹಾಗಲ್ಲ. ಇನ್ನೂ ಸ್ವಲ್ಪ ದೂರ ನಡೆದರೆ ಅಲ್ಲಿ ಚಿನ್ನದ ಗಣಿ ಇದೆ. ಚಿನ್ನ ತಂದು ಮಾರಿದರೆ ವರ್ಷಕ್ಕೆ ಸಾಕಾದೀತು…’

ಕಾಡಿನೊಳಗೆ ಇನ್ನೂ ದೂರ ನಡೆದರೆ ಅಲ್ಲಿ ಚಿನ್ನದ ಗಣಿ ಇತ್ತು. ಆತ ಒಂದಷ್ಟು ಚಿನ್ನ ತಂದು ಸಂತನ ಕಾಲ ಬಳಿ ಇರಿಸಿ ಉದ್ದಂಡ ನಮಸ್ಕರಿಸಿದ.

“ನೀನು ಇನ್ನು ಒಂದು ವರ್ಷ ಕಳೆದು ಇಲ್ಲಿಗೆ ಬರುವಾಗ ನಾನು ಇರು ತ್ತೇನೆಯೋ ಇಲ್ಲವೋ ಗೊತ್ತಿಲ್ಲ. ಹಾಗಾಗಿ ಕೊನೆಯ ಒಂದು ಸಲಹೆ- ಇನ್ನೂ ಪ್ರಯತ್ನಿಸು. ಇನ್ನೂ ದೂರ ನಡೆದರೆ ವಜ್ರದ ಗಣಿ ಸಿಕ್ಕಿದರೂ ಸಿಗಬಹುದು…’ ಸಂತ ಹೇಳಿದ.

ಬಡವ ಕಾಡಿನಲ್ಲಿ ಮತ್ತಷ್ಟು ಆಳಕ್ಕೆ ನಡೆದ. ಒಂದು ಮುಷ್ಠಿ ವಜ್ರ ಹೊತ್ತುಕೊಂಡು ಬಂದ. “ಇದು ನನ್ನ ಇಡೀ ಜೀವನಕ್ಕೆ ಸಾಕಾದಿತು’ ಎಂದ.

“ನಿಜ. ಪ್ರಾಯಃ ನಾವು ಮತ್ತೆ ಭೇಟಿ ಯಾಗಲಾರೆವು. ಈಗ ಕಾಡು, ತಾಮ್ರ, ಬೆಳ್ಳಿ, ಚಿನ್ನ, ವಜ್ರದ ಗಣಿಗಳನ್ನೆಲ್ಲ ಮರೆತು ಬಿಡು. ಅತ್ಯಂತ ಅಮೂಲ್ಯವಾದದ್ದು ನಿನ್ನೊಳಗೆಯೇ ಇದೆ. ಇಲ್ಲಿ ಬಾ, ನನ್ನ ಹಾಗೆಯೇ ಇಲ್ಲಿ ಕುಳಿತುಕೋ. ನಿನ್ನೊಳಗಿ ನದನ್ನು ಹುಡುತ್ತ ಹೋಗು…’

ಬಡವ ಹೇಳಿದ, “ಈ ಗಣಿಗಳೆಲ್ಲ ಇರುವುದು ಗೊತ್ತಿದ್ದರೂ ನೀವೇ ಏಕೆ ಅವುಗಳನ್ನು ಹುಡುಕಿ ಹೊರಡಲಿಲ್ಲ ಎಂದು ನಾನು ಆಗಾಗ ಆಶ್ಚರ್ಯ ಪಡುತ್ತಿದ್ದೆ. ಈಗ ಹೇಳಿ, ನೀವು ಏಕೆ ಚಿನ್ನವನ್ನು, ವಜ್ರಗಳನ್ನು ತರಲಿಲ್ಲ? ಅದರ ಬದಲು ಈ ಮರದಡಿ ಏಕೆ ಕುಳಿತಿರುವಿರಿ?

“ನಾನೂ ನಿನ್ನ ಹಾಗೆಯೇ ವಜ್ರಗಳನ್ನು ತಂದಾಗ ನನ್ನ ಗುರುಗಳು ಇಲ್ಲಿ ಕುಳಿತು ಅಂತರಂಗವನ್ನು ಹುಡುಕಿ ಹೊರಡಲು ಹೇಳಿದ್ದರು…’

ಬಡವ ವಜ್ರಗಳನ್ನೆಲ್ಲ ನೆಲಕ್ಕೆಸೆದ. “ಇದುವರೆಗೆ ನೀವು ಹೇಳಿದ್ದೆಲ್ಲವೂ ನಿಜವಾಗಿದೆ. ಈಗಲೂ ನಿಮ್ಮನ್ನು ನಂಬುತ್ತೇನೆ, ನನ್ನೊಳಗಿನ ಅಮೂಲ್ಯ ವನ್ನು ಹುಡುಕಿ ಹೊರಡುತ್ತೇನೆ…’ಎಂದ.

( ಸಾರ ಸಂಗ್ರಹ)

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.