Bill pending: ಹೈದರಾಬಾದ್ ಸ್ಟೇಡಿಯಂನ ವಿದ್ಯುತ್ ಕಡಿತ!
Team Udayavani, Apr 6, 2024, 12:29 AM IST
ಹೈದರಾಬಾದ್: ಮೂರು ಕೋಟಿ ರೂ. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡ ಕಾರಣ, ಇಲ್ಲಿನ ರಾಜೀವ್ ಗಾಂಧಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುರುವಾರ ವಿದ್ಯುತ್ ಕಡಿತ ಮಾಡಿರುವ ಬಗ್ಗೆ ವರದಿಯಾಗಿದೆ.
ಹೈದರಾಬಾದ್-ಚೆನ್ನೈ ನಡುವಿನ ಪಂದ್ಯದ ಮುನ್ನಾ ದಿನವಾದ ಗುರುವಾರ, ಇಲ್ಲಿನ ತೆಲಂಗಾಣ ಸದರ್ನ್ ಪವರ್ ಡಿಸ್ಟ್ರಿಬ್ಯೂಶನ್ ಲಿಮಿಟೆಡ್ ಕಂಪೆನಿ, ಏಕಾಏಕಿ ಸ್ಟೇಡಿಯಂಗೆ ಕಲ್ಪಿಸಿದ್ದ ವಿದ್ಯುತ್ ಸಂಪರ್ಕ ಕಡಿತಗೊಳಿಸಿತು. ಇದರಿಂದ, ಪಂದ್ಯಕ್ಕೆ ತಯಾರಿಗೆ ಅಡಚಣೆಯಾಯಿತು. ಕೋರ್ಟ್ ಮಧ್ಯಪ್ರವೇಶಿಸಿದ ಬಳಿಕ, ಸ್ಟೇಡಿಯಂ ಆಡಳಿತ ಮಂಡಳಿಗೆ ಪತ್ರ ಬರೆದಿದ್ದ ವಿದ್ಯುತ್ ವಿತರಣ ಕಂಪೆನಿ, 1.63 ಕೋಟಿ ರೂ.ವನ್ನಾದರೂ ಪಾವತಿಸುವಂತೆ ಹೇಳಿತ್ತು. ಅರ್ಧ ಹಣ ಪಾವತಿಸಿದ ಬಳಿಕ, ಕೋರ್ಟ್ ನಿರ್ದೇಶನದಂತೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಹೀಗಾಗಿ ಚೆನ್ನೈ-ಹೈದರಾಬಾದ್ ನಡುವಿನ ಪಂದ್ಯ ಸುಸೂತ್ರವಾಗಿ ನಡೆದಿದೆ.