ಗೇಮ್ಸ್ ಕ್ರೀಡಾಂಗಣದಲ್ಲೇ ಪ್ರೇಮ ನಿವೇದನೆ!
Team Udayavani, Apr 10, 2018, 6:55 AM IST
ಇಂಗ್ಲೆಂಡಿನ ಬಾಸ್ಕೆಟ್ಬಾಲ್ ಆಟಗಾರನೊಬ್ಬ ಅಂಕಣದಲ್ಲೇ ತನ್ನ ಗೆಳತಿಗೆ ಮದುವೆ ಪ್ರಾಸ್ತಾವಿಸಿ ಆಕೆಯನ್ನು ದಂಗುಬಡಿಸಿರುವ ಘಟನೆ ಗೋಲ್ಡ್ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್ ವೇಳೆ ನಡೆದಿದೆ. ಖುಷಿಯ ವಿಚಾರವೆಂದರೆ, ಹುಡುಗಿ ಈ ಪ್ರಾಸ್ತಾವವನ್ನು ಒಪ್ಪಿಕೊಳ್ಳುವ ಮೂಲಕ ಸಂದರ್ಭವನ್ನು ತಿಳಿಯಾಗಿಸಿದ್ದಾಳೆ. ಇಂಗ್ಲೆಂಡ್ ತಂಡದ ಆಟಗಾರ್ತಿಯಾಗಿರುವ ಜಾರ್ಜಿಯಾ ಬಾಸ್ಕೆಟ್ಬಾಲ್ ಕೋರ್ಟ್ ಬಳಿ ನಿಂತಿದ್ದಾಗ ಆ್ಯಂಡರ್ಸನ್ ತನ್ನ ಸಹ ಆಟಗಾರರೊಂದಿಗೆ ಬಂದು, ಮಂಡಿಯೂರಿ ಜೋನ್ಸ್ಗೆ ಪ್ರಪೋಸ್ ಮಾಡಿದರು; ಮದುವೆ ಪ್ರಾಸ್ತಾವಿಸಿ ಎಂಗೇಜ್ಮೆಂಟ್ ರಿಂಗ್ ಕೂಡ ತೊಡಿಸಿ ಬಿಟ್ಟರು. ಈ ಹಿಂದೆ ಒಲಿಂಪಿಕ್ಸ್ ವೇಳೆ ಪದಕ ವಿಜೇತ ಆಟಗಾರ್ತಿಗೆ ಆಟಗಾರನೊಬ್ಬ ಕ್ರೀಡಾಂಗಣದಲ್ಲಿ ಪ್ರೇಮ ನಿವೇದನೆ ಮಾಡಿದ್ದನ್ನು ಸ್ಮರಿಸಬಹುದು.