
ಆಜಾದಿ ಕಾ ಅಮೃತ್ ಮಹೋತ್ಸವ್: ಆ. 22: ಒಂದು ದಿನದ ಕ್ರಿಕೆಟ್ ಸಂಭ್ರಮ
Team Udayavani, Jul 10, 2022, 11:42 PM IST

ಹೊಸದಿಲ್ಲಿ: ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮವನ್ನು ಆಚರಿಸಲು ಬಿಸಿಸಿಐ ಕೂಡ ಮುಂದಾಗಿದೆ.
ಆ. 22ರಂದು ಭಾರತ ಇಲೆವೆನ್ ಮತ್ತು ವಿಶ್ವ ಇಲೆವೆನ್ ತಂಡಗಳ ನಡುವೆ ಕ್ರಿಕೆಟ್ ಪಂದ್ಯವೊಂದನ್ನು ಆಯೋಜಿಸಲು ನಿರ್ಧರಿಸಿದೆ.
ಕೇಂದ್ರ ಕಲೆ ಮತ್ತು ಸಂಸ್ಕೃತಿ ಸಚಿವಾಲಯ ಹಾಗೂ ಬಿಸಿಸಿಐ ನಡುವೆ ಇದಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಯುತ್ತಿದೆ ಎಂಬುದಾಗಿ ಮಂಡಳಿಯ ಮೂಲವೊಂದು ತಿಳಿಸಿದೆ.ಎಲ್ಲವೂ ಅಂತಿಮಗೊಂಡರೆ ಹೊಸದಿಲ್ಲಿಯಲ್ಲಿ ಈ ಪಂದ್ಯ ನಡೆಯುವ ಸಾಧ್ಯತೆ ಇದೆ.
“ಆ. 22ರಂದು ಭಾರತ ಇಲೆವೆನ್ ಮತ್ತು ವಿಶ್ವ ಇಲೆವೆನ್ ನಡುವೆ ಕ್ರಿಕೆಟ್ ಪಂದ್ಯವೊಂದನ್ನು ನಡೆಸುವಂತೆ ಸರಕಾರದಿಂದ ನಮ್ಮ ಮುಂದೆ ಪ್ರಸ್ತಾವವೊಂದು ಬಂದಿದೆ. ವಿಶ್ವ ಇಲೆವೆನ್‌ಗಾಗಿ ಕನಿಷ್ಠ 13-14 ಮಂದಿ ಅಂತಾರಾಷ್ಟ್ರೀಯ ಕ್ರಿಕೆಟಿಗರ ಅಗತ್ಯವಿದೆ. ವಿದೇಶಿ ಕ್ರಿಕೆಟಿಗರು ಲಭಿಸಿದರೆ ಈ ಪಂದ್ಯ ಸಾಧ್ಯ’ ಎಂದು ಮಂಡಳಿಯ ಮೂಲ ತಿಳಿಸಿದೆ.
ವಿದೇಶಿ ಆಟಗಾರರ ಲಭ್ಯತೆ
ಆಗಸ್ಟ್‌ನಲ್ಲಿ ಇಂಗ್ಲಿಷ್ ದೇಶಿ ಕ್ರಿಕೆಟ್, ಕೆರಿಬಿಯನ್ ಪ್ರೀಮಿಯರ್ ಲೀಗ್ ಮೊದಲಾದ ಸರಣಿ ನಡೆಯುವುದರಿಂದ ವಿದೇಶಿ ಆಟಗಾರರ ಲಭ್ಯತೆ ಸುಲಭವಲ್ಲ ಎಂಬುದೊಂದು ಅನಿಸಿಕೆ.
ಭಾರತದ ತಂಡಕ್ಕೇನೂ ಸಮಸ್ಯೆ ಇರದು. ಆ. 20ಕ್ಕೆ ಜಿಂಬಾಬ್ವೆ ಎದುರಿನ ಸರಣಿ ಮುಗಿಯುವುದರಿಂದ ಹಾಗೂ ಆ. 27ಕ್ಕೆ ಶ್ರೀಲಂಕಾದಲ್ಲಿ ಏಷ್ಯಾ ಕಪ್ ಕ್ರಿಕೆಟ್ ಆರಂಭವಾಗುವುದರಿಂದ ಪೂರ್ಣ ಸಾಮರ್ಥ್ಯದ ತಂಡವನ್ನೇ ಕಣ ಕ್ಕಿಳಿಸಬಹುದಾಗಿದೆ. ಅಲ್ಲದೇ ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ರಿಷಭ್ ಪಂತ್ ಮೊದಲಾದವರು ಜಿಂಬಾಬ್ವೆ ವಿರುದ್ಧ ಆಡುತ್ತಿಲ್ಲ. ಆದರೆ ವಿಶ್ವದ ಸ್ಟಾರ್ ಆಟಗಾರರು ಲಭ್ಯರಾದರಷ್ಟೇ ಈ ಪಂದ್ಯ ಫುಲ್ ಜೋಶ್ ಹೊಂದಿರಲಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan

ಯಾರು ಬೇಕಾದರೂ ಸುಲಭವಾಗಿ ನಂದಿ ಬಟ್ಟಲು ಹೂವಿನಿಂದ ಸುಂದರ ಹಾರ ತಯಾಸಬಹುದು
ಹೊಸ ಸೇರ್ಪಡೆ

ಕಾರು – ಬಸ್ ನಡುವೆ ಭೀಕರ ಅಪಘಾತ; ನಾಲ್ವರು ಸ್ಥಳದಲ್ಲೇ ಸಾವು

ಸಿದ್ದು ಹೆಣವನ್ನು ನಾಯಿನೂ ಮೂಸುವುದಿಲ್ಲ, ಅದನ್ನು ನಾವು ಯಾಕೆ ಮುಟ್ಟಬೇಕು: ಈಶ್ವರಪ್ಪ

ಜಾಗತಿಕ ಆರ್ಥಿಕ ಅನಿಶ್ಚಿತತೆ ನಡುವೆಯೂ ಭಾರತದ ಬಜೆಟ್ ಮೇಲೆ ವಿಶ್ವದ ಚಿತ್ತ ನೆಟ್ಟಿದೆ; ಪ್ರಧಾನಿ ಮೋದಿ

ಕಾರ್ಕಳ: ಗೇರು ಬೀಜ ಫ್ಯಾಕ್ಟರಿಯಲ್ಲಿ ಲಾರಿ ಚಾಲಕನ ಕೊಲೆ

ಉಡುಪಿ ಸಂತೆಕಟ್ಟೆ: ವಿದ್ಯಾರ್ಥಿಗಳಿದ್ದ ಕಾರಿಗೆ ಲಾರಿ ಢಿಕ್ಕಿ; ಲಾರಿ ಸಹಿತ ಚಾಲಕ ಪರಾರಿ