ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌: ಸೆರೆನಾ ಮೂರನೇ ಸುತ್ತಿಗೆ

Team Udayavani, Jan 20, 2017, 3:45 AM IST

AP1_19_2017_000141B.jpg

ಮೆಲ್ಬರ್ನ್: ಮೆಲ್ಬರ್ನ್ ಪಾರ್ಕ್‌ನಲ್ಲಿ ಏಳನೇ ಪ್ರಶಸ್ತಿ ಗೆಲ್ಲುವ ಗುರಿ ಇಟ್ಟುಕೊಂಡಿರುವ ದ್ವಿತೀಯ ಶ್ರೇಯಾಂಕದ ಅಮೆರಿಕದ ಸೆರೆನಾ ವಿಲಿಯಮ್ಸ್‌ ಸುಲಭ ಜಯದೊಂದಿಗೆ ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಕೂಟದ ಮೂರನೇ ಸುತ್ತಿಗೇರಿದ್ದಾರೆ. ಇದೇ ವೇಳೆ ಮೂರನೇ ಶ್ರೇಯಾಂಕದ ಪೋಲೆಂಡಿನ ಅಗ್ನಿàಸ್ಕಾ ರಾದ್ವಂಸ್ಕಾ ಆಘಾತಕಾರಿ ಸೋಲನ್ನು ಕಂಡು ಹೊರಬಿದ್ದಿದ್ದಾರೆ.

ಜೆಕ್‌ ಗಣರಾಜ್ಯದ ಲೂಸಿ ಸಫ‌ರೋವಾ ಅವರೆದುರಿನ ಈ ಹೋರಾಟದಲ್ಲಿ 15 ಏಸ್‌ ಮತ್ತು 35 ವಿಜಯಿ ಹೊಡೆತಗಳನ್ನು ನೀಡಿದ್ದ ಸೆರೆನಾ 6-3, 6-4 ಸೆಟ್‌ಗಳಿಂದ ಗೆಲುವು ಸಾಧಿಸಿ ಮುನ್ನಡೆದರು. ಮುಂದಿನ ಸುತ್ತಿನಲ್ಲಿ ಅವರು ತನ್ನ ದೇಶದವರೇ ಆದ ನಿಕೋಲೆ ಗಿಬ್ಸ್ ಅವರನ್ನು ಎದುರಿಸಲಿದ್ದಾರೆ. ಗಿಬ್ಸ್ ಇನ್ನೊಂದು ಪಂದ್ಯದಲ್ಲಿ ಅಮೆರಿಕದವರೇ ಆದ ಐರಿನಾ ಫಾಲ್ಕೋನಿ ಅವರನ್ನು 6-4, 6-1 ಸೆಟ್‌ಗಳಿಂದ ಉರುಳಿಸಿದ್ದರು.

ವೋಜ್ನಿಯಾಕಿ ಮುನ್ನಡೆ
ಮಾಜಿ ನಂಬರ್‌ ವನ್‌ ಕ್ಯಾರೋಲಿನ್‌ ವೋಜ್ನಿಯಾಕಿ ಸುಲಭ ಗೆಲುವಿನೊಂದಿಗೆ ಮೂರನೇ ಸುತ್ತು ತಲುಪಿದ್ದಾರೆ. ಕ್ರೊವೇಶಿಯದ ಡೊನಾ ವೆಕಿಕ್‌ ಅವರನ್ನು 6-1, 6-3 ಸೆಟ್‌ಗಳಿಂದ ಕೆಡಹಿದ ವೋಜ್ನಿಯಾಕಿ ಮೂರನೇ ಸುತ್ತಿನಲ್ಲಿ ಬ್ರಿಟನ್‌ನ ಜೋಹಾನಾ ಕೊಂಟಾ ಅವರ ಸವಾಲನ್ನು ಎದುರಿಸಬೇಕಾಗಿದೆ. ಕೊಂಟಾ ತನ್ನ ಪಂದ್ಯದಲ್ಲಿ ಜಪಾನಿನ ನವೋಮಿ ಒಸಾಕಾ ಅವರನ್ನು 6-4, 6-2 ಸೆಟ್‌ಗಳಿಂದ ಸೋಲಿಸಿದರು.

ರಾದ್ವಂಸ್ಕಾ ಪತನ
ಮೂರನೇ ಶ್ರೇಯಾಂಕದ ಮತ್ತು ಮಾಜಿ ಸೆಮಿಫೈನಲಿಸ್ಟ್‌ ಅಗ್ನಿàಸ್ಕಾ ರಾದ್ವಂಸ್ಕಾ ದ್ವಿತೀಯ ಸುತ್ತಿನ ಹೋರಾಟದಲ್ಲಿ ಆಘಾತಕಾರಿ ಸೋಲನ್ನು ಕಂಡಿದ್ದಾರೆ. 79ನೇ ರ್‍ಯಾಂಕಿನ ಕ್ರೊವೇಶಿಯದ ಮಿರ್ಜಾನಾ ಲೂಸಿಕ್‌ ಬರೋನಿ ಅವರನ್ನು 6-3, 6-2 ಸೆಟ್‌ಗಳ ಗೆಲುವು ಸಾಧಿಸಿ ಸಂಭ್ರಮಿಸಿದರು. 2015 ಮತ್ತು ಕಳೆದ ವರ್ಷ ಇಲ್ಲಿ ರಾದ್ವಂಸ್ಕಾ ಸೆಮಿಫೈನಲ್‌ ತಲುಪಿದ್ದರು. ಲೂಸಿಕ್‌ ಬರೋನಿ ಮುಂದಿನ ಸುತ್ತಿನಲ್ಲಿ ಗ್ರೀಸ್‌ನ ಮರಿಯಾ ಸಕ್ಕಾರಿ ಅವರನ್ನು ಎದುರಿಸಲಿದ್ದಾರೆ. ಸಕ್ಕಾರಿ ತನ್ನ ಪಂದ್ಯದಲ್ಲಿ ಫ್ರಾನ್ಸ್‌ನ ಅಲೀಝ್ ಕಾರ್ನೆಟ್‌ ಅವರನ್ನು 7-5, 4-6, 6-1 ಸೆಟ್‌ಗಳಿಂದ ಉರುಳಿಸಿದ್ದರು.

ಸ್ಲೋವಾಕಿಯಾದ ಡೊಮಿನಿಕಾ ಸಿಬುಲ್ಕೋವಾ ಮತ್ತು ರಶ್ಯದ ಏಕ್ತರೀನಾ ಮಕರೋವಾ ಮೂರನೇ ಸುತ್ತಿನಲ್ಲಿ ಪರಸ್ಪರ ಎದುರಾಗಲಿದ್ದಾರೆ. ಸಿಬುಲ್ಕೋವಾ ದ್ವಿತೀಯ ಸುತ್ತಿನಲ್ಲಿ ಚೈನೀಸ್‌ ತೈಪೆಯ ಸು ವೀ ಹೀಹ್‌ ಅವರನ್ನು 6-4, 7-6 (10-8) ಸೆಟ್‌ಗಳಿಂದ ಕೆಡಹಿದರೆ ಮಕರೋವಾ ಇಟಲಿಯ ಸಾರಾ ಇರಾನಿ ವಿರುದ್ಧ 6-2, 3-2ರಿಂದ ಮುನ್ನಡೆಯಲ್ಲಿರುವಾಗ ಇರಾನಿ ಪಂದ್ಯ ತ್ಯಜಿಸಿದ್ದರಿಂದ ಮುಂದಿನ ಸುತ್ತಿಗೇರಿದರು.

ಇನ್ನೊಂದು ಪಂದ್ಯದಲ್ಲಿ 5ನೇ ಶ್ರೇಯಾಂಕದ ಜೆಕ್‌ ಗಣರಾಜ್ಯದ ಕರೋಲಿನಾ ಪ್ಲಿಸ್ಕೋವಾ ರಶ್ಯದ ಅನ್ನಾ ಬ್ಲಿಂಕೋವಾ ಅವರನ್ನು 6-0, 6-2 ಸೆಟ್‌ಗಳಿಂದ ಸೋಲಿಸಿ ಮೂರನೇ ಸುತ್ತು ತಲುಪಿದರು. ಮೂರನೇ ಸುತ್ತಿನಲ್ಲಿ ಅವರು ಲಾತ್ವಿಯಾದ ಜೆಲೆನಾ ಓಸ್ಟಾಪೆಂಕೊ ಅವರನ್ನು ಎದುರಿಸಲಿದ್ದಾರೆ. ಓಸ್ಟಾಪೆಂಕೊ ತನ್ನ ಪಂದ್ಯದಲ್ಲಿ ಕಝಾಕ್‌ಸ್ಥಾನದ ಯೂಲಿಯಾ ಪುತಿನ್‌ಟೆÕàವಾ ಅವರನ್ನು 6-3, 6-1 ಸೆಟ್‌ಗಳಿಂದ ಉರುಳಿಸಿದ್ದರು.

ಟಾಪ್ ನ್ಯೂಸ್

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

1-weqeqwewe

Sunriser Hyderabad; ಚೇಸಿಂಗ್‌ ಸಾಮರ್ಥ್ಯ ಪ್ರದರ್ಶಿಸಬೇಕಿದೆ: ವೆಟೋರಿ

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.