ವರ್ಷದ ಏಕದಿನ ತಂಡ ಪ್ರಕಟಿಸಿದ ಐಸಿಸಿ: ಭಾರತೀಯರಿಗೆ ಸ್ಥಾನವಿಲ್ಲ! ಬಾಬರ್ ಗೆ ನಾಯಕತ್ವ
Team Udayavani, Jan 20, 2022, 2:30 PM IST
ದುಬೈ: ಐಸಿಸಿ ಯು 2021ರ ಸಾಲಿನ ವರ್ಷದ ಏಕದಿನ ತಂಡವನ್ನು ಪ್ರಕಟಿಸಿದೆ. ಟಿ20 ತಂಡದಂತೆ ಏಕದಿನ ತಂಡದಲ್ಲೂ ಯಾವುದೇ ಭಾರತೀಯರು ಸ್ಥಾನ ಪಡೆದಿಲ್ಲ. ಪಾಕಿಸ್ಥಾನ ತಂಡದ ನಾಯಕ ಬಾಬರ್ ಅಜಂಗೆ ಐಸಿಸಿ ನಾಯಕನ ಸ್ಥಾನ ನೀಡಿದೆ.
ಭಾರತ ಮಾತ್ರವಲ್ಲದೆ ಆಸ್ಟ್ರೇಲಿಯಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ನ್ಯೂಜಿಲ್ಯಾಂಡ್ ನ ಆಟಗಾರರಿಗೂ ಸ್ಥಾನ ಸಿಕ್ಕಿಲ್ಲ. ಬಾಂಗ್ಲಾದ ಮೂವರು, ಪಾಕಿಸ್ಥಾನ, ಐರ್ಲೆಂಡ್, ಶ್ರೀಲಂಕಾ, ದಕ್ಷಿಣ ಆಫ್ರಿಕಾದ ತಲಾ ಇಬ್ಬರು ಸ್ಥಾನ ಪಡೆದಿದ್ದಾರೆ.
ಆರಂಭಿಕರಾಗಿ ಪೌಲ್ ಸ್ಟರ್ಲಿಂಗ್ ಮತ್ತು ಜಾನೆಮನ್ ಮಲಾನ್ ಆಯ್ಕೆಯಾಗಿದ್ದಾರೆ. ಮೂರನೇ ಕ್ರಮಾಂಕದಲ್ಲಿ ನಾಯಕ ಬಾಬರ್ ಅಜಂ, ನಾಲ್ಕನೇ ಕ್ರಮಾಂಕದಲ್ಲಿ ಫಾಖರ್ ಜಮಾನ್ ಇದ್ದಾರೆ.
ಇದನ್ನೂ ಓದಿ:ವೆಂಕಟೇಶ್ ಅಯ್ಯರ್ ಗೆ ಯಾಕೆ ಬೌಲಿಂಗ್ ನೀಡಿಲ್ಲ?: ಕಾರಣ ಹೇಳಿದ ಧವನ್
ಮಧ್ಯಮ ಕ್ರಮಾಂಕದಲ್ಲಿ ರಸ್ಸಿ ವ್ಯಾನ್ ಡರ್ ಡ್ಯೂಸನ್ ಮತ್ತು ಶಕೀಬ್ ಅಲ್ ಹಸನ್ ಇದ್ದರೆ, ವಿಕೆಟ್ ಕೀಪರ್ ಆಗಿ ಮುಶ್ಫಿಕರ್ ರಹೀಂ ಆಯ್ಕೆಯಾಗಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ವಾನಿಂದು ಹಸರಂಗ, ಮುಸ್ತಫಿಜುರ್, ಸಿಮಿ ಸಿಂಗ್ ಮತ್ತು ದುಷ್ಮಂತ ಚಮೀರಾ ಐಸಿಸಿ ವರ್ಷದ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಐಸಿಸಿ ವರ್ಷದ ಏಕದಿನ ತಂಡ
ಪೌಲ್ ಸ್ಟರ್ಲಿಂಗ್
ಜಾನೆಮನ್ ಮಲಾನ್
ಬಾಬರ್ ಅಜಂ
ಫಾಖರ್ ಜಮಾನ್
ರಸ್ಸಿ ವ್ಯಾನ್ ಡರ್ ಡ್ಯೂಸನ್
ಶಕೀಬ್ ಅಲ್ ಹಸನ್
ಮುಶ್ಫಿಕರ್ ರಹೀಂ
ವಾನಿಂದು ಹಸರಂಗ
ಮುಸ್ತಫಿಜುರ್
ಸಿಮಿ ಸಿಂಗ್
ದುಷ್ಮಂತ ಚಮೀರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಭಾರಿ ಮಳೆ ಆತಂಕ : ಬೆಂಗಳೂರಿನ ಜಲಾವೃತ ಪ್ರದೇಶಗಳಿಗೆ ಸಿಎಂ ಭೇಟಿ
ದೇಶದಲ್ಲೇ ದಾಖಲೆ ಬರೆದ ನಾಯಕ ಬಸವರಾಜ್ ಹೊರಟ್ಟಿ: ಸಿಎಂ ಬಣ್ಣನೆ
ಬಂಟ್ವಾಳ: ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ಕಳ್ಳತನ; ಮೂವರ ಬಂಧನ, ಸೊತ್ತುಗಳು ವಶಕ್ಕೆ
ರಾಜೀವ್ ಹತ್ಯೆ ಪ್ರಕರಣ:ಜೀವಾವಧಿ ಶಿಕ್ಷೆಗೊಳಗಾಗಿದ್ದ ಪೆರಾರಿವಾಳನ್ ಬಿಡುಗಡೆಗೆ ಸುಪ್ರೀಂ ಆದೇಶ
ಮಲೆ ಬೆನ್ನೂರು: ಭಾರೀ ಮಳೆ-ಗಾಳಿಗೆ ಅಪಾರ ಬೆಳೆ ಹಾನಿ