ಬಾರ್ಟಿ ಕ್ವಾರ್ಟರ್‌ ಫೈನಲ್‌ಗೆೆ, ಗಾಫ್ ಮನೆಗೆ

Team Udayavani, Jan 27, 2020, 12:36 AM IST

ಆಸ್ಟ್ರೇಲಿಯನ್‌ ಓಪನ್‌ ವನಿತಾ ಸಿಂಗಲ್ಸ್‌ನಲ್ಲಿ ವಿಶ್ವದ ನಂ.1 ಆಟಗಾರ್ತಿ, ತವರಿನ ಆ್ಯಶ್ಲಿ ಬಾರ್ಟಿ ಕ್ವಾರ್ಟರ್‌ ಫೈನಲ್‌ಗೆ ಓಟ ಬೆಳೆಸಿದ್ದಾರೆ. ಆದರೆ ಹಾಲಿ ಚಾಂಪಿಯನ್‌ ನವೋಮಿ ಒಸಾಕಾಗೆ ಸೋಲುಣಿಸಿದ ಅಮೆರಿಕದ 15ರ ತಾರೆ ಕೋಕೊ ಗಾಫ್ ಅವರ ಓಟ 16ರ ಸುತ್ತಿನಲ್ಲಿ ಕೊನೆಗೊಂಡಿದೆ.

ಆ್ಯಶ್ಲಿ ಬಾರ್ಟಿ ಅಮೆರಿಕದ ಅಲಿಸನ್‌ ರಿಸ್ಕೆ ವಿರುದ್ಧ 3 ಸೆಟ್‌ಗಳ ಹೋರಾಟ ನಡೆಸಿ 6-3, 1-6, 6-4 ಅಂತರದ ಗೆಲುವು ಸಾಧಿಸಿದರು. ಬಾರ್ಟಿ ಅವರ ಮುಂದಿನ ಎದುರಾಳಿ, ಎರಡು ಬಾರಿಯ ವಿಂಬಲ್ಡನ್‌ ಚಾಂಪಿಯನ್‌ ಪೆಟ್ರಾ ಕ್ವಿಟೋವಾ. ಇನ್ನೊಂದು ಪ್ರಿ-ಕ್ವಾರ್ಟರ್‌ ಫೈನಲ್‌ನಲ್ಲಿ ಕ್ವಿಟೋವಾ ಗ್ರೀಸ್‌ನ ಮರಿಯಾ ಸಕ್ಕರಿ ವಿರುದ್ಧ 6-7 (4-7), 6-3, 6-2 ಅಂತರದ ಗೆಲುವು ಕಂಡರು.

ಒಸಾಕಾ ವಿರುದ್ಧ ಭಾರೀ ಜೋಶ್‌ ತೋರಿದ್ದ ಕೋಕೊ ಗಾಫ್ ಅವರನ್ನು ಅಮೆರಿಕದವರೇ ಆದ ಸೋಫಿಯಾ ಕೆನಿನ್‌ 6-7 (5-7), 6-3, 6-0 ಅಂತರದಿಂದ ಪರಾಭವಗೊಳಿಸಿದರು. ಕೆನಿನ್‌ ಅವರಿನ್ನು ಟ್ಯುನೀಶಿಯಾದ ಒನ್ಸ್‌ ಜೇಬರ್‌ ವಿರುದ್ಧ ಆಡಲಿದ್ದಾರೆ. ಜೇಬರ್‌ 7-6 (7-4), 6-1ರಿಂದ ಚೀನದ ವಾಂಗ್‌ ಕ್ವಿಯಾಂಗ್‌ ಆಟಕ್ಕೆ ತೆರೆ ಎಳೆದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ