ವಿಲ್ಲೀಸ್‌ ಒಡನಾಟ ಸ್ಮರಿಸಿದ ಕಪಿಲ್‌ ಡೆವಿಲ್ಸ್‌

ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ಮಾಜಿ ನಾಯಕನ ನಿಧನಕ್ಕೆ ಭಾರತ ಶೋಕ

Team Udayavani, Dec 5, 2019, 11:11 PM IST

BOB-WILLIS

ಹೊಸದಿಲ್ಲಿ: “ಭಾರತವೊಂದು ಅಡ್ಡಿಯಾಗದೇ ಇರುತ್ತಿದ್ದಲ್ಲಿ 1983ರ ತವರಿನ ಕೂಟದಲ್ಲೇ ನಾವು ವಿಶ್ವಕಪ್‌ ಗೆಲ್ಲುತ್ತಿದ್ದೆವು’ ಎಂದು ಕ್ರೀಡಾಸ್ಫೂರ್ತಿಯಿಂದ ಪ್ರತಿಕ್ರಿಯಿಸಿದ ಇಂಗ್ಲೆಂಡಿನ ಮಾಜಿ ನಾಯಕ ಹಾಗೂ ವೇಗದ ಬೌಲರ್‌ ಬಾಬ್‌ ವಿಲ್ಲೀಸ್‌ ಬದುಕಿನ ಕ್ರಿಕೆಟನ್ನು ಮುಗಿಸಿದ್ದಾರೆ.

ಮೇ ತಿಂಗಳಲ್ಲಷ್ಟೇ 70 ವರ್ಷ ಪೂರ್ತಿಗೊಳಿಸಿದ ವಿಲ್ಲೀಸ್‌ ನಿರಂತರವಾಗಿ ಕಾಡುತ್ತಿದ್ದ ಅನಾರೋಗ್ಯದಿಂದ ಬುಧವಾರ ನಿಧನ ಹೊಂದಿದರು. ಈ ಸಂದರ್ಭದಲ್ಲಿ 1983ರ ವಿಶ್ವಕಪ್‌ ವಿಜೇತ ಭಾರತ ತಂಡದ ಸದಸ್ಯರನೇಕರು ವಿಲ್ಲೀಸ್‌ ವಿರುದ್ಧ ಆಡಿದ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟಿದ್ದಾರೆ.

ವಿಲ್ಲೀಸ್‌ ವರ್ಸಸ್‌ ಪಾಟೀಲ್‌
ಬಾಬ್‌ ವಿಲ್ಲೀಸ್‌ ಮೇಲಿನ ಮಾತನ್ನಾಡಿದ್ದು ಮೊನ್ನೆ ಇಂಗ್ಲೆಂಡ್‌ ಮೊದಲ ವಿಶ್ವಕಪ್‌ ಕ್ರಿಕೆಟ್‌ ಗೆದ್ದು ಸಂಭ್ರಮಿಸಿದಾಗ. 1983ರ ಪ್ರುಡೆನ್ಶಿಯಲ್‌ ವಿಶ್ವಕಪ್‌ ವೇಳೆ ವಿಲ್ಲೀಸ್‌ ನಾಯಕತ್ವದಲ್ಲಿ ಕಣಕ್ಕಿಳಿದಿದ್ದ ಇಂಗ್ಲೆಂಡ್‌, ಸೆಮಿಫೈನಲ್‌ನಲ್ಲಿ ಭಾರತಕ್ಕೆ ಶರಣಾಗಿ ಕೂಟದಿಂದ ನಿರ್ಗಮಿಸಿತ್ತು. ಈ ಪಂದ್ಯದ ಹೀರೋ ಆಗಿ ಮೆರೆದವರು ಸಂದೀಪ್‌ ಪಾಟೀಲ್‌.

ರನ್‌ ಚೇಸಿಂಗ್‌ ವೇಳೆ ವಿಲ್ಲೀಸ್‌ ಓವರ್‌ ಒಂದರಲ್ಲಿ ಪಾಟೀಲ್‌ ಸತತ 4 ಬೌಂಡರಿ ಬಾರಿಸಿದ್ದು ಆ ಕಾಲಕ್ಕೆ ದೊಡ್ಡ ಸುದ್ದಿ. ಕೊನೆಯಲ್ಲಿ ವಿಲ್ಲೀಸ್‌ ಓವರಿನಲ್ಲೇ ಪಾಟೀಲ್‌ ಗೆಲುವಿನ ಹೊಡೆತ ಬಾರಿಸುವ ಸಂದರ್ಭದಲ್ಲಿ, ವಿಲ್ಲೀಸ್‌ ಎಲ್ಲ ಫೀಲ್ಡರ್‌ಗಳನ್ನು ಸರ್ಕಲ್‌ ಒಳಕ್ಕೆ ಕರೆದು ಸರಾಗ ಬೌಂಡರಿಗೆ ಹಾದಿ ಮಾಡಿ ಕೊಟ್ಟಿದ್ದರು. ಇದಕ್ಕೂ ಮುನ್ನ 1982ರ ಓಲ್ಡ್‌ ಟ್ರಾಫ‌ರ್ಡ್‌ ಟೆಸ್ಟ್‌ನಲ್ಲಿ ವಿಲ್ಲೀಸ್‌ ಅವರ ಒಂದೇ ಓವರಿನಲ್ಲಿ ಸತತ 6 ಬೌಂಡರಿ ಬಾರಿಸಿದ ಹಿರಿಮೆಯೂ ಸಂದೀಪ್‌ ಪಾಟೀಲ್‌ ಅವರದಾಗಿತ್ತು.

“ವಿಲ್ಲೀಸ್‌ ನಿಧನದ ಸುದ್ದಿ ತಿಳಿದು ಬಹಳ ದುಃಖವಾಗಿದೆ. ಅಂಗಳದಲ್ಲಿ ಅವರೋರ್ವ ದಿಟ್ಟ ಹೋರಾಟಗಾರ. ಅಂಗಳದಾಚೆ ಅಪ್ಪಟ ಜಂಟ್ಲ ಮನ್‌. ಅವರ ಓವರಿನಲ್ಲಿ ನಾನು ಸತತ 6 ಬೌಂಡರಿ ಹೊಡೆದದ್ದು ಕೇವಲ ಆಕಸ್ಮಿಕ. ಆಗ ಜನರೆಲ್ಲ ಆ ಒಂದು ಓವರಿನಿಂದಲೇ ವಿಲ್ಲೀಸ್‌ ಅವರನ್ನು ಟೀಕಿಸುತ್ತಿದ್ದಾಗ ಬೇಸರವಾಗುತ್ತಿತ್ತು. ಅವರ ವೇಗದ ಬೌಲಿಂಗಿಗೆ ನಾನು ಅಪಾರ ಗೌರವ ಕೊಟ್ಟಿದ್ದೇನೆ. ಅವರನ್ನು ಎದುರಿಸುವುದು ಅಷ್ಟು ಸುಲಭವಾಗಿರಲಿಲ್ಲ’ ಎಂದು ಸಂದೀಪ್‌ ಪಾಟೀಲ್‌ ಪ್ರತಿಕ್ರಿಯಿಸಿದ್ದಾರೆ. ಜತೆಗೆ, ವಿಶ್ವಕಪ್‌ ಫೈನಲ್‌ ಪಂದ್ಯದ ವೇಳೆ ಅಂಗಳಕ್ಕಿಳಿಯುವಾಗ, ವಿಲ್ಲೀಸ್‌ ಎಸೆತಗಳಿಗೆ ಸತತ ಬೌಂಡರಿ ಬಾರಿಸಿದ ಸಾಧನೆಗಾಗಿ ವಿವಿಯನ್‌ ರಿಚರ್ಡ್ಸ್‌ ತನಗೆ ಹಸ್ತಲಾಘವ ಮಾಡಿ ಅಭಿನಂದಿಸಿದ್ದನ್ನೂ ಪಾಟೀಲ್‌ ನೆನಪಿಸಿಕೊಂಡರು.

ಕಪಿಲ್‌ಗೆ “ಬಡಿದದ್ದು’ ವಿಲ್ಲೀಸ್‌ ಮಾತ್ರ!
“ನಾನು ಕ್ರಿಕೆಟ್‌ ಬದುಕಿನಲ್ಲಿ ಚೆಂಡಿನಿಂದ ಹೊಡೆಸಿ ಕೊಂಡದ್ದು ಒಮ್ಮೆ ಮಾತ್ರ. ಅದು ಬಾಬ್‌ ವಿಲ್ಲೀಸ್‌ ಎಸೆತ ವಾಗಿತ್ತು’ ಎಂದವರು ಮಾಜಿ ಕಪ್ತಾನ ಕಪಿಲ್‌ದೇವ್‌.

“ಇಂಗ್ಲೆಂಡ್‌ನ‌ಲ್ಲಿ ನಡೆದ ಟೆಸ್ಟ್‌ ವೇಳೆ ವಿಲ್ಲೀಸ್‌ ಶಾರ್ಟ್‌ಪಿಚ್‌ ಎಸೆತವಿಕ್ಕಿದ್ದರು. ಊಹಿಸಿದ್ದಕ್ಕಿಂತಲೂ ವೇಗದ ಎಸೆತ ಅದಾಗಿತ್ತು. ನಾನು ನಟರಾಜ ಶಾಟ್‌ಗೆ ಮುಂದಾಗಿದ್ದೆ. ಆದರೆ ಚೆಂಡು ನನ್ನ ಕಿವಿಗೆ ಬಡಿಯಿತು. ಬ್ಯಾಟಿಂಗ್‌ ವೇಳೆ ನಾನು ಚೆಂಡಿನ ಹೊಡೆತ ತಿಂದದ್ದು ಈ ಒಂದು ಸಂದರ್ಭದಲ್ಲಿ ಮಾತ್ರ’ ಎಂದು ಕಪಿಲ್‌ ನೆನಪಿಸಿಕೊಂಡರು.

“ವಿಲ್ಲೀಸ್‌ ಓರ್ವ ಘಾತಕ ವೇಗಿ. ಅವರದು ಅದ್ಭುತವಾದ ಸುದೀರ್ಘ‌ ರನ್‌ಅಪ್‌. ಚೆಂಡು ಅವರ ಕೈಯಿಂದ ಚಿಮ್ಮಿತೆಂದರೆ ಬ್ಯಾಟ್ಸ್‌ಮನ್‌ ಪಾಲಿಗೆ ಅದೊಂದು ಭಯಾನಕ ಕ್ಷಣವಾಗಿರುತ್ತಿತ್ತು. ಅವರೆಂದೂ ಬ್ಯಾಟ್ಸ್‌ ಮನ್‌ಗಳನ್ನು ದುರುಗುಟ್ಟಿ ನೋಡಿದವರಲ್ಲ, ಅಂಪಾಯರ್‌ ಬಳಿ ವಾದಿಸಿ ದವರಲ್ಲ. ಅವರಿಗೆ ಮಾತಿನಲ್ಲಿ ನಂಬಿಕೆ ಇರಲಿಲ್ಲ. ಬದಲಿಗೆ, ಚೆಂಡೇ ಮಾತಾ ಡಬೇಕೆಂದು ಬಯಸುತ್ತಿದ್ದರು. ವಿಲ್ಲೀಸ್‌ ನಿಜವಾದ ಲೆಜೆಂಡ್‌’ ಎಂದು ಕಪಿಲ್‌ ಅಗಲಿದ ಸಮಕಾಲೀನ ವೇಗಿಗೆ ನುಡಿನಮನ ಸಲ್ಲಿಸಿದ್ದಾರೆ.

“ಕೆರಿಬಿಯನ್‌ ಶೈಲಿಯ ಬೌಲರ್‌’
ವೇಗದಲ್ಲಿ ಬಾಬ್‌ ವಿಲ್ಲೀಸ್‌ ವೆಸ್ಟ್‌ ಇಂಡೀಸಿನ ಮೈಕಲ್‌ ಹೋಲ್ಡಿಂಗ್‌, ಮಾಲ್ಕಂ ಮಾರ್ಷಲ್‌ಗೆ ಸರಿಸಮನಾದ ಬೌಲರ್‌ ಎಂದು ರೇಟಿಂಗ್‌ ಕೊಟ್ಟವರು ವಿಶ್ವಕಪ್‌ ವಿಜೇತ ತಂಡದ ಮತ್ತೂಬ್ಬ ಆಟಗಾರ ಯಶ್ಪಾಲ್‌ ಶರ್ಮ. “ಪಿಚ್‌ ಸಹಕರಿಸಿದ್ದೇ ಆದರೆ ವಿಲ್ಲೀಸ್‌ ನಿಜಕ್ಕೂ ಭಯಾನಕ. ಅವರು ಯಾರಿಗೂ ನಿರಾಳವಾಗಿರಲು ಆಸ್ಪದವನ್ನೇ ಕೊಟ್ಟವರಲ್ಲ. ಅಂಗಳದಲ್ಲಿ ಮಹಾಮೌನಿ. ಅವರ ಎಸೆತಗಳೇ ಎಲ್ಲವನ್ನೂ ಮಾತಾಡುತ್ತಿದ್ದವು’ ಎಂದು ಯಶ್ಪಾಲ್‌ ಹೇಳಿದರು.

ಬಾಬ್‌ ವಿಲ್ಲೀಸ್‌ ರಚಿಸಿದ ಡ್ರೀಮ್‌ ಇಲೆವೆನ್‌
ತನ್ನ ಸಮಕಾಲೀನ ಕ್ರಿಕೆಟ್‌ ಸಾಧಕರನ್ನೊಳಗೊಂಡ “ಕನಸಿನ ಟೆಸ್ಟ್‌’ ತಂಡವೊಂದನ್ನು ಬಾಬ್‌ ವಿಲ್ಲೀಸ್‌ ರಚಿಸಿದ್ದರು. ಅದು ಹೀಗಿದೆ: ಬ್ಯಾರಿ ರಿಚರ್ಡ್ಸ್‌, ಸುನೀಲ್‌ ಗಾವಸ್ಕರ್‌, ವಿವಿಯನ್‌ ರಿಚರ್ಡ್ಸ್‌, ಗ್ರೆಗ್‌ ಚಾಪೆಲ್‌, ಜಾವೇದ್‌ ಮಿಯಾಂದಾದ್‌, ಇಯಾನ್‌ ಬೋಥಂ, ಅಲನ್‌ ನಾಟ್‌, ರಾಡ್ನಿ ಮಾರ್ಷ್‌, ಮಾಲ್ಕಂ ಮಾರ್ಷಲ್‌, ಡೆನ್ನಿಸ್‌ ಲಿಲ್ಲಿ, ಡೆರೆಕ್‌ ಅಂಡರ್‌ವುಡ್‌.

ಬಾಬ್‌ ವಿಲ್ಲೀಸ್‌ ಸಾಧನೆ
ಟೆಸ್ಟ್‌: 90
ವಿಕೆಟ್‌: 325
ಅತ್ಯುತ್ತಮ: 43ಕ್ಕೆ 8
ಏಕದಿನ: 64
ವಿಕೆಟ್‌: 80
ಅತ್ಯುತ್ತಮ: 11ಕ್ಕೆ 4

ಟಾಪ್ ನ್ಯೂಸ್

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

1-qeweqweqwe

IPL; ಹೈದರಾಬಾದ್ ಎದುರು ಚೆನ್ನೈ ಗೆ 78 ರನ್‌ಗಳ ಅಮೋಘ ಜಯ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.