ಚುನಾವಣೆ ಕಣಕ್ಕೆ ಬಾಂಗ್ಲಾ ಏಕದಿನ ನಾಯಕ ಮೊರ್ತಜ?
Team Udayavani, Nov 13, 2018, 6:10 AM IST
ಢಾಕಾ: ಬಾಂಗ್ಲಾದೇಶ ಏಕದಿನ ಕ್ರಿಕೆಟ್ ತಂಡದ ನಾಯಕ ಮಶ್ರಫೆ ಮೊರ್ತಜ ರಾಜಕೀಯ ಪ್ರವೇಶಿಸುವುದು ಖಚಿತವಾಗಿದೆ.
ಹೀಗಾದರೆ ಬಾಂಗ್ಲಾದ ತಾರಾ ವೇಗಿ ಕ್ರಿಕೆಟ್ಗೆ ನಿವೃತ್ತಿ ಘೋಷಿಸುವುದೂ ಖಚಿತವಾಗಲಿದೆ. ಡಿಸೆಂಬರ್ನಲ್ಲಿ ಬಾಂಗ್ಲಾದ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಸದ್ಯ ಆಡಳಿತರೂಢ ಪಕ್ಷವಾಗಿರುವ ಶೇಖ್ ಹಸೀನಾ ನಾಯಕತ್ವದ ಅವಾಮಿ ಲೀಗ್ ಪರವಾಗಿ ಮೊರ್ತಜ ಕಣಕ್ಕಿಳಿಯಲಿದ್ದಾರೆ ಎಂದು ಮೂಲಗಳು ಹೇಳಿವೆ. ತಮ್ಮ ಸ್ವಂತ ಜಿಲ್ಲೆ ನರೈಲ್ನಿಂದ ಬಾಂಗ್ಲಾ ಏಕದಿನ ತಂಡದ ನಾಯಕ ಸ್ಪರ್ಧಿಸಲಿದ್ದಾರೆಂದು ಹೇಳಿದ್ದರೂ, ಇದನ್ನು ಸ್ವತಃ ಮೊರ್ತಜ ಖಚಿತಪಡಿಸಿಲ್ಲ.