ಕಾಮನ್ವೆಲ್ತ್ ಗೇಮ್ಸ್: ಐತಿಹಾಸಿಕ ಬೆಳ್ಳಿ ಗೆದ್ದ ಪ್ರಿಯಾಂಕಾ ಗೋಸ್ವಾಮಿ- ಅವಿನಾಶ್ ಸಬ್ಲೆ
Team Udayavani, Aug 6, 2022, 5:04 PM IST
ಬರ್ಮಿಂಗಂ: ಇಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಹತ್ತು ಕಿ.ಮೀ ವೇಗದ ನಡಿಗೆ ಸ್ಪರ್ಧೆಯಲ್ಲಿ ಭಾರತದ ಪ್ರಿಯಾಂಕಾ ಗೋಸ್ವಾಮಿ ಮತ್ತು ಸ್ಟೀಪಲ್ ಚೇಸ್ ಸ್ಪರ್ಧೆಯಲ್ಲಿ ಅವಿನಾಶ್ ಸಬ್ಲೆ ಅವರು ರಜತ ಪದಕ ಗೆದ್ದುಕೊಂಡಿದ್ದಾರೆ.
ಪ್ರಿಯಾಂಕಾ ಗೋಸ್ವಾಮಿ ಅವರು ಕಾಮನ್ವೆಲ್ತ್ ಕೂಟದಲ್ಲಿ ವೇಗದ ನಡಿಗೆಯಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ದಾಖಲೆಗೆ ಪಾತ್ರರಾದರು. ತನ್ನದೇ ದಾಖಲೆಯನ್ನು ಉತ್ತಮ ಪಡಿಸಿಕೊಂಡ ಪ್ರಿಯಾಂಕಾ 43 ನಿಮಿಷ 38 ಸೆಕೆಂಡ್ಸ್ ನಲ್ಲಿ ಗುರಿ ತಲುಪಿದರು. ಚಿನ್ನದ ಪದಕ ಪಡೆದ ಆಸ್ಟ್ರೇಲಿಯಾದ ಜೆಮಿಮಾ ಮೊಂಟಾಗ್ ಅವರು 42 ನಿಮಿಷ 34 ಸೆಕೆಂಡ್ಸ್ ನಲ್ಲಿ ಅಂತಿಮ ಗುರಿ ತಲುಪಿದರು. ಕೀನ್ಯಾದ ವಮುಸ್ಯಿ ಎನ್ ಗಿ ಅವರು ಕಂಚಿನ ಪದಕ ಪಡೆದರು.
ಇದನ್ನೂ ಓದಿ:ಕ್ರಿಕೆಟ್ ನಲ್ಲೂ ಇಂತಹ ಪಕ್ಷಪಾತ ನಡೆಯುತ್ತಿತ್ತು: ಹಾಕಿ ಮೋಸದಾಟಕ್ಕೆ ಸೆಹವಾಗ್ ಕಿಡಿ
ಉತ್ತರ ಪ್ರದೇಶದ ಪ್ರಿಯಾಂಕಾ 2020 ರ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಸಮಯದೊಂದಿಗೆ 17 ನೇ ಸ್ಥಾನ ಗಳಿಸಿದ್ದರು.
🇮🇳🥈 𝐒𝐈𝐋𝐕𝐄𝐑 𝐅𝐎𝐑 𝐈𝐍𝐃𝐈𝐀! Priyanka Goswami clocked her personal best timing of 43:38.00 to assure us of our third medal in Athletics at #B2022.
📸 Getty • #B2022 #CWG2022 #TeamIndia #BharatArmy pic.twitter.com/yXlCplhZfS
— The Bharat Army (@thebharatarmy) August 6, 2022
ಪುರುಷರ ಸ್ಟೀಪಲ್ ಚೇಸ್ ಪಂದ್ಯದಲ್ಲಿ ಭಾರತದ ಅವಿನಾಶ ಮುಕುಂದ್ ಸಬ್ಲೆ ಅವರು ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. 3000 ಮೀಟರ್ ಸ್ಟೀಪಲ್ ಚೇಸ್ ನಲ್ಲಿ ಅವಿನಾಶ್ ಸೇಬಲ್ ಅವರು ರಾಷ್ಟ್ರೀಯ ದಾಖಲೆಯನ್ನು 9 ನೇ ಬಾರಿಗೆ ಮುರಿದರು. 8:11.20 ರಲ್ಲಿ ಗುರಿ ತಲುಪಿದ ಅವರು ಭಾರತದ ಮೊಟ್ಟಮೊದಲ ಸ್ಟೀಪಲ್‌ಚೇಸ್ ಪದಕವನ್ನು ಗೆದ್ದರು.
🥈🔥 𝐓𝐎𝐏 𝐒𝐓𝐔𝐅𝐅! Avinash Sable recorded his personal best timing of 8:11.20 to assure India of yet another silver medal.
👏 He missed the 🥇 by 0.05s!
📸 Getty • #AvinashSable #B2022 #CWG2022 #TeamIndia #BharatArmy pic.twitter.com/eoXZadvRfi
— The Bharat Army (@thebharatarmy) August 6, 2022
ಇದರೊಂದಿಗೆ ಭಾರತ ಪದಕ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದೆ. ಭಾರತ ಇದುವರೆಗೆ ಒಟ್ಟು ಒಂಬತ್ತು ಚಿನ್ನ, ಹತ್ತು ಬೆಳ್ಳಿ ಮತ್ತು ಒಂಬತ್ತು ಕಂಚಿನ ಪದಕ ಗೆದ್ದುಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಪ್ರವೀಣ್ ಹತ್ಯೆ: ಪ್ರಮುಖ ಮೂವರು ಆರೋಪಿಗಳಿಗಾಗಿ ಕಾರ್ಯಾಚರಣೆ; ಎಡಿಜಿಪಿ ಅಲೋಕ್ ಕುಮಾರ್
ರಾಜ್ಯದಲ್ಲಿ ಮತ್ತೊಂದು ಅಕ್ರಮ ಬಯಲಿಗೆ: ಪರೀಕ್ಷೆ ವೇಳೆ ಸ್ಮಾರ್ಟ್ ವಾಚ್ ಬಳಸಿದ್ದವ ಸೆರೆ
ಅಕ್ರಮ ವಿದೇಶಿ ವಲಸಿಗರ ದಿಗ್ಬಂಧನ ಕೇಂದ್ರ ವಿಸ್ತರಣೆ: ಆರಗ ಜ್ಞಾನೇಂದ್ರ
ದೋಟಿಹಾಳ: ನಿಯಂತ್ರಣ ತಪ್ಪಿ ರಸ್ತೆ ಬದಿ ವಾಲಿದ ಬಸ್; ತಪ್ಪಿದ ಭಾರೀ ಅನಾಹುತ
ಚಾಮರಾಜಪೇಟೆ ಆಟದ ಮೈದಾನ ಜಮೀರ್ ಅಪ್ಪನ ಆಸ್ತಿಯಾ?: ಸಿ.ಟಿ.ರವಿ ಕಿಡಿ