ಮೊದಲ ಅಂತಾರಾಷ್ಟ್ರೀಯ ಪಂದ್ಯವಾಡಿದ ಬಾರ್ಬಡಾಸ್ ವಿರುದ್ಧ ಸೋತ ಪಾಕಿಸ್ಥಾನ
Team Udayavani, Jul 30, 2022, 10:21 AM IST
ಎಜ್ ಬಾಸ್ಟನ್: ತನ್ನ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವಾಡಿದ ಬಾರ್ಬಡಾಸ್ ದೇಶದ ವನಿತಾ ತಂಡವು ಕಾಮನ್ವೆಲ್ತ್ ಕೂಟದಲ್ಲಿ ಪಾಕಿಸ್ಥಾನ ವಿರುದ್ಧ ಗೆಲುವು ಸಾಧಿಸಿದೆ. ಎಜ್ ಬಾಸ್ಟನ್ ಮೈದಾನದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಬಾರ್ಬಡಾಸ್ ತಂಡ 15 ರನ್ ಅಂತರದಲ್ಲಿ ಗೆಲುವು ಕಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಬಾರ್ಬಡಾಸ್ ತಂಡ ನಾಲ್ಕು ವಿಕೆಟ್ ಕಳೆದುಕೊಂಡು 144 ರನ್ ಗಳಿಸಿತು. ಗುರಿ ಬೆನ್ನತ್ತಿದ ಪಾಕಿಸ್ಥಾನ 20 ಓವರ್ ಗಳಲ್ಲಿ ಆರು ವಿಕೆಟ್ ಕಳೆದುಕೊಂಡು 129 ರನ್ ಮಾತ್ರ ಮಾಡಲು ಶಕ್ತವಾಯಿತು.
ಕಾಮನ್ವೆಲ್ತ್ ಗೇಮ್ಸ್ ನಲ್ಲಿ ವೆಸ್ಟ್ ಇಂಡೀಸ್ ನ್ನು ಪ್ರತಿನಿಧಿಸುತ್ತಿರುವ ಬಾರ್ಬಡಾಸ್ ತಂಡಕ್ಕೆ ನಾಯಕಿ ಹೇಲಿ ಮ್ಯಾಥ್ಯೂಸ್ 51 ರನ್ ಮತ್ತು ವಿಕೆಟ್ ಕೀಪರ್ ನೈಟ್ 62 ರನ್ ಗಳಿಸಿ ನೆರವಾದರು.
ಇದನ್ನೂ ಓದಿ:ಟೀಂ ಇಂಡಿಯಾ ಸಂಘಟಿತ ಪ್ರದರ್ಶನ: ಮೊದಲ ಟಿ20 ಪಂದ್ಯದಲ್ಲಿ ಗೆಲುವು
ಪಾಕ್ ಪರ ನಿದಾ ದರ್ ಹೊರತು ಪಡಿಸಿ ಉಳಿದ್ಯಾರು ಬ್ಯಾಟಿಂಗ್ ಬಲ ನೀಡಲಿಲ್ಲ. ಅಜೇಯ ಆಟವಾಡಿದ ನಿದಾ 50 ರನ್ ಗಳಿಸಿದರೆ, ನಂತರದ ಗರಿಷ್ಠ ಗಳಿಕೆ ಇತರೆ ರನ್ ಗಳದ್ದು ( 19 ರನ್ ಎಕ್ಸ್ಟ್ರಾ)
ಬಾರ್ಬಡಾಸ್ ಮುಂದಿನ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಮತ್ತು ಪಾಕಿಸ್ಥಾನ ಮುಂದಿನ ಪಂದ್ಯವನ್ನು ಭಾರತದ ವಿರುದ್ಧ ಆಡಲಿದೆ.